VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 17, 2010

ಬಂಟ್ವಾಳ: ಬಿಜೆಪಿ ಕಾರ್ಯಕರ್ತರ ರಾಜೀನಾಮೆ ಬೆದರಿಕೆ

ಬಂಟ್ವಾಳ: ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿ ನರಿಕೊಂಬುವಿನಲ್ಲಿ ನಡೆದ ಕಬಡ್ಡಿ ಪಂದ್ಯಾಟಕ್ಕೆ ಭಾಗವಹಿಸಿದ ಬಿಜೆಪಿ ಮುಖಂಡರ ವರ್ತನೆಯಿಂದ ಬೇಸತ್ತ ಕಾರ್ಯಕರ್ತರು ಸಾಮೂಹಿಕ ರಾಜಿನಾಮೆ ನೀಡಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಭಾನುವಾರ ಗ್ರಾಮ ಸಮಿತಿಯ ಸಭೆ ಕರೆಯಲು ನಿರ್ಧರಿಸಿದ್ದಾರೆ. ಪಂದ್ಯಾಟಕ್ಕೆ ಬಿಜೆಪಿ ವರಿಷ್ಠರು ಸಮಾರಂಭಕ್ಕೆ ಬರಬಾರದೆಂದು ಕಪ್ಪು ಬಾವುಟ ಹಾರಿಸಿದ್ದರು. ಆದರೂ ಸಚಿವ ಕೃಷ್ಣ ಪಾಲೇಮಾರ್‌ ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲು ಸಮಾರಂಭಕ್ಕೆ ಭಾಗವಹಿಸಿ ವಿವಾದಕ್ಕೆ ಕಾರಣರಾಗಿದ್ದಾರೆ.

ಬೆಂಗಳೂರು ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಶನ್‌, ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌, ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್‌ ಜಂಟಿ ಆಶ್ರಯದಲ್ಲಿ ನರಿಕೊಂಬು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಬಳಿಯ ಕ್ರೀಡಾಂಗಣದಲ್ಲಿ ಕಬಡ್ಡಿ ಪಂದ್ಯಾಟ ಏರ್ಪಡಿಸಿದ್ದರು. ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಹಾಗೂ ಸಂಸದರನ್ನು ಆಹ್ವಾಸಿದ್ದರು. ಸಂಘಟಕರು ಸ್ಥಳೀಯ ಬಿಜೆಪಿಯ ಮುಖಂಡರನ್ನು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಇದರಿಂದ ಅಸಮಾಧಾನಗೊಂಡ ಅವರು ಬಿಜೆಪಿ ಮುಖಂಡರು ಕಾರ್ಯಕ್ರಮಕ್ಕೆ ಭಾಗವಹಿಸಬಾರದಾಗಿ ಸೂಚಿಸಿದ್ದರು. ಅಲ್ಲದೆ ಕಪ್ಪು ಬಾವುಟ ಪ್ರದರ್ಶಿಸಿದ್ದರು.

ಕಾರ್ಯಕರ್ತರನ್ನು ಲೆಕ್ಕಿಸದೇ ಸಚಿವ ಕೃಷ್ಣ ಪಾಲೇಮಾರ್‌, ಸಂಸದ ನಳಿನ್‌ ಕುಮಾರ್‌ ಕಾರ್ಯಕ್ರಮಕ್ಕೆ ಭೇಟಿ ನೀಡಿ ಅಸಮಾಧಾನ ಗೊಳಿಸಿದ್ದರು. ಕಾರ್ಯಕ್ರಮಕ್ಕೆ ಭಾಗವಹಿಸಿ ತೆರಳಿದ ನಳಿನ್‌ ಕುಮಾರ್‌ ಅವರನ್ನು ತಡೆದು ನಿಲ್ಲಿಸಿದ ಬಿಜೆಪಿಯ ನರಿಕೊಂಬು ಗ್ರಾಮ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರು

ಪ್ರಶ್ನಿಸಿದ್ದಾರೆ. ಅವರನ್ನು ಸಮಾಧಾನಿಸಿದ ನಳಿನ್‌ ಕುಮಾರ್‌ ನನ್ನ ಗೆಲುವಿಗೆ ಕಾಂಗ್ರೆಸ್‌ ಶಾಸಕ ರಮಾನಾಥ ರೈ ಮತ್ತು ಪ್ರಕಾಶ್‌ ಕಾರಂತ ಕಾರಣ. ಆದ್ದರಿಂದ ಅವರ ಋಣ ಸಂದಾಯಿಸಲು ಇಲ್ಲಿಗೆ ಬಂದಿದ್ದೇನೆ ಎಂದಿದ್ದರು. ಅವರ ಮಾತು ಕಾರ್ಯಕರ್ತರನ್ನು ಮತ್ತೂ ಗರಂ ಆಗುವಂತೆ ಮಾಡಿದೆ. ನಮ್ಮನ್ನು ಕಡೆಗಣಿಸಲಾಗಿದೆ ಎಂದಿರುವ ಬಿಜೆಪಿಯ ಗ್ರಾಮ ಸಮಿತಿಯ ಮುಖಂಡರು ನಾವು ಪಕ್ಷಕ್ಕೆ ರಾಜೀನಾಮೆ ಕೊಡುವುದಾಗಿ ಎಚ್ಚರಿಸಿದ್ದಾರೆ.


source: jayakirana

No comments: