‘ತೆಲಂಗಾಣ ರಾಜ್ಯ ರಚನೆ ವಿಳಂಬವಾಗುತ್ತಿರುವುದಕ್ಕೆ ಬೇಸರವಾಗಿದೆ. ಅಲ್ಲದೇ ಇದು ನಿಜಕ್ಕೂ ಕಾರ್ಯರೂಪಕ್ಕೆ ಬರುವುದೇ ಎಂಬ ಆತಂಕ ಕಾಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತ್ಯೇಕ ರಾಜ್ಯ ರಚನೆಗೆ ನೆರವು ನೀಡಬೇಕು’
ಹೈದರಾಬಾದ್(ಐಎಎನ್‌ಎಸ್): ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಪ್ರಕ್ರಿಯೆ ವಿಳಂಬವಾಗುತ್ತಿರುವುದಕ್ಕೆ ಬೇಸತ್ತು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಕಾರಣ ಮಂಗಳವಾರ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಸಹಪಾಠಿಯ ಆತ್ಮಹತ್ಯೆಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಮಂಗಳವಾರ ಪರೀಕ್ಷೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ಎಂಸಿಎ ವಿದ್ಯಾರ್ಥಿ ವೇಣುಗೋಪಾಲ್ ರೆಡ್ಡಿ ಸಜೀವದಹನ ಮಾಡಿಕೊಂಡಿದ್ದು, ಈತನ ದೇಹವು ಮಂಗಳವಾರ ಬೆಳಗಿನ ಜಾವ ವಿವಿ ಆವರಣದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘ತೆಲಂಗಾಣ ರಾಜ್ಯ ರಚನೆ ವಿಳಂಬವಾಗುತ್ತಿರುವುದಕ್ಕೆ ಬೇಸರವಾಗಿದೆ. ಅಲ್ಲದೇ ಇದು ನಿಜಕ್ಕೂ ಕಾರ್ಯರೂಪಕ್ಕೆ ಬರುವುದೇ ಎಂಬ ಆತಂಕ ಕಾಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತ್ಯೇಕ ರಾಜ್ಯ ರಚನೆಗೆ ನೆರವು ನೀಡಬೇಕು’ ಎಂದು ರೆಡ್ಡಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಲಗೊಂಡ ಜಿಲ್ಲೆಯವನಾದ ರೆಡ್ಡಿ, ಹೈದರಾಬಾದ್‌ನ ಲಲಿತಾ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ. ಈತನ ಆತ್ಮಹತ್ಯೆ ಸುದ್ದಿ ಹರಡಿದ್ದೇ ತಡ ಉಸ್ಮಾನಿಯಾ ವಿವಿ ವಿದ್ಯಾರ್ಥಿಗಳು ಜಂಟಿ ಕ್ರಿಯಾ ಸಮಿತಿ (ಜೆಎಸಿ) ವಿದ್ಯಾರ್ಥಿ ಗಳೊಂದಿಗೆ ಸೇರಿಕೊಂಡು ಪ್ರತಿಭಟನೆ ನಡೆಸಿದರು.
ಸರ್ಕಾರವು ಮೃತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಹೆಚ್ಚುವರಿ ಪೊಲೀಸ್ ಪಡೆಗಳು ವಿವಿಗೆ ಧಾವಿಸಿದ್ದು, ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸುತ್ತಿವೆ.
ತೆಲಂಗಾಣ ರಾಜ್ಯ ರಚನೆಗೆ ತಕ್ಷಣವೇ ಕ್ರಮ ತೆಗೆದು ಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಲು ಜೆಎಸಿ ತೆಲಂ ಗಾಣ ಪ್ರಾಂತ್ಯದಾದ್ಯಂತ 20 ದಿನಗಳ ಪ್ರತಿಭಟನೆ ಹಮ್ಮಿ ಕೊಂಡ ಬೆನ್ನಲ್ಲಿಯೇ ರೆಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
prajavani
Subscribe to:
Post Comments (Atom)
No comments:
Post a Comment