VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 22, 2010

ಉದ್ಯಾವರ ಸಹಜ ಸ್ಥಿತಿಯತ್ತ

ಕಾಪು: ಇಲ್ಲಿಯ ಠಾಣಾವ್ಯಾಪ್ತಿಯ ಉದ್ಯಾವರ ಪಿತ್ರೋಡಿ ಎಂಬಲ್ಲಿಯ ಮೀನು ಸಂಸ್ಕರಣಾ ಘಟಕ ವಿರೋಧಿ ಹೋರಾಟಗಾರರ ಮನೆಗೆ ನುಗ್ಗಿ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿ ಶನಿವಾರ ಉದ್ವಿಗ್ನ ಗೊಂಡಿದ್ದ ಉದ್ಯಾವರ ಸಹಜ ಸ್ಥಿತಿಯತ್ತ ಮರಳಿದೆ.

ಉದ್ಯಾವರ ಪರಿಸರ ಸಂರಕ್ಷಣಾ ಸಮಿತಿಯ ಪ್ರಮುಖ ಮೋಹನ ಸಾಲ್ಯಾನ್‌ರ ಮನೆಗೆ ಫಿಶ್‌ಮಿಲ್‌ ಮಾಲಕರಿಂದ ಪ್ರೇರಿತ ಕರುಣಾಕರ, ಬಾಬು ಕೊಳರವನ್ನೊಳಗೊಂಡ 15 ಮಂದಿಯ ದುಷ್ಕರ್ಮಿಗಳ ತಂಡ ಅಕ್ರಮ ಪ್ರವೇಶ ಮಾಡಿ ಮೋಹನ್‌ ಸಾಲ್ಯಾನ್‌ ಮತ್ತು ಅವರ ಪತ್ನಿ ಶಬರಿಯವರ ಮೇಲೆ ಹಲ್ಲೆ ಮಾಡಿದ್ದರು. ಈ ಹಲ್ಲೆಯನ್ನು ಖಂಡಿಸಿ ಪಿತ್ರೋಡಿ, ಉದ್ಯಾವರದ ಜನತೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬಂದ್‌ ಆಚರಿಸಿದ್ದರು.

ಕಾನೂನುಬಾಹಿರವಾಗಿ ಪರಿಸರ ಮಾಲಿನ್ಯ ಮಾಡುತ್ತಿರುವ ಉದ್ಯಾವರ ಪಿತ್ರೋಡಿಯ ಫಿಶ್‌ಮಿಲ್‌ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾ.ಪಂ. ಮತ್ತು ಜಿಲ್ಲಾಧಿಕಾರಿಗಳಿಗೆ ಉದ್ಯಾವರ ಪರಿಸರ ಸಂರಕ್ಷಣಾ ಸಮಿತಿ ಮನವಿ ಮಾಡಿತ್ತು. ಮನವಿಗೆ ಸ್ಪಂದಿಸಿದ ಉದ್ಯಾವರ ಗ್ರಾಮ. ಪಂ. ಫಿಶ್‌ಮಿಲ್‌ನ ತ್ಯಾಜ್ಯ ವಿಲೇವಾರಿಗಾಗಿ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಅಳವಡಿಸಬೇಕು ಮತ್ತು ಈ ಬಗ್ಗೆ ಕ್ರಮ ಕೈಗೊಳ್ಳುವವರೆಗೆ ಮಿಲ್‌ ಕಾರ್ಯಾಚರಣೆಯನ್ನು ನಿಲ್ಲಿಸಬೇಕೆಂದು ಫಿಶ್‌ಮಿಲ್‌ ಮಾಲಕರು ಗಳಿಗೆ ನೋಟಿಸ್‌ ಜಾರಿ ಮಾಡಿತ್ತು.

ತ್ಯಾಜ್ಯ ವಿಲೇವಾರಿಗಾಗಿ ಪೈಪ್‌ಲೈನ್‌ನ್ನು ಉದ್ಯಾವರ ಮಟ್ಟುವಿನ ಅರಬೀ ಸಮುದ್ರಕ್ಕೆ ಜೋಡಿಸಲು ಶನಿವಾರ ಕಾಮಗಾರಿ ಆರಂಭಿಸಿದ್ದರು. ಇದನ್ನೂ ಉದ್ಯಾವರ ಪರಿಸರ ಸಂರಕ್ಷಣಾ ಸಮಿತಿಯ ಸದಸ್ಯರು ವಿರೋಧಿಸಿ ದ್ದರು. ಶನಿವಾರ ಪೈಪ್‌ ಲೈನ್‌ ಕಾಮಗಾರಿ ನಡೆಯುತ್ತಿದ್ದಾಗ ವಿರೋಧಿಸಿದ್ದಾರೆ ಎಂಬ ನೆಪವೊ ಮೋಹನ ಸಾಲ್ಯಾನ್‌ರ ಮನೆಗೆ ನುಗ್ಗಿದ ಸುಮಾರು 15 ಜನರ ತಂಡ ಅವರಿಗೆ ಹಲ್ಲೆ ನಡೆಸಿದೆ. ಉದ್ಯಾವರ ಪರಿಸರಾದ್ಯಂತ 144 ಸೆಕ್ಷನ್‌ ಜಾರಿಗೊಳಿಸಲಾಗಿದ್ದು, ಇಂದು ಬೆಳಿಗ್ಗೆ 10 ಗಂಟೆಯವರೆಗೆ ವಿಸ್ತರಿಸಲಾಗಿದೆ.



source: jayakirana

No comments: