VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 17, 2010

ಮಂಗಳೂರು ಖಾಝಿ ಅಬ್ದುಲ್ಲ ಮುಸ್ಲಿಯಾರ್‌ರ ಸಾವು ಪ್ರಕರಣ: ರಾಜ್ಯ ಸರಕಾರ ಮಧ್ಯ ಪ್ರವೇಶಕ್ಕೆ ಖಾದರ್ ಒತ್ತಾಯ

ಮಂಗಳೂರು, ಫೆ.೧೬: ಮಂಗಳೂರು ಖಾಝಿ ಹಾಜಿ ಸಿ.ಎಂ. ಅಬ್ದುಲ್ಲ ಮುಸ್ಲಿಯಾರ್‌ರ ನಿಗೂಢ ಮರಣದ ಹಿನ್ನಲೆಯಲ್ಲಿ ಗೊಂದಲ ಉಂಟಾಗಿದ್ದು, ಕರ್ನಾಟಕ ರಾಜ್ಯ ಸರಕಾರ ತಕ್ಷಣ ಮಧ್ಯ ಪ್ರವೇಶಿಸಬೇಕು ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

ಹಿರಿಯ ವಿದ್ವಾಂಸ ಅಬ್ದುಲ್ಲ ಮುಸ್ಲಿಯಾರ್, ಇಸ್ಲಾಮ್ ಧರ್ಮ ವಿರೋಧಿಸುವ ಕೃತ್ಯ ಎಸಗಲಾರರು. ಇದೀಗ ಇವರ ಸಾವಿನಲ್ಲಿ ಗೊಂದಲ ಉಂಟಾಗಿದ್ದು, ಇದರ ನಿವಾರಣೆಗೆ ಕೇರಳ ಸರಕಾರ ಸಮಗ್ರ ತನಿಖೆ ನಡೆಸಬೇಕು. ಅವರು ಮಂಗಳೂರು ಖಾಝಿಯಾಗಿಯೂ ಸೇವೆ ಸಲ್ಲಿಸಿರುವ ಕಾರಣ ಕರ್ನಾಟಕ ರಾಜ್ಯ ಸರಕಾರ ಕೂಡ ಮಧ್ಯಪ್ರವೇಶಿಸಿ ಗೊಂದಲ ನಿವಾರಿಸಬೇಕು ಎಂದು ಖಾದರ್ ಮನವಿ ಮಾಡಿದ್ದಾರೆ.

ಸಿಬಿ‌ಐ ತನಿಖೆಗೆ ಒತ್ತಾಯ

ಮಂಗಳೂರು: ಮಂಗಳೂರು ಖಾಝಿಯವರ ನಿಗೂಢ ಮರಣದ ಬಗ್ಗೆ ಸಿಬಿ‌ಐ ತನಿಖೆ ನಡೆಸಬೇಕು ಎಂದು ಮುಸ್ಲಿಂ ಲೀಗ್ ರಾಜ್ಯ ಸಮಿತಿ ಸದಸ್ಯ ಹಾಜಿ ಸುಲೈಮಾನ್ ಎಸ್, ಕರ್ನಾಟಕ ಮುಸ್ಲಿಂ ಪರಿಷತ್‌ನ ಅಧ್ಯಕ್ಷ ಹಾಜಿ ಹಮೀದ್ ಕಂದಕ್, ಪ್ರಧಾನ ಕಾರ್ಯದರ್ಶಿ ನದೀಂ ಉಳ್ಳಾಲ ಪ್ರತ್ಯೇಕ ಹೇಳಿಕೆಗಳಲ್ಲಿ ಒತ್ತಾಯಿಸಿದ್ದಾರೆ.

ಅಂತಿಮ ದರ್ಶನ

ಮಂಗಳೂರು: ಸೋಮವಾರ ನಿಧನರಾದ ಮಂಗಳೂರು ಖಾಝಿ ಅಲ್‌ಹಾಜ್ ಸಿ.ಎಂ. ಅಬ್ದುಲ್ಲ ಮುಸ್ಲಿಯಾರ್‌ರ ಅಂತಿಮ ಸಂಸ್ಕಾರವು ಇಂದು ನಡೆಯಿತು.

ಈ ಸಂದರ್ಭ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್, ಉಪಾಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್ ಅಂತಿಮ ದರ್ಶನ ಪಡೆದರು.

ಖಾಝಿಯವರ ಮರಣದ ಹಿಂದೆ ನಿಗೂಢತೆ ಇದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಕೇರಳ ಹಾಗೂ ಕರ್ನಾಟಕ ಸರಕಾರವನ್ನು ಒತ್ತಾಯಿಸಿದೆ.

Source - VB

No comments: