VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 17, 2010

ಪುತ್ತೂರು ನಾಗರಿಕ ಕ್ರಿಯಾ ಸಮಿತಿಯಿಂದ ಪ್ರತಿಭಟನೆ

ಪುತ್ತೂರು: ಇಲ್ಲಿನ ಪುರಸಭಾ ವ್ಯಾಪ್ತಿಯ ನಾಗರಿಕರಿಗೆ ನಗರ ಯೋಜನಾ ಪ್ರಾಧಿಕಾರ, ಸ್ಥಳೀಯಾ ಡಳಿತ, ಕಂದಾಯ ಸೇರಿದಂತೆ ಇನ್ನಿತರ ಇಲಾಖೆಯ ಅವೈಜ್ಞಾನಿಕ ನೀತಿಗಳಿಂ ದಾಗಿ ಆಗುತ್ತಿರುವ ತೊಂದರೆಯನ್ನು ವಿರೋಧಿಸಿ ಪುತ್ತೂರಿನ ನಾಗರಿಕ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ನಗರ ಯೋಜನಾ ಪ್ರಾಧಿಕಾರ ಮತ್ತು ನೆಮ್ಮದಿ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಸುಮಾರು ಒಂದೂವರೆ ಗಂಟೆ ಕಾಲ ನಗರ ಯೋಜನ ಪ್ರಾಧಿಕಾರದ ಕಚೇರಿಗೆ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ನೆಮ್ಮದಿ ಕೇಂದ್ರಕ್ಕೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ರವಳನಾಥ ಪ್ರಭು, ಸಂಚಾಲಕರಾದ ಸಿಪಿಐಎಂ ತಾಲೂಕು ಕಾರ್ಯದರ್ಶಿ ಪಿ.ಕೆ. ಸತೀಶನ್‌, ಸಮಿತಿಯ ಉಪಾಧ್ಯಕ್ಷರಾದ ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಸಿಪಿಐಎಂ ಮುಖಂಡ ಬಿ.ಎಂ. ಭಟ್‌, ಕಾಂಗ್ರೆಸ್‌ ನಾಯಕ ಸುಧಾಕರ ಶೆಟ್ಟಿ, ಜಯಕರ್ನಾಟಕ ಸಂಘಟನೆಯ ಉಪಾಧ್ಯಕ್ಷ ರಾಜೇಶ್‌ ಮಿತ್ತೂರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ ದರು.

ನಗರ ಯೋಜನಾ ಪ್ರಾಧಿಕಾರ ಮತ್ತು ಪುರಸಭೆಯ ಅವೈಜ್ಞಾನಿಕ ನೀತಿಗಳಿಂದಾಗಿ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಅಧಿಕಾರಿಗಳು ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ರೂಪಿಸಿದ ಕಾಯಿದೆ ಕಾನೂನು ಅಧಿಕಾರಿಗಳು ಹೇಳಿದಂತೆ ಕುಣಿಯುವ ಸ್ಥಳಿಯಾಡಳಿತ ವ್ಯವಸ್ಥೆ, ಬಂಡವಾಳ ಶಾಹಿಗಳು ಸೃಷ್ಟಿಸಿದ ಜನವಿರೋಧಿ ನಿಲುವುಗಳಿಂದ ಜನಸಾಮಾನ್ಯರಿಗೆ ಅನ್ಯಾಯವಾಗುತ್ತಿದೆ ಎಂದವರು ಆರೋಪಿಸಿದರು. ಪುರಸಭಾ ಮಾಜಿ ಸದಸ್ಯ ಬಿ.ಎ. ರಹಿಮಾನ್‌ ಬಪ್ಪಳಿಗೆ, ಪುರಸಭಾ ಸದಸ್ಯರಾಜ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ, ವಾಣಿ ಶ್ರೀಧರ್‌ ಪ್ರತಿಭಟನೆಯಲ್ಲಿ ಭಾಗವಸಿದ್ದರು.


source: jayakirana

No comments: