
ಪಣಂಬೂರಿನ ಎನ್‌ಎಂಪಿಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಂಗ ಳೂರು ಪ್ರೀಮಿಯರ್ ಲೀಗ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಂಗಳವಾರ ಮಂಗಳೂ ರಿನ ಕೋಸ್ಟಲ್‌ಡೈಜೆಸ್ಟ್ ಡಾಟ್ ಕಾಮ್ ತಂಡ ೯೮ ರನ್ ಅಂತರದಿಂದ ಭರ್ಜರಿ ಜಯ ದಾಖಲಿಸಿದೆ.
ಮಣಿಪಾಲದ ಡಿಡೋಸ್ ಹರಿಕೇನ್ಸ್ ತಂಡದ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗಿಗೆ ಇಳಿದ ಕೋಸ್ಟ ಲ್‌ಡೈಜೆಸ್ಟ್ ೬ ವಿಕೆಟಿಗೆ ೨೦೨ ರನ್ ಪೇರಿಸಿತು. ಕರ್ನಾಟಕದ ರಣಜಿ ಆಟಗಾರ ಜೆ. ಅರುಣ್ ಕುಮಾರ್ ಅಮೋಘ ಬ್ಯಾಟಿಂಗ್ ನಡೆಸಿ ೬೭ ಎಸೆತಗಳಲ್ಲಿ ೧೧ ಬೌಂಡರಿ ಮತ್ತು ೪ ಸಿಕ್ಸರ್ ಸಹಿತ ೯೪ ರನ್ ಸಿಡಿಸಿದರು. ಜುಬೇರ್ ಕೇವಲ ೧೬ ಎಸೆತಗಳಲ್ಲಿ ೪ ಬೌಂಡರಿ ಮತ್ತು ೪ ಸಿಕ್ಸರ್ ಸಹಿತ ೪೧ ರನ್ ಬಾರಿಸಿದರು. ಆರಿಫ್ ಮುಕ್ಕ ೪೨ ರನ್ನಿಗೆ ೨ ವಿಕೆಟ್ ಕಿತ್ತರು.
ಬೃಹತ್ ಸವಾಲನ್ನು ಬೆನ್ನಟ್ಟಿದ ಡಿಡೋಸ್ ಹರಿಕೇನ್ಸ್ ೧೭.೧ ಓವರ್‌ಗಳಲ್ಲಿ ಬರೀ ೧೦೪ ರನ್ನಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಶರಣಾಯಿತು. ರಕ್ಷಣ್ ರೈ ೩೪ ಮತ್ತು ರಾಹುಲ್ ಕೋಟ್ಯಾನ್ ೪೬ ಹೊಡೆದರು.
Report - Udayavani
Photo - Costal
No comments:
Post a Comment