VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 20, 2010

ಸಹಸ್ರ ಸಂಖ್ಯೆಯಲ್ಲಿ ಬಂದ ಜನ ಸಾಗರ...

ಬಸು ಕರ್ಮಭೂಮಿ ಕೋಲ್ಕತ್ತದಲ್ಲಿ ಅವರ ಮೃತ ದೇಹ ಅಂತಿಮ ಯಾತ್ರೆಯಲ್ಲಿ ಸಾಗಿದಾಗ ‘ಕಾಮ್ರೇಡ್ ಚಿರಾಯುವಾಗಲಿ’, ‘ಜ್ಯೋತಿ ಬಸು ಅಮರ್ ರಹೇ’ ಎಂಬ ಜೈಕಾರಗಳು ಮುಗಿಲು ಮುಟ್ಟಿದವು. ಹಿರಿಯ ಕಮ್ಯುನಿಸ್ಟ್ ನಾಯಕರು, ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಮುಷ್ಠಿ ಮುಚ್ಚಿ, ಕೈ ಮೇಲಕ್ಕೆತ್ತಿ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.

ಪಶ್ಚಿಮಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಎಂ ಮುಖಂಡ ಜ್ಯೋತಿಬಸು ಅವರ ಪಾರ್ಥಿವ ಶರೀರಕ್ಕೆ ಮಂಗಳವಾರ ಕೋಲ್ಕತ್ತದಲ್ಲಿ ಕಮ್ಯೂನಿಸ್ಟ್ ಮುಖಂಡರು ಲಾಲ್ ಸಲಾಂ ಸಲ್ಲಿಸುವ ಮೂಲಕ ವಿದಾಯ ಹೇಳಿದರು.

ಕೋಲ್ಕತ್ತ (ಪಿಟಿಐ): ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ, ಅವರ ಸಂಪುಟ ಸಹೋದ್ಯೋಗಿಗಳು, ಆ ದೇಶದ ಮಾಜಿ ಅಧ್ಯಕ್ಷ ಎಚ್. ಎಂ. ಇರ್ಷಾದ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹಲವು ಗಣ್ಯರು ಅಗಲಿದ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಅವರಿಗೆ ಮಂಗಳವಾರ ಅಂತಿಮ ನಮನ ಸಲ್ಲಿಸಿದರು.

ತಮ್ಮ ನಾಲ್ವರು ಸಚಿವರ ಜತೆ 30 ಜನರ ನಿಯೋಗದೊಂದಿಗೆ ವಿಶೇಷ ವಿಮಾನದಲ್ಲಿ ಶೇಖ್ ಹಸೀನಾ ಆಗಮಿಸಿದ್ದರು. (ಬಸು ಅವರ ಹುಟ್ಟೂರು ಈಗಿನ ಢಾಕಾ ಜಿಲ್ಲೆಯಲ್ಲಿ ಇದೆ)

ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಉಪ ರಾಷ್ಟ್ರಪತಿ ಹಮೀದ್ ಅನ್ಸರಿ ಅವರ ಪರವಾಗಿಯೂ ಬಸು ಅವರಿಗೆ ಹೂಹಾರ ಸಲ್ಲಿಸಲಾಯಿತು.

ವೆನೆಜುವೆಲಾ ಅಧ್ಯಕ್ಷ ಹ್ಯೂಗೊ ಷಾವೆಜ್ ಪರವಾಗಿ ಆ ದೇಶದ ರಾಯಭಾರಿ ಹೂಹಾರ ಇಟ್ಟರು. ಚೀನಾ, ಭೂತಾನ್‌ದ ರಾಜತಾಂತ್ರಿಕರು ಸಹ ಬಸು ಅವರಿಗೆ ಗೌರವ ಸಲ್ಲಿಸಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅಂತಿಮ ಗೌರವ ಸಲ್ಲಿಸಲು ಕೋಲ್ಕತ್ತಕ್ಕೆ ಬಂದಿಳಿದಿದ್ದರು.

ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಎನ್‌ಸಿಪಿಯ ಶರದ್ ಪವಾರ್, ಜೆಡಿಯು ಅಧ್ಯಕ್ಷ ಶರದ್ ಯಾದವ್, ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್, ಟಿಡಿಪಿಯ ಚಂದ್ರಬಾಬು ನಾಯ್ಡು, ಲೋಕಸಭೆ ಮಾಜಿ ಸ್ಪೀಕರ್ ಬಹು ಅವರ ದೀರ್ಘ ಕಾಲದ ಒಡನಾಡಿ ಸೋಮನಾಥ್ ಚಟರ್ಜಿ ಸಹ ಅಂತಿಮ ನಮನ ಸಲ್ಲಿಸಿದರು.

ಬಸು ಅವರ ಸಾವು ದೇಶದ ರಾಜಕೀಯದಲ್ಲಿ ಶೂನ್ಯ ಸೃಷ್ಟಿಸಿದೆ. ಅವರ ಸಾವು ದೇಶಕ್ಕಾದ ನಷ್ಟ ಎಂದು ಮಾಜಿ ಪ್ರಧಾನಿ ದೇವೇಗೌಡ ಪ್ರತಿಕ್ರಿಯೆ ನೀಡಿದರು.

ಸಾವು: ಜ್ಯೋತಿ ಬಸು ಸಾವಿನಿಂದ ಆಘಾತಕ್ಕೊಳಗಾದ ತ್ರಿಪುರ ನಿವಾಸಿಯೊಬ್ಬರು ಹೃದಯಾಘಾತದಿಂದ ಮೃತರಾಗಿದ್ದಾರೆ.
ಸಿಪಿಎಂ ಕಾರ್ಯಕರ್ತರಾಗಿದ್ದ 45 ವರ್ಷದ ನಂದನ್ ಚಕ್ರವರ್ತಿ ಬಸು ಸಾವಿನ ಸುದ್ದಿ ಕೇಳಿದ ತಕ್ಷಣ ಭಾನುವಾರ ಹೃದಯಾಘಾತಕ್ಕೆ ಒಳಗಾಗಿದ್ದರು. ಸೋಮವಾರ ರಾತ್ರಿ ಅವರು ನಿಧನರಾಗಿದ್ದಾರೆ.

ಉಚಿತ ಚಿಕಿತ್ಸೆ: ಜ್ಯೋತಿ ಬಸು ಅವರು 17 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದ ಎಎಂಆರ್‌ಐ ಆಸ್ಪತ್ರೆ ಅವರಿಗೆ ನೀಡಿದ ಚಿಕಿತ್ಸೆಗಾಗಿ ಶುಲ್ಕ ಪಡೆಯದಿರಲು ನಿರ್ಧರಿಸಿದೆ.

ಮುಗಿಲು ಮುಟ್ಟಿದ ಘೋಷಣೆ: ಬಸು ಕರ್ಮಭೂಮಿ ಕೋಲ್ಕತ್ತದಲ್ಲಿ ಅವರ ಮೃತ ದೇಹ ಅಂತಿಮ ಯಾತ್ರೆಯಲ್ಲಿ ಸಾಗಿದಾಗ ‘ಕಾಮ್ರೇಡ್ ಚಿರಾಯುವಾಗಲಿ’, ‘ಜ್ಯೋತಿ ಬಸು ಅಮರ್ ರಹೇ’ ಎಂಬ ಜೈಕಾರಗಳು ಮುಗಿಲು ಮುಟ್ಟಿದವು. ಹಿರಿಯ ಕಮ್ಯುನಿಸ್ಟ್ ನಾಯಕರು, ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕಾರ್ಯಕರ್ತರು ಮುಷ್ಠಿ ಮುಚ್ಚಿ, ಕೈ ಮೇಲಕ್ಕೆತ್ತಿ ಅಗಲಿದ ನಾಯಕನಿಗೆ ಗೌರವ ಸಲ್ಲಿಸಿದರು.

ಬಸು ಅವರಿಗೆ ಅಂತಿಮ ಗೌರವ ಸಲ್ಲಿಸಲು ರಾತ್ರಿಯಿಂದಲೇ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು. ಕೆಲವರು ದುಖ ತಾಳಲಾರದೇ ಕುಸಿದುಬಿದ್ದರು, ಮತ್ತೆ ಕೆಲವರು ಮೌನವಾಗಿ ಕಂಬನಿ ಮಿಡಿದರು.

ಜ್ಯೋತಿ ಬಸು ಬರುತ್ತಿದ್ದಾರೆ ಎಂದರೆ ಪಶ್ಚಿಮ ಬಂಗಾಳದ ಯಾವುದೇ ಮೂಲೆಯಲ್ಲೂ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಅವರ ಅಂತಿಮ ಪಯಣವೂ ಇದಕ್ಕೆ ಹೊರತಾಗಿರಲಿಲ್ಲ.

prajavani

No comments: