VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 20, 2010

ಹೊರಟ್ಟಿ ಪರಿಷತ್ತಿನ ಪ್ರತಿಪಕ್ಷ ನಾಯಕ?

ವಿಧಾನ ಪರಿಷತ್ತಿನ ಮೂವರು ಸದಸ್ಯರು ಬುಧವಾರ (ಜ. 20) ನಿವೃತ್ತಿಯಾಗುವುದರೊಂದಿಗೆ ಸಂಖ್ಯಾಬಲದಲ್ಲಿ ಮೇಲ್ಮನೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಇಳಿಯಲಿದೆ. ಇದರಿಂದಾಗಿ ವಿರೋಧ ಪಕ್ಷದ ನಾಯಕನ ಸ್ಥಾನ ಜೆಡಿಎಸ್ ಮಡಿಲಿಗೆ ಬೀಳಲಿದೆ.

ಬೆಂಗಳೂರು : ವಿ.ಎಸ್.ಉಗ್ರಪ್ಪ ನಿವೃತ್ತಿ ನಂತರ ಇದೇ 9ರಂದು ಪ್ರತಿಪಕ್ಷ ನಾಯಕಿ ಯಾಗಿ ಕಾಂಗ್ರೆಸ್‌ನ ಮೋಟಮ್ಮ ಆಯ್ಕೆಯಾಗಿದ್ದರು. ಮೂವರು ಸದಸ್ಯರ ನಿವೃತ್ತಿಯಿಂದ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ಸಂಖ್ಯಾ ಬಲ 19ರಿಂದ 16ಕ್ಕೆ ಕುಸಿಯಲಿದೆ. ಈ ಕಾರಣ ದಿಂದ ಮೋಟಮ್ಮ ಅಧಿಕಾರ ಕಳೆದುಕೊಳ್ಳಲಿದ್ದಾರೆ. 17 ಸದಸ್ಯ ರನ್ನು ಹೊಂದಿರುವ ಜೆಡಿಎಸ್ ಸದಸ್ಯ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕೂರಲಿದ್ದಾರೆ. ಇಂದು ನಿವೃತ್ತಿ

ಬೆಂಗಳೂರು: ವಿಧಾನ ಪರಿ ಷತ್ತಿಗೆ ನಾಮ ಕರಣಗೊಂಡಿದ್ದ ಕಾಂಗ್ರೆಸ್‌ನ ಮಲ್ಲಾಜಮ್ಮ, ಪ್ರಕಾಶ್ ಕೆ.ರಾಥೋಡ್ ಹಾಗೂ ಡಾ. ಚಂದ್ರಶೇಖರ ಕಂಬಾರ ಅವರ ಅಧಿಕಾರ ಅವಧಿ ಬುಧವಾರ (ಜ.20) ಕೊನೆಗೊಳ್ಳಲಿದೆ.

ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಎಂ.ಸಿ.ನಾಣಯ್ಯ ಮತ್ತು ಬಸವರಾಜ ಹೊರಟ್ಟಿ ಅವರ ಹೆಸರು ಪ್ರಮುಖ ವಾಗಿ ಕೇಳಿಬರುತ್ತಿದೆ. ಹೊರಟ್ಟಿ ಪರವಾಗಿ ಪಕ್ಷದ ಮುಖಂಡರು ಹೆಚ್ಚಿನ ಒಲವು ತೋರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹೊರಟ್ಟಿ ಅವರ ಅಧಿಕಾರ ಅವಧಿ ಇದೇ ಜೂನ್ 30ಕ್ಕೆ ಕೊನೆಗೊಳ್ಳ ಲಿದೆ. ಆ ನಂತರ ಅವರು ಶಿಕ್ಷಕರ ಕ್ಷೇತ್ರದಿಂದ ಮರುಆಯ್ಕೆ ಬಯಸು ತ್ತಿದ್ದು, ಪ್ರತಿಪಕ್ಷ ನಾಯಕನ ಸ್ಥಾನ ಈ ಚುನಾವಣೆಯಲ್ಲಿ ಅನುಕೂಲ ಮಾಡಬಹುದೆನ್ನುವ ಲೆಕ್ಕಾಚಾರ ಪಕ್ಷದ ಮುಖಂಡರಲ್ಲಿದೆ.

ಪಕ್ಷದ ಮುಖಂಡರಾದ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರ ಸ್ವಾಮಿ, ಎಚ್.ಡಿ.ರೇವಣ್ಣ, ಎಂ.ಸಿ. ನಾಣಯ್ಯ ಅವರು ಬುಧವಾರ ಸಂಜೆ ಸಭೆ ಸೇರಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದರ ನಡುವೆ ಮೋಟಮ್ಮ ಅವರನ್ನೇ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಮುಂದುವರಿಸಿದರೆ ಹೇಗೆ ಎನ್ನುವ ಚರ್ಚೆಯೂ ಜೆಡಿಎಸ್‌ನಲ್ಲಿ ನಡೆದಿದೆ.

ಜೂನ್ ತಿಂಗಳಲ್ಲಿ ಜೆಡಿಎಸ್‌ನ ಒಟ್ಟು ನಾಲ್ಕು ಮಂದಿ ನಿವೃತ್ತಿ ಯಾಗಲಿದ್ದಾರೆ. ಕನಿಷ್ಠ ಇಷ್ಟು ಮಂದಿ ಮತ್ತೆ ಆಯ್ಕೆಯಾದರೆ ಮಾತ್ರ ಪ್ರತಿಪಕ್ಷ ನಾಯಕನ ಸ್ಥಾನ ಆ ಪಕ್ಷಕ್ಕೆ ಉಳಿಯುತ್ತದೆ. ಆದರೆ, ಇದು ಸಾಧ್ಯವೇ ಎನ್ನುವುದು ಈಗಿರುವ ಯಕ್ಷಪ್ರಶ್ನೆ. ಹೀಗಾಗಿ ಕೇವಲ ಆರು ತಿಂಗಳಿಗೆ ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಕೂತು, ನಂತರ ಕಾಂಗ್ರೆಸ್ ನವರಿಗೆ ಬಿಟ್ಟುಕೊಡುವುದು ಸರಿಯಲ್ಲ ಎಂಬ ವಾದವೂ ಇದೆ.

ಮುಖ್ಯ ಸಚೇತಕ: ಅಧಿಕೃತ ಪ್ರತಿಪಕ್ಷಕ್ಕೆ ವಿರೋಧಪಕ್ಷದ ನಾಯಕನ ಸ್ಥಾನದ ಜತೆಗೆ ಮುಖ್ಯ ಸಚೇತಕ ಹುದ್ದೆಯೂ ಲಭಿಸುತ್ತಿದೆ. ಹೀಗಾಗಿ ಈ ಸ್ಥಾನಕ್ಕೆ ಅಬ್ದುಲ್ ಅಜೀಮ್ ಅವರನ್ನು ನೇಮಿಸಲು ಜೆಡಿಎಸ್ ನಿರ್ಧರಿಸಿದೆ ಎನ್ನಲಾಗಿದೆ.ೆ.

ಪ್ರಜಾವಾಣಿ ವಾರ್ತೆ

No comments: