VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Jan 26, 2010

ಸುಳ್ಯದ ಲಕ್ಷ್ಮೀಶ ಗಬ್ಲಡ್ಕ ರಾಜೀನಾಮೆ ಪ್ರಕರಣ: ಆರ್‌ಎಸ್‌ಎಸ್‌ಗೆ ಅಪಥ್ಯವಾಗುತ್ತಿರುವ `ಜಾಗರಣೆ ವೇದಿಕೆ

ಮಂಗಳೂರು: ಸಂಘಪರಿವಾರದ ಭದ್ರನೆಲೆ ಎಂದು ಗುರುತಿಸಲ್ಪಟ್ಟಿರುವ ಸುಳ್ಯ ದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯ ಶೀತಲ ಸಮರ ಇಲ್ಲಿನ ಜಿಲ್ಲಾ ಹಿಂದೂ ಜಾಗರಣ ವೇದಿಕೆ ಸಹಸಂಚಾಲಕ ಲಕ್ಷ್ಮೀಶ ಗಬ್ಲಡ್ಕ ರಾಜೀನಾಮೆಯಲ್ಲಿ ಕೊನೆಗೊಂಡಿದೆ.

ಮೇಲುನೋಟಕ್ಕೆ ಇದೊಂದು ಸಾಮಾನ್ಯ ವಿದ್ಯಮಾನದಂತೆ ಕಾಣುತ್ತಿದ್ದರೂ ಇದರ ಹಿಂದೆಯೇ ಹಿಂದೂ ಜಾಗರಣ ವೇದಿಕೆಯಲ್ಲಿ ಬೆಳೆಯುತ್ತಿರುವ ನಾಯಕರನ್ನು ಮೂಲೆಗುಂಪು ಮಾಡುವ ಹುನ್ನಾರ ಅಡಗಿದೆ ಎಂಬ ಮಾತು ಸಂಘಪರಿವಾರದ ಪ್ರಾಮಾ ಣಿಕ ನಾಯಕರಿಂದಲೇ ಕೇಳಿಬರುತ್ತಿದೆ.

ಮಂಗಳೂರು ಸಂಸದ ನಳಿನ್‌ಕುಮಾರ್‌ ಗೆಲುವಿನಲ್ಲಿ ಸಾಕಷ್ಟು ಪಾತ್ರ ವಹಿಸಿದ್ದ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಹರ್ನಿಶಿಯಾಗಿ ದುಡಿದವರಲ್ಲಿ ಲಕ್ಷ್ಮೀಶ ಗಬ್ಲಡ್ಕ ಅವರ ಪಾತ್ರವೂ ಇತ್ತು. ಸುಳ್ಯದ ಮೂಲೆ ಮೂಲೆ ಯಲ್ಲಿ ಯುವಕರಲ್ಲಿ ಹಿಂದುತ್ವದ ಬೀಜ ಬಿತ್ತಿ ಬಿಜೆಪಿಗೊಂದು ಭದ್ರ ಬುನಾದಿ ಹಾಕುವಲ್ಲಿ, ಶಾಸಕ ಅಂಗಾರ ನಿರಂತರವಾಗಿ ಗೆಲ್ಲುತ್ತಿರುವ ಹಿಂದೆ ಲಕ್ಷ್ಮೀಶ ಗಬ್ಲಡ್ಕ ಎಂಬ ಕಟ್ಟರ್‌ ಹಿಂದುತ್ವವಾದಿ ಯುವಕನ ಬೆವರಿತ್ತು ಎನ್ನುವುದನ್ನು ಆರ್‌ಎಸ್‌ಎಸ್‌ ಮಂದಿ ಸುಲಭವಾಗಿ ಮರೆತುಬಿಟ್ಟಿದ್ದೇ ಇಲ್ಲಿನ ಯುವಕರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಹಾಗೆ ನೋಡಿದರೆ ಲಕ್ಷ್ಮೀಶ ಗಬ್ಲಡ್ಕ ರಾಜೀನಾಮೆ ನೀಡುವಂತೆ ಮಾಡಿರುವುದರ ಹಿಂದೆ ಕಾರಣ ಹಲವಿದೆ. ಭವಿಷ್ಯದ ನಾಯಕರನ್ನು ಬೆಳೆಯಲು ಬಿಡದ, ಪ್ರಶ್ನಿಸುವ ಗುಣವನ್ನು ಸಹಿಸದ ಆರ್‌ಎಸ್‌ಎಸ್‌ ಸಂಘಟನೆ ನಿಂತ ನೀರಾಗುತ್ತಿದೆ. ಅದರ ಕವಲೊಡೆದು ಬಂದ ಹಿಂದೂ ಜಾಗರಣ ವೇದಿಕೆ, ಬಜರಂಗದಳದಂತಹ ಸಂಘಟನೆ ಟಿಸಿಲೊಡೆದು ಆಲದ ಮರದಂತೆ ಬೆಳೆಯುತ್ತಿದೆ. ಇಂಥ ಅಪಾಯವನ್ನು ಕಂಡೇ ಆರ್‌ಎಸ್‌ಎಸ್‌ನ ತಲೆಮಾರೊಂದು ಯುವಪಡೆಯನ್ನು ಬೆಳೆಯಲು ಬಿಡುತ್ತಿಲ್ಲ ಎನ್ನುವುದಷ್ಟೇ ಲಕ್ಷ್ಮೀಶ ಗಬ್ಲಡ್ಕ ರಾಜೀನಾಮೆಯ ಹಿಂದಿರುವ ಸರಳ ಸೂತ್ರ ಎಂದಷ್ಟೇ ವ್ಯಾಖ್ಯಾನಿಸಬಹುದು.

ಹಾಗಂದ ಮಾತ್ರಕ್ಕೆ ಲಕ್ಷ್ಮೀಶ ಗಬ್ಲಡ್ಕ ಮಾತ್ರ ಆರ್‌ಎಸ್‌ಎಸ್‌ನ ಬಲಿಪಶು ಅಲ್ಲ, ಪುತ್ತೂರಿನ ಪುತ್ತಿಲನಿಂದ ಹಿಡಿದು ಹಳೆಯಂಗಡಿಯ ಸತೀಶ ಭಟ್‌, ಸುರತ್ಕಲ್ಲಿನ ಸತ್ಯಜಿತ್‌ ತನಕ ಎಲ್ಲರೂ ಒಂದಲ್ಲ ಒಂದು ಬಾರಿ ಸಂಘಪರಿವಾರದ ಹೀನ ರಾಜಕೀಯಕ್ಕೆ ಬಲಿಯಾದವರು. ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ತಾಕತ್ತು(ಅಸಲಿಗೆ ನಳಿನ್‌ರ ಸ್ಥಾನದಲ್ಲಿ?) ಸತ್ಯಜಿತ್‌ಗಿತ್ತು. ಆದರೆ ಆರ್‌ಎಸ್‌ಎಸ್‌ನ ಬೌದ್ಧಿಕ್‌ನಲ್ಲಿ ಬೆಳೆದ ಸತ್ಯಜಿತ್‌ ರಾಜಕೀಯ ಮಾಡಲಿಲ್ಲ. ಅವರನ್ನು ನಿರಂತರವಾಗಿ ತುಳಿಯಲಾಯಿತು. ಸುರತ್ಕಲ್‌ನಂತಹ ಜಾಗದಲ್ಲಿ ಇದ್ದುಕೊಂಡು ಸಂಘಟನೆ ಕಟ್ಟುವುದು ಸುಲಭವಲ್ಲ ಎನ್ನುವ ಹೊತ್ತಿನಲ್ಲಿ ಸತ್ಯಜಿತ್‌ ಜಾಗರಣ ವೇದಿಕೆ ಕಟ್ಟಿದರು. ಆರ್‌ಎಸ್‌ಎಸ್‌ ಹಿಂದಿನಿಂದ ಇತ್ತು ನಿಜ. ಆದರೆ ಅದನ್ನು ಸರಿಯಾಗಿ ಗಮನಿಸಿ ನೋಡಿ. ಈಗಿನ ತಲೆಮಾರು ಆರ್‌ಎಸ್‌ಎಸ್‌ ಶಾಖೆಯ ಹತ್ತಿರಕ್ಕೂ ಹೋಗುತ್ತಿಲ್ಲ. ಆಗಾಗ ಆರ್‌ಎಸ್‌ಎಸ್‌ನ ಸರಸಂಘಚಾಲಕರು ಚಡ್ಡಿ ಬಿಟ್ಟು ಪ್ಯಾಂಟನ್ನು ಸಮವಸ್ತ್ರವನ್ನಾಗಿ ಬದಲಾಯಿಸುವ ಮಾತನ್ನಾಡುತ್ತಾರೆ. ಆದರೂ ಬದಲಾವಣೆ ಸಾಧ್ಯವಾಗಿಲ್ಲ. ಆರ್‌ಎಸ್‌ಎಸ್‌ನ ಹತ್ತಿರಕ್ಕೆ ಯುವಕರನ್ನು ಸೆಳೆಯುವಂತೆ ಮಾಡಿದ್ದು ಇದೇ ಜಾಗರಣ ವೇದಿಕೆ, ಬಜರಂಗದಳ.

ಹಗಲು ರಾತ್ರಿ ನಿದ್ದೆಗೆಟ್ಟು ಗೋವುಗಳನ್ನು ಹಿಡಿದು ಹಿಂದುಗಳ ಭಾವನೆಯನ್ನು ವೋಟುಬ್ಯಾಂಕಿನಲ್ಲಿ ಜಮೆ ಮಾಡಿದ್ದು ಇದೇ ಜಾಗರಣ ವೇದಿಕೆಯ ಹುಡುಗರು.

ಈಗ ಇದೇ ಹುಡುಗರನ್ನು ಸಂಘಪರಿವಾರದ ಕರ್ಮಠರು ಒದ್ದೊಡಿಸುತ್ತಿದ್ದಾರೆ. ಹಾಗೆ ಹೋದವರು ಇನ್ನಷ್ಟು ಪೊಲೀಸ್‌ ಕೇಸುಗಳನ್ನು ಮೈಮೇಲೆ ಹಾಕಿಸಿಕೊಳ್ಳುವುದನ್ನು ತಪ್ಪಿಸಿಕೊಂಡರು ಎಂದು ಒಂದು ವಾಕ್ಯದ ಷರಾ ಬರೆೆದು ಸುಮ್ಮನಿರಬಹುದು. ಆದರೆ ಮುಂದಿನ ದಿನಗಳಲ್ಲಿ ಇದೇ ಜಿಲ್ಲೆ ಹಿಂದುತ್ವದ ಶವಪೆಟ್ಟಿಗೆಗೆ ಅಂತಿಮ ಮೊಳೆಯಾಗಲೂ ಬಹುದು ಎನ್ನುವುದು ಸಂಘನಿಕೇತನದಿಂದಲೇ ಕೇಳಿಬರುವ ಮಾತು.

jayakirana

1 comment:

MOHD. ARIF said...

this news is perfect lesson to young hindu generation. this is the right time to think that how communal forces using and throwing young hindu boys after using them.
hatsaf jayakirana