ನವದೆಹಲಿ, ಜ. 13 : ಆಹಾರಧಾನ್ಯ ಬೆಲೆಗಳು ಹೆಚ್ಚು ಕಡಿಮೆ ವಾರದೊಳಗೆ ಇಳಿಕೆ ಕಾಣಲಿದೆ ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಭರವಸೆ ನೀಡಿದರು. ಆಹಾರಧಾನ್ಯಗಳ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಜನವರಿ 27 ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಕರೆದಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ನೇತೃತ್ವದ ಸಂಪುಟ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದರ ಏರಿಕೆ 10 ದಿನದೊಳಗೆ ಕಡಿಮೆಯಾಗಲು ಎಲ್ಲ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಂಡಿದೆ ಎಂದರು. ಇತ್ತೀಚೆಗೆ ಸಕ್ಕರೆ ಬೆಲೆ ಕೆಜಿಗೆ 40 ರಿಂದ 50 ರುಪಾಯಿಗೆ ಏರಿತ್ತು. ಇದು ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದ್ದು, ಪ್ರತಿಯೊಬ್ಬರು ಹಿಡಿ ಶಾಪ ಹಾಕುವಂತಾಗಿದೆ. ಇದರ ಜೊತೆಗೆ ಆಹಾರಧಾನ್ಯಗಳಾದ ಬೇಳೆ ಕಾಳುಗಳು ಬೆಲೆಗಳು ದರಗಳೂ ಗಗನಕ್ಕೇರಿವೆ. ಪ್ರತಿಪಕ್ಷಗಳಿಂದ ತೀವ್ರ ಒತ್ತಡ ಬಂದ ಹಿನ್ನೆಲೆಯಲ್ಲಿ ಕೇಂದ್ರ ಬೆಲೆಗಳ ಮೇಲೆ ಹಿಡಿತ ಸಾಧಿಸುವ ಮಾತನಾಡಿದೆ. ಮುಂದಿನ ಎಂಟು ಹತ್ತು ದಿನಗಳಲ್ಲಿ ದರಗಳ ಕಡಿಮೆ ಮಾಡುವುದಾಗಿ ಹೇಳಿದ್ದು, ಕೊಂಚ ಸಮಾಧಾನಕರ ಅಂಶವಾಗಿದೆ.
thatskannada
Subscribe to:
Post Comments (Atom)
No comments:
Post a Comment