VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 7, 2010

ತರುಣಿ ಪರಾರಿ

ಬಂಟ್ವಾಳ: ಮುಸ್ಲಿಂ ಸಮುದಾಯಕ್ಕೆ ಸೇರಿದ ತರುಣಿಯೋರ್ವಳು ಕರೆಂಟ್‌ ಕೈಕೊಟ್ಟ ವೇಳೆ ಓಡಿ ಹೋದ ಘಟನೆ ಪಾಣೆ ಮಂಗಳೂರು ನೆಹರೂ ನಗರ ಬಳಿ ಸಂಭವಿಸಿದೆ.

ತರುಣಿಯ ಮನೆಮಂದಿ ದೂರು ನೀಡಿದರನ್ವಯ ನಗರ ಪೊಲೀಸರು ಹುಡು ಕಾಟದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸ್‌ ಮೂಲದ ಪ್ರಕಾರ ಆಕೆ ಅದೇ ಸಮುದಾಯದ ಯುವಕನೊಂದಿಗೆ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ.

ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿರುವ ತರುಣಿ 14-15ರ ಹರೆಯದವಳಾಗಿದ್ದು, ಪರಾರಿಯಾಗಿರುವ ಹಿನ್ನೆಲೆ ಗೊತ್ತಾಗಿಲ್ಲ. ಮಂಗಳವಾರ ರಾತ್ರಿ 9.30ರ ಸುಮಾರಿಗೆ ವಿದ್ಯುತ್‌ ಸ್ಥಗಿತಗೊಂಡ ವೇಳೆ ಆಕೆ ಪರಾರಿಯಾಗಿರುವುದಾಗಿ ತಿಳಿದು ಬಂದಿದೆ. ಕರೆಂಟ್‌ ಬಂದಾಗ ತರುಣಿ ಮನೆಯಲ್ಲಿಲ್ಲದ ವಿಷಯ ಗೊತ್ತಾಗಿ ಹುಡುಕಲಾರಂಭಿಸಿದ್ದರು.

ಕಾರಿನಲ್ಲಿ ಯಾರೋ ಬಂದು ಕರೆದು ಕೊಂಡು ಹೋಗಿರುವುದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಕೆಯ ಸ್ನೇಹಿತೆಯರ, ಸಂಬಂಧಿಕರ ಬಳಿ ವಿಚಾರಿಸಲಾಗಿದ್ದು, ಬಳಿಕ ಆಕೆಯ ಡೈರಿಯಲ್ಲಿ ಬರೆಯಲಾಗಿದ್ದ ಮೊಬೈಲ್‌ ನಂಬ್ರಗಳಿಗೆ ಸಂಪರ್ಕಿಸಲಾಯಿತು. ಪೊಲೀಸ್‌ ಅಧಿಕಾರಿ ಯೋರ್ವರೊಂದಿಗೆ ಖುದ್ದು ಮಾತನಾಡಿದ ತರುಣಿ ತಾನು ಮನೆಗೆ ವಾಪಾಸಾಗುತ್ತೇನೆ ಎಂದು ಹೇಳಿಕೊಂಡಿರುವುದು ಮನೆಯವರ ಆತಂಕವನ್ನು ದೂರ ಮಾಡಿದೆ.

source: jayakirana

No comments: