VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 20, 2010

ಸಂಚಾರಿ ನ್ಯಾಯಾಲಯದಲ್ಲಿ 20 ಪ್ರಕರಣಗಳು ಇತ್ಯರ್ಥ; 18 ವಿಚ್ಛೇದನದ್ದು !

ಮಂಗಳೂರು: ರಾಜ್ಯದ ಏಕೈಕ ಸಂಚಾರಿ ನ್ಯಾಯಾಲಯ ನಿನ್ನೆ ಮಂಗಳೂರಿಗೆ ಆಗಮಿಸಿತ್ತು. ಈ ಸಂದರ್ಭ 20 ಪ್ರಕರಣಗಳನ್ನು ತ್ವರಿತ ವಾಗಿ ಇತ್ಯರ್ಥಪಡಿಸಲಾಯಿತು. ಇದರಲ್ಲಿ 18 ಪ್ರಕರಣಗಳು ವಿವಾಹ ವಿಚ್ಛೇದನದ್ದೆಂಬುವುದು ಕುತೂಹಲ ಮತ್ತು ಅಚ್ಚರಿಗೆ ಕಾರಣವಾಗಿದೆ.

ನ್ಯಾಯಾಲಯದಲ್ಲಿ ಆಮೆ ನಡಿಗೆ ಯಲ್ಲಿ ಸಾಗುತ್ತಿರುವ ಪ್ರಕರಣಗಳನ್ನು ಶೀಘ್ರವಾಗಿ ಮುಗಿಸುವ ಸಲುವಾಗಿ ರಾಜ್ಯದಲ್ಲಿ 95 ಲಕ್ಷ ವೆಚ್ಚದ ವಾಹನ ದಲ್ಲಿ ಏಕೈಕ ಸಂಚಾರಿ ನ್ಯಾಯಾಲಯ ಸ್ಥಾಪಿಸಲಾಗಿದೆ.

ಈ ವಾಹನ ಮೊನ್ನೆ ಮಂಗಳೂ ರಿಗೆ ಬಂದು ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ನಿನ್ನೆ ನ್ಯಾಯಾ ಲಯದ ಆವರಣಕ್ಕೆ ಬಂದಿದ್ದು ನ್ಯಾಯಾಧೀಶರು ಭರ್ಜರಿ ಸ್ವಾಗತ ದೊಂದಿಗೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ 20 ಪ್ರಕರಣ ಗಳ ವಿಚಾರಣೆ ನಡೆಸಲಾಗಿದ್ದು ತೀರ್ಪನ್ನು ನೀಡಲಾಗಿದೆ.

ಇವುಗಳ ಪೈಕಿ 18 ಪ್ರಕರಣಗಳು ವಿವಾಹ ವಿಚ್ಛೇದನದ್ದಾಗಿತ್ತು. ವಿವಾಹ ವಿಚ್ಛೇದನದ ಪ್ರಕರಣಗಳ ತೀರ್ಮಾನ ಹೊರಬರಲು ಮೂರರಿಂದ ನಾಲ್ಕು ವರ್ಷ ಬೇಕಾಗುತ್ತದೆ. ಇದು ವಿಚ್ಛೇ ದನ ಪಡೆಯಲಿರುವ ದಂಪತಿಗಳ ಅಸಮಾಧಾನಕ್ಕೆ ಕಾರಣವೂ ಆಗಿತ್ತು. ನಿನ್ನೆ 18 ಪ್ರಕರಣಗಳು ಇತ್ಯರ್ಥ ವಾಗಿರುವುದು ದಂಪತಿಗಳ ಸಂತಸಕ್ಕೆ ಕಾರಣವಾಗಿದೆ. ಇದರಿಂದಾಗಿ ಹೊಸ ಜೀವನ ನಡೆಸಲು ಅನುಕೂ ಲವಾಗಿದೆಯೆಂಬ ಅಭಿಪ್ರಾಯ ದಂಪತಿಗಳದ್ದಾಗಿತ್ತು. ಈ ಸಂದರ್ಭ ದಲ್ಲಿ ಹಿರಿಯ ವಕೀಲರಾದ ರಾಮದಾಸ್‌ ಉಪಸ್ಥಿತರಿದ್ದರು.

source: jayakirana

No comments: