ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೂರನೇ ವರ್ಷದ ಟ್ವೆಂಟಿ-20 ಟೂರ್ನಿಯನ್ನು ಬಹಿಷ್ಕರಿ ಸಲು ಸುದ್ದಿ ಚಾನೆಲ್‌ಗಳು ನಿರ್ಧರಿಸಿವೆ.
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮೂರನೇ ವರ್ಷದ ಟ್ವೆಂಟಿ-20 ಟೂರ್ನಿಯನ್ನು ಬಹಿಷ್ಕರಿ ಸಲು ಸುದ್ದಿ ಚಾನೆಲ್‌ಗಳು ನಿರ್ಧರಿಸಿವೆ. ದೇಶದ ಪ್ರಮುಖ ಸುದ್ದಿ ಚಾನೆಲ್ ಗಳನ್ನು ಪ್ರತಿನಿಧಿಸುವ ನ್ಯೂಸ್ ಬ್ರಾಡ್ ಕಾಸ್ಟರ್ಸ್ ಅಸೋಸಿಯೇಷನ್ (ಎನ್‌ಬಿ ಎ) ಈ ತೀರ್ಮಾನ ಕೈಗೊಂಡಿದೆ.
ಐಪಿಎಲ್ ಪಂದ್ಯಗಳ ಸುದ್ದಿ ಪ್ರಸಾರಕ್ಕೆ ಸಂಬಂಧಿಸಿದಂತೆ ಸಂಘಟಕರು ಕಠಿಣ ಷರತ್ತುಗಳನ್ನು ವಿಧಿಸಿರುವುದೇ ಇದಕ್ಕೆ ಕಾರಣ. ಈ ಕುರಿತ ವಿವಾದ ಬಗೆಹರಿಸಲು ಐಪಿಎಲ್ ಪಂದ್ಯಗಳ ಪ್ರಸಾರದ ಹಕ್ಕು ಹೊಂದಿರುವ ಸೆಟ್‌ಮ್ಯಾಕ್ಸ್, ಲೀಗ್‌ನ ಸಂಘಟಕರು ಮತ್ತು ಎನ್‌ಬಿಎ ಮಧ್ಯೆ ನಡೆದ ಮಾತುಕತೆ ವಿಫಲವಾಗಿದೆ.
ಚಾನೆಲ್‌ವೊಂದು ಐಪಿಎಲ್ ಪಂದ್ಯಗಳ ತುಣುಕನ್ನು ದಿನಕ್ಕೆ ಏಳು ನಿಮಿಷಗಳಿಗಿಂತ ಅಧಿಕ ಸಮಯ ಪ್ರಸಾರ ಮಾಡಬಾರದು ಎಂಬ ಹೊಸ ನಿಯಮವನ್ನು ಎನ್‌ಬಿಎ ವಿರೋಧಿಸಿದೆ.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment