ಚಲನಚಿತ್ರ ನಟರೂ ಆದ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಜಗ್ಗೇಶ್ ವಿಧಾನ ಪರಿಷತ್ ಸದಸ್ಯರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಪರಿಷತ್ ಸದಸ್ಯರಾಗಿ ಬುಧವಾರ ಬೆಂಗಳೂರಿ ನಲ್ಲಿ ಪ್ರಮಾಣ ವಚನ ಸ್ವೀಕರಿ ಸಿದ ಚಲನಚಿತ್ರ ನಟ ಜಗ್ಗೇಶ್ ಅವರನ್ನು ಪರಿಷತ್ತಿನ ಸಭಾಪತಿ ವೀರಣ್ಣ ಮತ್ತಿ ಕಟ್ಟಿ ಹಸ್ತಲಾಘವ ಮಾಡಿ ಅಭಿನಂದಿಸಿದರು. ಜಗ್ಗೇಶ್ ಪತ್ನಿ ಪರಿಮಳಾ ಚಿತ್ರದಲ್ಲಿದ್ದಾರೆ.
ಬೆಂಗಳೂರು: ಚಲನಚಿತ್ರ ನಟರೂ ಆದ ಕೆಎಸ್‌ಆರ್‌ಟಿಸಿ ಉಪಾಧ್ಯಕ್ಷ ಜಗ್ಗೇಶ್ ವಿಧಾನ ಪರಿಷತ್ ಸದಸ್ಯರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಆದಿಚುಂಚನಗಿರಿ ಮಠದ ಬಾಲಗಂಗಾಧರ ನಾಥ ಸ್ವಾಮೀಜಿ ಮತ್ತು ಸತ್ಯ, ನಿಷ್ಠೆ ಹೆಸರಿನಲ್ಲಿ ಜಗ್ಗೇಶ್ ಪ್ರಮಾಣ ವಚನ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಾರಿಗೆ ಸಚಿವ ಆರ್.ಅಶೋಕ, ಜಗ್ಗೇಶ್ ಪತ್ನಿ ಪರಿಮಳಾ ಸೇರಿದಂತೆ ಇತರರು ಹಾಜರಿದ್ದರು.
ಸಿನಿಮಾ ರಂಗದ ಕುಂದುಕೊರತೆಗಳ ಬಗ್ಗೆ ಕ್ರಿಯಾಯೋಜನೆ ರೂಪಿಸಿ, ಬಗೆಹರಿ ಸಲು ಶ್ರಮಿಸಲಾಗುವುದು. ರಾಜಕೀಯ ಜೀವನ ಕೊಟ್ಟ ತುರುವೇಕೆರೆ ಕ್ಷೇತ್ರವನ್ನು ಎಂದೂ ಮರೆಯುವುದಿಲ್ಲ. ಅಲ್ಲಿನ ಜನರ ಸೇವೆ ಮಾಡುವುದಾಗಿ ನುಡಿದರು.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment