ರೈತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಕಂದಾಯ ಸಚಿವರ ಪ್ರತಿಕೃತಿ ದಹಿಸಿ ತಿಥಿ ಊಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು 
 
ಬಳ್ಳಾರಿ:  ’ವಿಮಾನ ನಿಲ್ದಾಣ ವಿರೋಧಿಸಿ ಹೋರಾಟ ನಡೆಸುತ್ತಿ ರುವವರು ನಕಲಿ ರೈತರು’ ಎಂಬ ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ ಹೇಳಿಕೆ ಸ್ಥಳೀಯ ರೈತರನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದ ರೈತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಸಚಿವರ ಪ್ರತಿಕೃತಿ ದಹಿಸಿ ತಿಥಿ ಊಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂ ಕಿನ ಚಾಗನೂರು, ಸಿರಿವಾರ ಬಳಿ ವಿಮಾನ ನಿಲ್ದಾಣಕ್ಕೆ ಭೂಸ್ವಾ ಧೀನ ಮಾಡುವುದನ್ನು ಖಂಡಿಸಿ ಹೋರಾಟ ನಡೆಸಿರುವ ರೈತರು ಬೆಳಿಗ್ಗೆ ನಗರಕ್ಕೆ ಬರುವಾಗ ಪೊಲೀಸರು ಅವರನ್ನು ತಡೆದರು. ಪ್ರತಿಭಟನೆಗೆ ಪರವಾನಗಿ ಪಡೆದಿಲ್ಲ ಎಂಬುದು ಪೊಲೀಸರ ವಾದವಾದರೆ ಹಕ್ಕಿಗಾಗಿ ಹೋರಾಡು ತ್ತಿರುವ ತಾವು ಪರವಾ ನಗಿ ಪಡೆ ಯುವ ಅಗತ್ಯವಿಲ್ಲ ಎಂಬುದು ರೈತರ ನಿಲುವು. ಪರಸ್ಪರ ವಾಗ್ವಾದದ ನಂತರ ರೈತರು ನಗರ ದೇವತೆ ದುರ್ಗಮ್ಮ ದೇವಸ್ಥಾನದ ಬಳಿ ಸೇರಿದರು.
ಪ್ರತಿಭಟನಾ ಮೆರವಣಿಗೆ ಆರಂಭವಾಗುವ ಹೊತ್ತಿಗೆ ರೈತರು ತಂದಿದ್ದ ಕರುಣಾಕರ ರೆಡ್ಡಿ ಅವರ ಪ್ರತಿಕೃತಿ ಮಾಯವಾಗಿತ್ತು. ಅದನ್ನು ಪೊಲೀಸರೇ ತೆಗೆದುಕೊಂಡು ಹೋಗಿದ್ದಾರೆ, ರಕ್ಷಕರೇ ಕಳ್ಳತನ ಮಾಡಿದ್ದಾರೆ ಎಂದು ಪ್ರತಿಭಟನಾ ಕಾರರು ಆರೋಪಿಸಿದರು. ಪ್ರತಿಕೃತಿ ಹಿಂತಿರುಗಿಸಬೇಕು ಎಂದು ಒತ್ತಾಯಿಸಿ ಸುಮಾರು 1 ಗಂಟೆ ರಸ್ತೆತಡೆ ನಡೆಸಿದರು. ನಂತರ ಮತ್ತೊಂದು ಪ್ರತಿಕೃತಿ ಹಾಗೂ ಸಚಿವರ ಭಾವಚಿತ್ರವನ್ನು ದಹಿಸಿ ಘೋಷಣೆ ಕೂಗಿದರು.
ರಾಯಲ್ ವೃತ್ತಕ್ಕೆ ಬಂದ ಪ್ರತಿಭಟನಾಕಾರರು ವೃತ್ತದ ನಡುವೆ ಕುಳಿತು ಅಲ್ಲಿಯೆ ತಿಥಿ ಊಟ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು. ಚಾಗನೂರು ರೈತ ಮುಖಂಡ ಮಲ್ಲಿಕಾರ್ಜುನ ರೆಡ್ಡಿ, ಪ್ರಾಂತ ರೈತ ಸಂಘದ ವಿ.ಎಸ್. ಶಿವಶಂಕರ್, ಸಿಪಿಐನ ಕೆ. ನಾಗಭೂಷಣ ರಾವ್ ನೇತೃತ್ವ ವಹಿಸಿದ್ದರು.   
 
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment