ಕಾಡುತ್ತಿದೆ ಬೆಂಬಿಡದ ಕಾಯಿಲೆ; ನೆರವಿಗೆ ಮನವಿ

ಮಂಗಳೂರು: ಮೂರು ಅಂಗುಳ ಜಾಗದಲ್ಲಿ ಊರಿರುವ ನಾಲ್ಕು ಕಂಬಗಳಿಗೆ ಹೊದ್ದಿರುವ ತರ್ಪಾಲಿನ ನೆರಳೇ ಇವರಿಗೆ ಆಸರೆ. ಒಂದು ಕೆ.ಜಿ ಅಕ್ಕಿಯನ್ನು ಬೇಯಿಸಿ ಮಾಡಿರುವ ತಿಳಿ ಗಂಜಿಯೇ ಇವರ ಮೂರು ನಾಲ್ಕು ದಿನದ ಆಹಾರ. ಬೀಡಿ ಕಟ್ಟಿ ಬರುವ ನೂರು-ಇನ್ನೂರು ಆದಾಯ ಕುಟುಂಬದ ವೈದ್ಯರ ಜೇಬಿಗೆ. ಹೀಗಿದೆ ಈ ಸಂಸಾರದ ಪರಿಸ್ಥಿತಿ. ಆದರೂ ಈತನಕ ಯಾರೂ ಇವರತ್ತ ಕಣ್ಣೆತ್ತಿ ನೋಡಿಲ್ಲ.
ಕುಕ್ಕಾಜೆ ಕೊರಂಪಾಡಿ ನಿವಾಸಿ ಅಬ್ಬಾಸ್ ತೀವ್ರವಾದ ಹೃದಯ ಕಾಯಿಲೆಯಿಂದ ತತ್ತರಿಸಿ ಚಿಕಿತ್ಸೆ ಪಡೆದು ಸಾವನ್ನು ಗೆದ್ದು ಬಂದರಾದರೂ, ಇದೀಗ ಅವರ ಬದುಕಿನ ಲಯವೇ ತಪ್ಪಿದಂತಾಗಿದೆ.
ಒಂದು ಕಡೆ ಅಂಗವಿಕಲ ಹೆಂಡತಿ ಜೊತೆಗೆ ಇಬ್ಬರು ಪುಟ್ಟ ಮಕ್ಕಳು ಇವರಿಗೆಲ್ಲ ಆಧಾರ ಸ್ತಂಭವಾಗಿರುವ ಅಬ್ಬಾಸ್ ಆಲಿ ಇದೀಗ ದುಡಿಯಲೂ ಆಗದೆ ನಡೆಯಲೂ ಆಗದ ಸ್ಥಿತಿಯಲ್ಲಿ ಮನೆಯ ಮೂಲೆ ಸೇರಿದ್ದಾರೆ. ಹೀಗಾಗಿ ಇವರಿಗೆ ಈಗ ಹೊಟ್ಟೆಗಿಲ್ಲದ ಸ್ಥಿತಿ. ಯಾರಿಂದಲೋ ಎಂದೋ ಖರೀದಿಸಿದ್ದ ಎರಡು ಸೆಂಟ್ಸ್ ಸ್ಥಳದಲ್ಲಿ ಪ್ಲಾಸ್ಟಿಕ್ ಹೊದ್ದಿರುವ ಗುಡಿಸಲಿನಲ್ಲಿ ಅಬ್ಬಾಸ್ ದಿನ ಕಳೆಯುತ್ತಿದ್ದಾರೆ. ಮೊನ್ನೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆ ಸೇರಿದಾಗ ಮುಸ್ಲಿಂ ಸಂಘಟನೆಯೊಂದು ಆಸ್ಪತ್ರೆ ಬಿಲ್ ಪಾವತಿಸಿದ್ದು ಬಿಟ್ಟರೆ ಈತನಕ ಅವರ ನೆರವಿಗೆ ಬಂದವರೇ ಇಲ್ಲ. ಹೀಗಾಗಿ ಅಬ್ಬಾಸ್ ಕುಟುಂಬ ಈಗ ಊಟ ಕ್ಕಿಲ್ಲದೆ ದಿನ ಕಳೆಯುತ್ತಿದೆ. ಹೀಗಾಗಿ ಇವರಿಗೆ ಮುಂದಿನ ಮೂರು ವರ್ಷಕ್ಕೆ ಬೇಕಾಗುವಷ್ಟು ಅಕ್ಕಿಯನ್ನು ಜಯಕಿರಣ ಪತ್ರಿಕಾ ಬಳಗ ಉಚಿ ವಾಗಿ ಒದಗಿಸಿ ಕೊಟ್ಟಿದೆ. ಹಾಗೆಯೇ ದಾನಿಗಳು ನೆರವು ನೀಡು ವಂತೆಯೇ ಕೋರಿದೆ.
-jayakirana
No comments:
Post a Comment