VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 13, 2010

ವರದಕ್ಷಿಣೆ ಕಿರುಕುಳ: ಆರೋಪಿ ಸೆರೆ


ಮಂಗಳೂರು: ಪತಿಗೆ ವರದಕ್ಷಿಣೆ ಹಿಂಸೆ ನೀಡಿ ತವರಿಗೆ ಅಟ್ಟಿದ ಆರೋಪದಲ್ಲಿ ಉಳ್ಳಾಲಬೈಲ್‌ ನಿವಾಸಿ ಮುಹಮ್ಮದ್‌ ಫಾರೂಕ್‌ ಯಾನೆ ಎವರೆಸ್ಟ್‌ ಫಾರೂಕ್‌ ಹಾಗೂ ಅವನ ಸಹೋದರ ಅನ್ವರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರು ತಿಂಗಳ ಹಿಂದೆ ಸುರತ್ಕಲ್‌ ಕಾನಕಟ್ಲದ ಜನತಾ ಕಾಲನಿ ನಿವಾಸಿ ಆಸ್ಮಾ ಎಂಬವರನ್ನು ಮದುವೆಯಾಗಿದ್ದ ಫಾರೂಕ್‌ ಮದುವೆಯ ಸಂದರ್ಭದಲ್ಲಿ ಎರಡು ಲಕ್ಷ ರೂ. ನಗದು ಹಾಗೂ 40ಪವನ್‌ ಬಂಗಾರವನ್ನು ವರದಕ್ಷಿಣೆ ರೂಪದಲ್ಲಿ ಪಡೆದಿದ್ದ. ಮದವೆಯಾದ ಎರಡೇ ತಿಂಗಳಲ್ಲಿ ಬಂಗಾರವನ್ನೆಲ್ಲ ಮಾರಿ ಹೆಚ್ಚುವರಿ ವರದಕ್ಷಿಣೆಗಾಗಿ ಪೀಡಿಸಲಾರಂಭಿಸಿದ್ದು, ದೈಹಿಕ ಹಿಂಸೆಯನ್ನೂ ನೀಡುತ್ತಿದ್ದ. ಕಳೆದ ವಾರ ಆಸ್ಮಾಳಿಗೆ ನಡೆಸಿದ ಹಲ್ಲೆಯ ಪರಿಣಾಮ ಆಕೆಯ ಹೊಟ್ಟೆಯಲ್ಲಿ ತೀವೃತರವಾದ ನೋವು ಕಾಣಿಸಿಕೊಂಡಿದ್ದು, ಗುಪ್ತಾಂಗದಿಂದ ರಕ್ತ ಒಸರುತ್ತಿತ್ತು ಎಂದು ಹೇಳಲಾಗಿದೆ.
ವರದಕ್ಷಣಿಯ ಆಸೆಗಾಗಿಯೇ ತಮ್ಮನ ಮದುವೆ ಮಾಡಿದ್ದ ಅನ್ವರ್‌ ತಮ್ಮನ ವರದಕ್ಷಿಣೆಯ ಹಣದಲ್ಲಿ ತಾನೂ ಪಾಲು ಪಡೆದುದಲ್ಲದೆ ಇನ್ನಷ್ಟು ವರದಕ್ಷಿಣೆಗಾಗಿ ಆಸ್ಮಾಳನ್ನು ಪೀಡಿಸುತ್ತಿದ್ದ ಎಂದು ಆಸ್ಮಾ ದೂರು ಸಲ್ಲಿಸಿದ್ದು ಇದರಂತೆ ಫಾರೂಕ್‌ ಹಾಗೂ ಅವನ ಸಹೋದರ ಅನ್ವರನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಳ್ಳಾಲ ಬೈಲಿನಲ್ಲಿ ದೊಡ್ಡದೊಂದು ಮನೆ ತೋರಿಸಿ ಮದುವೆಯಾದ ಫಾರೂಕ್‌ ಮದುವೆಯ ಒಂದೇ ವಾರದಲ್ಲಿ ದೊಡ್ಡ ಮನೆಯನ್ನು ಲೀಸ್‌ಗೆ ಕೊಟ್ಟು ಮಂಜನಾಡಿಯಲ್ಲಿರುವ ಇನ್ನೋರ್ವ ಸಹೋದರನ ಮನೆಯಲ್ಲಿ ಪತ್ನಿ ಸಹಿತನಾಗಿ ವಾಸವಾಗಿದ್ದ. ಆಸ್ಮಾಳಿಗೆ ಫಾರೂಕ್‌ ನೀಡುತ್ತಿದ್ದ ಹಿಂಸೆಯಿಂದ ಅವನ ಹಿರಿಯ ಸಹೋದರನ ಮನೆಯವರೂ ರೋಸಿ ಹೋಗಿದ್ದರು ಎಂದು ಹೇಳಲಾಗಿದೆ.


ಸೌರ್ಕೆ:jayakirana

No comments: