ಉಪ್ಪಿನಂಗಡಿ: ಇಲ್ಲಿನ ರಾಮಕುಂಜ ಗ್ರಾಮದ ಊಂತಿಲದ ಮನೆಯೊಂದರಲ್ಲಿ ಸ್ಫೋಟಕವೊಂದು ಸ್ಫೋಟಗೊಂಡು ನಾಯಿಯೊಂದು ಸತ್ತುಬಿದ್ದಿದ್ದು, ಭಾರಿ ಅನಾಹುತ ತಪ್ಪಿದಂತಾಗಿದೆ.
ಘಟನೆ ಹಿನ್ನಲೆ: ಊಂತಿಲ ನಿವಾಸಿ ತಿರುಪತಿ ಭಟ್ ಎಂಬವರ ಮನೆಯೊಳಗೆ ನಿನ್ನೆ ಸಂಜೆ ಏಳರ ವೇಳೆಗೆ ಸಾಕು ನಾಯಿ ಕಪ್ಪು ಪ್ಲಾಸ್ಟಿಕ್ ಚೀಲವನ್ನು ಕಚ್ಚಿ ತಂದಿತ್ತು. ಇದನ್ನು ಕಂಡ ಮನೆ ಯಜಮಾನ ನಾಯಿಗೆ ಬೈದರೂ, ಅದು ಹೊರಗೆ ಹೋಗದಿ ದ್ದರಿಂದ ಅವರು ಕಾಲಿನಿಂದ ನಾಯಿ ಬಾಯಲ್ಲಿದ್ದ ಪ್ಲಾಸ್ಟಿಕ್‌ಗೆ ಒದ್ದರು. ಪ್ಲಾಸ್ಟಿಕ್‌ನಲ್ಲಿ ಭಾರದ ವಸ್ತುವೊಂದಿದ್ದು, ಒದ್ದ ಪರಿಣಾಮ ಅದು ಹೊರಗಿನ ಅಂಗಳಕ್ಕೆ ಬಿದ್ದು, ಭಾರೀ ಸದ್ದಿನಲ್ಲಿ ಸ್ಫೋಟಗೊಂಡಿತು. ಇದರ ಸದ್ದು ಊಂತಿಲ ಪರಿಸರದಾದ್ಯಂತ ಕೇಳಿದೆ. ಕೇಳಿದ ಸದ್ದಿನ ಕುತೂಹದಿಂದ ಘಟನಾ ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಸ್ಫೋಟಗೊಂಡ ಭೀಕರತೆಯಿಂದ ಸ್ಥಳದಲ್ಲಿ ಹೊಗೆಯೂ ಆವರಿಸಿದ್ದು, ಇದರಿಂದ ಮನೆಯ ವರು ಜೀವಂತವಿರುವ ಬಗ್ಗೆ ನೆರೆದವರೆಲ್ಲರೂ ಸಂಶಯ ವ್ಯಕ್ತಪಡಿಸಿದ್ದರು. ಬಳಿಕ ಧೈರ್ಯ ಮಾಡಿ ಮನೆಯೊಳಗೆ ಪ್ರವೇಶಿಸಿದವರೊಬ್ಬರು ಮನೆಯೊಳಗಿದ್ದವರನ್ನು ಜೀವಂತವಾಗಿ ಕಂಡಿದ್ದು, ನಾಯಿ ಮಾತ್ರ ಮೃತಪಟ್ಟಿರುವುದು ಕಂಡು ಬಂತು. ತಕ್ಷಣ ಅಗ್ನಿ ಶಾಮಕ ದಳ ಮತ್ತು ಕಡಬ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಘಟನಾ ಸ್ಥಳಕ್ಕೆ ಬಂದ ಕಡಬ ಪೊಲೀಸರು ಸ್ಫೋಟಗೊಂಡಿ ರುವ ವಸ್ತುವನ್ನು ಪರಿಶೀಲಿಸಿ ಅದು ಕೃಷಿ ಹಾನಿಗೊಳಿಸುವ ಪ್ರಾಣಿಗಳಿಗೆ ಇಡುವ ಸ್ಫೋಟಕವೆಂದು ಸಂಶಯ ವ್ಯಕ್ತಪಡಿಸಿದರು. ಸ್ಥಳದಲ್ಲಿ ಹೊಗೆ ಆವರಿಸಿದ್ದರಿಂದ ಪೊಲೀಸರಿಗೆ ಸರಿ ಯಾಗಿ ತನಿಖೆ ನಡೆಸಲು ವಿಳಂಬ ವಾಗಿದೆ. ಅಲ್ಲದೆ ಕಡಬ ಠಾಣಾಧಿಕಾರಿ ಸ್ಫೋಟಕ ಇಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.
source: jayakirana
Feb 10, 2010
Subscribe to:
Post Comments (Atom)
No comments:
Post a Comment