ಸುಳ್ಯ: ಕನಕಮಜಲು ಗ್ರಾಮದ ದಲಿತ ಯುವತಿಯನ್ನು ಪ್ರೇಮಿಸಿ ಗರ್ಭದಾರಣೆಗೆ ಕಾರಣನಾಗಿ ಬಳಿಕ ಮದುವೆಗೆ ನಿರಾಕರಿಸಿ ಕೀಳು ಜಾತಿ ಯವಳೆಂದು ನಿಂದಿಸಿದನೆಂದು ಆರೋಪ ಎದುರಿಸುತ್ತದ್ದ ಕನಕ ಮಜಲಿನ ಗೋಪಾಲಕೃಷ್ಣನಿಗೆ ಜಿಲ್ಲಾ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ.
ಕನಕಮಜಲಿನ ಗೋಪಾಲಕೃಷ್ಣ ಕನ್ನಡ್ಕರ ಮೇಲೆ ಯುವತಿ ನೀಡಿದ ದೂರಿನಂತೆ ಸುಳ್ಯ ಪೊಲೀಸರು ದಲಿತ ದೌರ್ಜನ್ಯ ಕಾಯಿದೆ ಪ್ರಕಾರ ಪ್ರಕರಣ ದಾಕಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಜಾಮೀನು ಅರ್ಜಿ ಸಲ್ಲಿಸಿ, ವಿಚಾರಣೆ ನಡೆಸಿದ ಮಂಗಳೂರು 2ನೇ ಹೆಚ್ಚುವರಿ ನ್ಯಾಯಾಲಯ ಆರೋಪಿಯನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದೆ.
source: jayakirana
Jan 13, 2010
Subscribe to:
Post Comments (Atom)
No comments:
Post a Comment