VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 20, 2010

ಅರ್ಧದಷ್ಟು ಶಾಲೆಗಳಲ್ಲಿ ಶೌಚಾಲಯ ಇಲ್ಲ!

ಶೇ 50ರಷ್ಟು ಶಾಲೆಗಳಲ್ಲಿ ಇಂದಿಗೂ ಶೌಚಾಲಯಗಳೇ ಇಲ್ಲದಿರುವ ಅಂಶ ಬೆಳಕಿಗೆ ಬಂದಿದೆ.

ಬೆಂಗಳೂರು: ಸಂಪೂರ್ಣ ಸ್ವಚ್ಛತಾ ಆಂದೋಲನ ದಡಿ ಶೌಚಾಲಯಗಳ ನಿರ್ಮಾಣ ಕ್ಕಾಗಿ ಪ್ರತಿ ವರ್ಷ ಲಕ್ಷಾಂ ತರ ರೂಪಾಯಿ ವೆಚ್ಚ ಮಾಡುತ್ತಿರು ವುದಾಗಿ ಸರ್ಕಾರ ಹೇಳುತ್ತಿದ್ದರೂ, ಶೇ 50ರಷ್ಟು ಶಾಲೆಗಳಲ್ಲಿ ಇಂದಿಗೂ ಶೌಚಾಲಯಗಳೇ ಇಲ್ಲದಿರುವ ಅಂಶ ಬೆಳಕಿಗೆ ಬಂದಿದೆ.

ಶಾಲೆಗಳಲ್ಲಿನ ಶೌಚಾಲಯಗಳ ಸ್ಥಿತಿಗತಿ ಬಗ್ಗೆ ಸರ್ಕಾರೇತರ ಸಂಸ್ಥೆ ‘ಪ್ರಥಮ್’ ರಾಷ್ಟ್ರವ್ಯಾಪಿ ನಡೆಸಿರುವ 2009ರ ಸಮೀಕ್ಷೆ ಪ್ರಕಾರ, ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶೌಚಾಲಯ ಗಳು ಇಲ್ಲದೆ ವಿದ್ಯಾರ್ಥಿ ಗಳು ತೊಂದರೆ ಅನುಭವಿ ಸುತ್ತಿದ್ದಾರೆ. ಅಷ್ಟೇ ಅಲ್ಲದೆ ಲಭ್ಯವಿರುವ ಬಹು ತೇಕ ಕಡೆ ಬಾಲಕ, ಬಾಲಕಿಯ ರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ಪ್ರೌಢಶಾಲಾ ಹೆಣ್ಣು ಮಕ್ಕಳು, ಅನಿವಾರ್ಯವಾಗಿ ಬಾಲ ಕರ ಶೌಚಾ ಲಯ ಬಳಸು ತ್ತಿ ್ದದಾರೆ.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾ ಟಕ ಮುಂಚೂಣಿ ಯಲ್ಲಿದ್ದರೂ, ಶೈಕ್ಷಣಿಕ ಸಂಸ್ಥೆಗಳಲ್ಲಿ ಮೂಲಸೌಕ ರ್ಯ ಗಳ ಕೊರತೆ ಇರುವುದು ಎದ್ದು ಕಾಣುತ್ತಿದೆ. 2009ರ ಅಕ್ಟೋಬರ್, ನವೆಂ ಬರ್ ತಿಂಗಳಲ್ಲಿ 27 ಜಿಲ್ಲೆಗಳ 133 ಪ್ರಾಥಮಿಕ ಮತ್ತು 623 ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಸೇರಿವೆ.

ಸಮೀಕ್ಷೆ ಪ್ರಕಾರ ಶೇ 51.9 ರಷ್ಟು ಪ್ರಾಥಮಿಕ ಶಾಲೆಗಳಲ್ಲಿ ಉಪ ಯೋಗಿ ಸಬಹುದಾದ ಶೌಚಾ ಲಯ ಗಳು ಇಲ್ಲ. ಶೇ 11.5ರಷ್ಟು ಶಾಲೆಗಳಲ್ಲಿ ಮೂಲ ಸೌಕರ್ಯ ಗಳಿಲ್ಲ.

ಶೇ 48.7ರಷ್ಟು ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಳಕೆಗೆ ಸೂಕ್ತವಾದ ಶೌಚಾಲಯಗಳಿಲ್ಲ, ಅಲ್ಲದೆ ಶೇ 5.5ರಷ್ಟು ಶಾಲೆಗಳಲ್ಲಿ ಮೂಲಸೌಕರ್ಯಗಳಿಲ್ಲ.

ಶೇ 42ರಷ್ಟು ಪ್ರಾಥಮಿಕ ಮತ್ತು ಶೇ 25ರಷ್ಟು ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಶೇ 35ರಷ್ಟು ಬಾಲಕಿಯರ ಶೌಚಾಲಯ ಗಳು ಮಾತ್ರ ಬಳಕೆಗೆ ಯೋಗ್ಯವಾಗಿವೆ.

ಕೊಠಡಿಗಳ (ಕ್ಲಾಸ್ ರೂಮ್) ಕೊರತೆ ಇರುವ ಕಾರಣ ಪ್ರಾಥಮಿಕ ಶಾಲೆಗಳಲ್ಲಿ 2- 3 ತರಗತಿಗಳ ಮಕ್ಕಳು ಒಂದೇ ಕೊಠಡಿಯಲ್ಲಿ ಕುಳಿತು ಕೊಳ್ಳುತ್ತಾರೆ. ಸಮಾಧಾನದ ವಿಷಯವೆಂದರೆ ಮಕ್ಕಳ ದಾಖಲಾತಿ ಪ್ರಮಾಣ, ಶಿಕ್ಷಕರ ಹಾಜರಾತಿ, ಮಕ್ಕಳ ಓದುವ ಸಾಮರ್ಥ್ಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆಯಾಗಿದೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಈ ಅಂಶ ಕಂಡುಬಂದಿದೆ.

ಕರ್ನಾಟಕ ಮತ್ತು ಕೇರಳ ರಾಜ್ಯ ಗಳಲ್ಲಿ ಮಾತ್ರ ಮನೆಪಾಠಕ್ಕೆ ಹೋಗುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ. ಉಳಿದ ರಾಜ್ಯಗಳಲ್ಲಿ ಈ ಪ್ರಮಾಣ ಈಗಲೂ ಹೆಚ್ಚಿದೆ ಎಂದು ಇದೇ ತಿಂಗಳ 15ರಂದು ನವದೆ ಹಲಿ ಯಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪ್ರಜಾವಾಣಿ ವಾರ್ತೆ

No comments: