
ರಾಮನಗರ, ಜ. 13 : ದಾವೂದ್ ಇಬ್ರಾಹಿಂ ಅಂಡರ್ ವರ್ಲ್ಡ್ ಗೆ ದೊರೆಯಾದರೆ ಈ ಅಶೋಕ್ ಖೇಣಿ ಭೂಗಳ್ಳರಿಗೆ ದೊರೆ. ಅವನೊಬ್ಬ ಉಗ್ರ ಭೂಗಳ್ಳ. ನಾಜೂಕು ರೀತಿಯ ಡ್ರೆಸ್ ಹಾಕಿಕೊಂಡೇ ರೈತರಿಗೆ ಮಕ್ಮಲ್ ಟೋಪಿ ಹಾಕ್ತಾ ಇದ್ದಾನೆ. ಅಮೇರಿಕಾದವನ ಹಾಗೆ ಸೂಟುಬೂಟು ಹಾಕಿಕೊಂಡು ಬಂದ ಖೇಣಿಯನ್ನು ಜನ ನಂಬಿ ಮೋಸ ಹೋದರು ಎಂದು ಮಾಜಿ ಪ್ರಧಾನಿ, ಜೆಡಿಎಸ್ ಮುಖ್ಯಸ್ಥ ದೇವೇಗೌಡ ನೈಸ್ ಸಂಸ್ಥೆಯ ಒಡೆಯ ಅಶೋಕ್ ಖೇಣಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಡದಿ ಬಳಿ ನೈಸ್ ಸಂಸ್ಥೆ ವಿರುದ್ದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದ ದೇವೇಗೌಡ, ನನ್ನ ಇಡೀ ರಾಜಕೀಯ ಜೀವನದಲ್ಲಿ ವೈಕುಂಠ ಸಮಾರಾಧನೆ, ಚಪ್ಪಲಿ ಹಾರ, ಪ್ರತಿಕೃತಿ ದಹನ ಮುಂತಾದ ಪ್ರತಿಭಟನೆಗಳನ್ನು ಸಾಕಷ್ಟು ನೋಡಿದ್ದೇನೆ. ಇದಕ್ಕೆಲ್ಲಾ ಬೆದರುವವನಲ್ಲ ಈ ನಿಮ್ಮ ದೇವೇಗೌಡ. ನನ್ನ ಮೈಯಲ್ಲಿ ಒಂದು ತೊಟ್ಟು ರಕ್ತ ಇರುವವರೆಗೆ ರೈತರ ಸಂಕಷ್ಟ ನೋಡಿ ಸುಮ್ಮನೆ ಕೂರುವ ವಂಶದವನಲ್ಲ ನಾನು ಎಂದು ಸರಕಾರವನ್ನು ಎಚ್ಚರಿಸಿದ್ದಾರೆ.
ಈ ಖೇಣಿ ನಿಮ್ಮ ಭೂಮಿಯ ದುಡ್ಡಿನಿಂದ ಮಠಾಧೀಶರಿಗೆ ಹಾಸ್ಟೆಲ್ ಕಟ್ಟಿಸಿ ಕೊಡುತ್ತಾನೆ. ಆಸ್ಪತ್ರೆ ಕಟ್ಟಿಸಿ ಕೊಡುತ್ತೇನೆಂದು ಭರವಸೆ ನೀಡುತ್ತಾನೆ. ಮಠಗಳಿಗೆ ಹತ್ತು ಕೋಟಿ ನೀಡಿ ನಿಮ್ಮನ್ನೆಲ್ಲ ಒಲೈಸಿಕೊಳ್ಳುತ್ತಾನೆ. ನ್ಯಾಯಾಲಯದ ಅಂತಿಮ ತೀರ್ಪು ಬರುವವರೆಗೆ ಶಾಂತಿಯುತ ಹೋರಾಟ ಮುಂದುವರಿಯುತ್ತದೆ. ತೀರ್ಪು ಬಂದ ಬಳಿಕ ನಿಮಗೆ ನ್ಯಾಯಯುತವಾಗಿ ಬರಬೇಕಾಗಿರುವ ಭೂಮಿ ಅದಕ್ಕೆ ತಕ್ಕಂತೆ ಬೆಲೆ ಸಲ್ಲಬೇಕು ಎಂದು ದೇವೇಗೌಡ ರೈತರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಾರೆ.
Thatskannada
No comments:
Post a Comment