VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 7, 2010

ಪದವಿನಂಗಡಿ ಯುವತಿ ಆಫ್ರಿಕಾದಲ್ಲಿ ಕೊಲೆ?

ಮಂಗಳೂರು: ಆರು ತಿಂಗಳ ಹಿಂದಷ್ಟೇ ವಿವಾಹವಾಗಿ ಆಫ್ರಿಕಾದ ಘಾನಾದಲ್ಲಿ ಉದ್ಯೋಗದಲ್ಲಿದ್ದ ಪತಿಯ ಬಳಿಗೆ ಕಳೆದ ಅಕ್ಟೋಬರ್‌ನಲ್ಲಿ ತೆರಳಿದ್ದ ಪದವಿನಂ ಗಡಿಯ ಯುವತಿಯೊಬ್ಬಳು ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದು, ಇದೊಂದು ಕೊಲೆ ಎಂಬ ಶಂಕೆ ಸ್ಥಳೀಯರದ್ದಾಗಿದೆ.

ಕಳೆದ ಮೇ ತಿಂಗಳಿನಲ್ಲಿ ಪದವಿನಂಗ ಡಿಯ ಅಚ್ಯುತ ಎಂಬವರು ತಮ್ಮ ಮಗಳು ಸೌಮ್ಯಳನ್ನು ಅಶೋಕನಗರ ಕೋಡಿಕಲ್‌ ನಿವಾಸಿ ಕಿಶನ್‌ ಎಂಬಾತನಿಗೆ ಕೊಟ್ಟು ಮದುವೆ ಮಾಡಿದ್ದರು. ಹಿಂದೆ ಪಣಂ ಬೂರಿನಲ್ಲಿ ಮರದ ವ್ಯಾಪಾರ ಮಾಡುತ್ತಿದ್ದ ಕಿಶನ್‌ ಬಳಿಕ ಆಫ್ರಿಕಾದ ಘಾನಾಕ್ಕೆ ತೆರಳಿದ್ದ.

ಕಳೆದ ಅಕ್ಟೋಬರ್‌ನಲ್ಲಿ ಸೌಮ್ಯಾಳನ್ನು ಕೂಡ ಘಾನಾಕ್ಕೆ ಕರೆಸಿಕೊಂಡಿದ್ದ. ಆದರೆ ಡಿಸೆಂಬರ್‌ 28ರಂದು ಸೌಮ್ಯ ಘಾನಾದ ಕುಮಸಿಯ ಪಾರಕು ಎಸ್ಟೇಟ್‌ನಲ್ಲಿರುವ ತನ್ನ ಮನೆಯಲ್ಲಿ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮನೆಯವರಿಗೆ ಸುದ್ದಿ ಮುಟ್ಟಿದೆ. ಇದನ್ನು ತಿಳಿದ ಆಕೆಯ ಮನೆಯವರು ಕಿಶನ್‌ ಪರಿಚಯದವರಿಗೆ ಫೋನ್‌ ಮಾಡಿ ಇದರ ಬಗ್ಗೆ ವಿಚಾರಿಸಿದಾಗ, ಆತನಿಗೆ ಮದುವೆಗೆ ಮೊದಲೇ ಅಲ್ಲಿನ ಹುಡುಗಿಯೊಬ್ಬಳೊಂದಿಗೆ ಸಂಬಂಧವಿತ್ತು. ಕಿಶನ್‌ಗೆ ಅನ್ಯ ಮಹಿಳೆಯೊಂದಿಗೆ ಸಂಬಂಧವಿದ್ದ ಕಾರಣ ಸೌಮ್ಯಳನ್ನು ಆತ ಕೊಲೆ ಮಾಡಿರಬಹುದೆಂದು ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

ಸೌಮ್ಯ ಆತ್ಮಹತ್ಯೆ ಪ್ರಕರಣದ ಬಗ್ಗೆ ಕುಮಸಿಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್‌ ನೋಟ್‌ ಸಿಗದಿರುವ ಕಾರಣ ಪೊಲೀಸರು ಹೆಚ್ಚಿನ ತನಿಖೆ ನಡೆಸಲು ಮುಂದಾಗಿದ್ದಾರೆ. ಇದುವರೆಗೆ ಆತ್ಮಹತ್ಯೆಗೆ ಸ್ಪಷ್ಟ ಕಾರಣ ಸಿಕ್ಕಿಲ್ಲವೆಂದು ಕಮಾಂಡರ್‌ ಆಫ್‌ ಕುಮಸಿ ಸೆಂಟ್ರಲ್‌ ಪೊಲೀಸ್‌ ಡಿಎಸ್‌ಪಿ ಫ್ರಾಂಕ್‌ ಅಬ್ರೊಕ್ವ ವಿವರಿಸಿದ್ದಾರೆ.

ಆದರೆ ಭಾರತದಿಂದ ಬಂದ ಸೌಮ್ಯಗೆ ತನ್ನ ಗಂಡನೊಂದಿಗೆ ಸಮಸ್ಯೆಯಿತ್ತು ಎಂದು ಪಾರಕು ಎಸ್ಟೇಟ್‌ನ ನಿವಾಸಿಗಳು ತಿಳಿಸಿದ್ದಾರೆ. ಸೌಮ್ಯ ಆತ್ಮಹತ್ಯೆ ಮಾಡಿಕೊಂಡ ದಿನ ಕಿಶನ್‌ ಬೆಳಿಗ್ಗೆ 7.30ಕ್ಕೆ ಮನೆಯಿಂದ ತನ್ನ ಕಚೇರಿಗೆ ತೆರಳಿದ್ದ. ಆಗ ಸೌಮ್ಯ ಮಲಗಿದ್ದಳು. ಕಿಶನ್‌ ಮತ್ತೆ 11.30ಕ್ಕೆ ಮರಳಿ ಮನೆಗೆ ಬಂದಾಗ ಬೆಡ್‌ ರೂಮ್‌ಗೆ ಚಿಲಕ ಹಾಕಿರುವುದನ್ನು ನೋಡಿ ಬಾಗಿಲು ಬಡಿದ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಕಟ್ಟಡದ ಭದ್ರತಾ ಸಿಬ್ಬಂದಿಗಳನ್ನು ಕರೆದು ಬಾಗಿಲು ಒಡೆದು ನೋಡಿದಾಗ, ಸೌಮ್ಯ ಗುಂಡು ಹಾರಿಸಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಆಕೆಯ ಬದಿಯಲ್ಲಿಯೇ ಪಿಸ್ತೂಲ್‌ ಕೂಡ ಇತ್ತು. ಪೊಲೀಸರು ಪಿಸ್ತೂಲ್‌ನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಸೌಮ್ಯಳ ಶವವನ್ನು ತನಿಖೆ ಪೂರ್ತಿಗೊಳ್ಳುವ ತನಕ ಕೊಮಫು ಅನೊಕೆ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

source: jayakirana

No comments: