
ಬೆಂಗಳೂರು ಜ. 13 : ಮುಖ್ಯಮಂತ್ರಿ ಯಡಿಯೂರಪ್ಪ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ಇಬ್ಬರೂ ಈಡಿಯಟ್ಸ್. ಯಡಿಯೂರಪ್ಪನಿಗೆ ಮಾನ ಮಾರ್ಯಾದೆ ಪದದ ಅರ್ಥವೇ ಗೊತ್ತಿಲ್ಲ, ಭಂಡ, ಆಷಾಢಭೂತಿ. ಹೀಗೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಹೀನಾಮಾನ ಬೈಗುಳಗಳ ಸುರಿಮಳೆಗೈದವರು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ.
ಕೆಪಿಸಿಸಿ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವತಿಯಿಂದ ಜಕ್ಕೂರು ವೈಮಾನಿಕ ಶಾಲೆ ಬಳಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ದು, ಸರಕಾರ ಮತ್ತು ಮುಖ್ಯಮಂತ್ರಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ನೆರೆಯಿಂದ ನೂರಾರು ಮಂದಿ ಸತ್ತು 7 ಲಕ್ಷ ಕುಟುಂಬ ಮನೆ ಕಳೆದುಕೊಂಡು ಬೀದಿಗೆ ಬಿದ್ದಾಗ ಯಡಿಯೂರಪ್ಪ ಅವರಿಗೆ ಅಳು ಬರಲಿಲ್ಲ.
ಬೆಂಗಳೂರು ಉತ್ತರ ತಾಲ್ಲೂಕಿನಲ್ಲಿ ಪ್ರತಿ ಎಕರೆಗೆ ಮಾರ್ಗಸೂಚಿ ದರ 1.25 ಕೋಟಿ ಇದ್ದರೂ ಐದಾರು ಲಕ್ಷ ರುಪಾಯಿ ಕೊಟ್ಟು ರೈತರ ಜಮೀನಿನ್ನು ಕೊಳ್ಳೆ ಹೊಡೆಯುವ ಹೊರಟ ಬಗ್ಗೆಯೂ ದುಖಃವಾಗುತ್ತಿಲ್ಲ. ಇಂತಹ ಭಂಡ ಮುಖ್ಯಮಂತ್ರಿಗೆ ಶೋಭಾ ಕರಂದ್ಲಾಜೆಯನ್ನು ಸಂಪುಟದಿಂದ ಕೈಬಿಟ್ಟಿದ್ದು ಅಳು ತಂದಿತು. ಇಂತಹ ಮಾನ ಮಾರ್ಯಾದೆ ಇಲ್ಲ ವ್ಯಕ್ತಿ ಸಿಎಂ ಆಗಿದ್ದನ್ನು ನನ್ನ ರಾಜಕೀಯ ಜೀವನದಲ್ಲೇ ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Thatskannada
No comments:
Post a Comment