VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 10, 2010

ಸುರತ್ಕಲ್‌: ವಿದ್ಯಾರ್ಥಿಗಳ ಮೇಲೆ ಹಲ್ಲೆ: ಠಾಣೆಗೆ ಬಂದ ಅಮ್ಮಂದಿರು

ಸುರತ್ಕಲ್‌: ಇಲ್ಲಿನ ಇಡ್ಯಾ ಮೈದಾನದಲ್ಲಿ ವಾಲಿಬಾಲ್‌ ಆಡುತ್ತಿದ್ದ ವಿದ್ಯಾರ್ಥಿಗಳಿಗೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರೆ ಎಂದು ಆರೋಪಿಸಿ ಕೆಲವು ಮಹಿಳೆಯರು ಸುರತ್ಕಲ್‌ ಪೊಲೀಸ್‌ ಠಾಣೆಗೆ ಬಂದು ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಿನ್ನೆ ಸಂಜೆ ನಡೆಯಿತು.

ಇಡ್ಯಾ ಮೈದಾನದಲ್ಲಿ ವಾಲಿಬಾಲ್‌ ಆಡುತ್ತಿದ್ದ ಅರಾಫ್‌ತ್‌, ಅಸ್ಲಂ, ನವಾಝ್‌, ಶಾಹಿಲ್‌, ಸಲೀಂ,ಝುಲ್ಪಿಕರ್‌ ಎಂಬವರ ಮೇಲೆ ಪೊಲೀಸರು ಲಾಠಿಯಿಂದ ಹೊಡೆದು, ವಾಲಿಬಾಲ್‌ ಬಲೆಯನ್ನು ಹರಿದು ಹಾಕಿದ್ದಾರೆ ಹಾಗೂ ಕಂಬವನ್ನು ಮುರಿದಿದ್ದಾರೆ.ಮಾತ್ರವಲ್ಲದೆ ಮುಸ್ತಫಾ, ಹಸನ್‌ ಹಾಗೂ ನಾಸೀರ್‌ ಎಂಬವರನ್ನು ಎಳೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳ ತಾಂದಿರು ಸುರತ್ಕಲ್‌ ಪೊಲೀಸ್‌ ಠಾಣೆಗೆ ತೆರಳಿ ಪೊಲೀಸರನ್ನು ತರಾಟೆಗೆ ತಗೆದುಕೊಂಡರು. ಇನ್‌ಸ್ಪೆಕ್ಟರ್‌ ಬೆಳ್ಳಿಯಪ್ಪ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಅವರು ಹಿಂದಿರುಗಿದರು. ಈ ಮೂವರು ಯುವಕರನ್ನು ಯಾವ ಕಾರಣಕ್ಕಾಗಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು ಎಂಬುದೀಗ ಕುತೂಹಲದ ವಿಷಯವಾಗಿದೆ.

source: jayakirana

No comments: