ಪುತ್ತೂರು: ಮುಸ್ಲಿಮರ ಗೂಡಂ ಗಡಿಗೆ ಬೆಂಕಿ ಹಚ್ಚಿ, ಕಿಡಿಗೇಡಿ ಕೃತ್ಯಗಳ ನ್ನು ನಡೆಸಿ ಕೋಮುಗಲಭೆ ಸೃಷ್ಟಿಸುವ ಹುನ್ನಾರ ನಡೆಸಿದ್ದ ವಿಕೃತ ಮನೋ ಭಾವದ ಕರಾವಳಿ ಅಲೆ ವರದಿಗಾರ ನವೀನ್ ಪಡ್ನೂರು ಸಹಿತ ಮೂವರು ಶ್ರೀರಾಮ ಸೇನೆಯ ಕಾರ್ಯಕರ್ತರನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
ಕರಾವಳಿ ಅಲೆ ಪುತ್ತೂರು ವರದಿ ಗಾra , ಶ್ರೀರಾಮ ಸೇನೆಯ ವಿದ್ಯಾಥ ಸೇನೆ ಘಟಕದ ಅಧ್ಯಕ್ಷನೂ ಆಗಿರುವ ಪುತ್ತೂರಿನ ಇಂಡಸ್ ಕಾಲೇಜಿನ ವಿದ್ಯಾಥರ್ಿ, ಪಡ್ನೂರಿನ ಧರ್ನಪ್ಪ ಗೌಡರ ಪುತ್ರ ನವೀನ್, ಪಡ್ನೂರಿನ ಮುಂಡಾಜೆ ನಿವಾಸಿ ನಾರಾಯಣ, ಪಡ್ನೂರು ನಿವಾಸಿ ಪ್ರವೀಣ್ ಬಂಧಿತ ಆರೋಪಿಗಳಾಗಿದ್ದು ಈ ಪೈಕಿ ನವೀನನೇ ಮುಖ್ಯ ಆರೋಪಿ ಎಂದು
ಪೊಲೀಸರು ತಿಳಿಸಿದ್ದಾರೆ. ಪುತ್ತೂರಿನ ಮುರ ಎಂಬಲ್ಲಿನ ಉಮ್ಮರ್ ಎಂಬವರ ದಿನಸಿ ಮತ್ತು ತರಕಾರಿ ಅಂಗಡಿಗೆ ಕಳೆದ ಶುಕ್ರವಾರ ರಾತ್ರಿ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಇವ ರನ್ನು ಬಂಧಿಸಲಾಗಿದೆ. ಬಂಧಿತರ ವಿಚಾ ರಣೆಯ ವೇಳೆ ಇವರು ನಡೆಸಿದ ಮತ್ತೊಂದು ಕೃತ್ಯ ಮತ್ತು ರೂಪಿಸಿದ್ದ ಸಂಚು ಬೆಳಕಿಗೆ ಬಂದಿದೆ.
ಕಳೆದ ಶನಿವಾರ ಶ್ರೀರಾಮಸೇನೆ ಕರೆ
ನೀಡಿದ್ದ ರಾಜ್ಯ ಬಂದ್ ವೇಳೆ ಕೆಎಸ್ ಆರ್ಟಿಸಿ ಬಸ್ಸೊಂದಕ್ಕೆ ಮಂಜಲ್ಪಡ್ಪು ಎಂಬಲ್ಲಿ ಕಲ್ಲು ಹೊಡೆದದ್ದು ತಾವೆಂದು ಆರೋಪಿಗಳು ತನಿಖೆಯ ವೇಳೆ ಬಾಯ್ಬಿ ಟ್ಟಿದ್ದಾರೆ. ಬುಧವಾರ ರಾತ್ರಿ ಪುತ್ತೂರಿಗೆ ಸಮೀಪದ ಪುರುಷರಕಟ್ಟೆ ಎಂಬಲ್ಲಿನ ಎರಡು ಗೂಡಂಗಡಿಗಳಿಗೆ ಬೆಂಕಿ ಹಚ್ಚುವ ಯೋಜನೆಯನ್ನು ಇದೇ ತಂಡ ರೂಪಿಸಿರುವುದು ಬೆಳಕಿ ಗೆ ಬಂದಿದೆ. ಮಂಗಳವಾರ ಆರೋಪಿ ಗಳ ಬಂಧನ ನಡೆದಿರುವುದರಿಂದ ಈ ಕಿಡಿಗೇಡಿಗಳು ನಡೆಸಲುದ್ದೇಶಿಸಿದ್ದ ದುಷ್ಕೃತ್ಯವೊಂದು ವಿಫಲವಾಗಿದೆ.
ಪುತ್ತೂರಿನ ಕೆಎಸ್ಆರ್ಟಿಸಿ ಬಳಿಯ ಗಾಂಧಿಕಟ್ಟೆಯಲ್ಲಿನ ಗಾಂಧಿ ಪ್ರತಿಮೆಗೆ ಇವರದ್ದೇ ಬಳಗದ ದುಷ್ಕಮರ್ಿಗಳು ಚಪ್ಪಲಿ ಹಾರ ತೊಡಿಸಿ ಅವಮಾನಿಸಿರುವುದು ತನಿಖೆಯ ವೇಳೆ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ತನಿಖೆ ಮುಂದುವರಿಯುತ್ತಿದೆ ಎಂದವರು ಮಾಹಿತಿ ನೀಡಿದ್ದಾರೆ.
ಪತ್ರಕರ್ತರ ಸಮೂಹಕ್ಕೆ ಮಸಿ ಬಳಿದ ಕಿಡಿಗೇಡಿ
ಕಾಲೇಜು ಜೀವನ ಮತ್ತು ವಿದ್ಯಾಥರ್ಿ ಸೇನೆಯ ಸಂಘಟನೆಯ ಲ್ಲಿದ್ದುಕೊಂಡು ಪತ್ರಕರ್ತನಾಗಿ ಕರಾ ವಳಿ ಅಲೆ ಸೇರಿಕೊಂಡ ನವೀನ್ ಇದೀಗ ತನ್ನ ದುಷ್ಕೃತ್ಯದ ಮೂಲಕ ಪತ್ರಕರ್ತರ ಸಮೂಹಕ್ಕೆ ಮಸಿ ಬಳಿದಿದ್ದಾನೆ. ಪತ್ರಕರ್ತ ಸಮೂಹಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದ್ದಾನೆ.
ಕರಾವಳಿ ಅಲೆ ಪತ್ರಿಕೆ ಸೇರಿ ಕೊಂಡ ಐದನೇ ದಿನದಲ್ಲೇ ಪಾಣಾಜೆ ೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ಬ್ಲ್ಯಾಕ್ ಮೇಲ್ ಮಾಡಿ 50 ಸಾವಿರ ರೂ. ಅವರಿಂದ ಕಸಿದುಕೊಳ್ಳಲು ಪ್ರಯತ್ನಿಸಿದ್ದ ನವೀನ್ ಆ ವಿಚಾರ ಬಯಲಾದ ಬಳಿಕ ವೈದ್ಯರ ವಿರುದ್ಧ ಸುದ್ಧಿ ಪ್ರಕಟಿಸಿ ಅವರ ಮಾನಹಾನಿಗೆ ಯತ್ನಿಸಿದ್ದ ಎಂಬ ಪ್ರಚಾರವಿತ್ತು. ಪತ್ರಿಕಾ ವರದಿಗಾರ ನೆಂಬ ಸೋಗಿನಲ್ಲಿ ಬ್ಲ್ಯಾಕ್ಮೇಲ್ ತಂತ್ರ ಮುಂದುವರಿಸಿದ್ದ ಆತ ಹಲವ ರಿಗೆ ಪೀಡನೆ ನೀಡಿದ್ದ ಎಂಬ ಮಾಹಿತಿ ಯನ್ನು ಪೊಲೀಸರೇ ಕಲೆ ಹಾಕಿ ದ್ದಾರೆ.
ಪುತ್ತೂರಿನ ಸಕರ್ಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿರುವ ಡಾ. ದೀಪಕ್ ರೈಯವರೊಂದಿಗೆ ಅನುಚಿತ ವಾಗಿ ವತರ್ಿಸಿದ ಪ್ರಕರಣದಲ್ಲಿ ಆ ವೈದ್ಯರೇ ಆತನನ್ನು ಕಾಲರ್ ಹಿಡಿದು ಆಸ್ಪತ್ರೆಯಿಂದ ಹೊರದಬ್ಬಿದ್ದರು. ಆ ಪ್ರಕರಣವನ್ನು ಪೊಲೀಸ್ ಠಾಣೆಯಲ್ಲಿ ರಾಜಿಯಲ್ಲಿ ಮುಗಿಸಲಾಗಿತ್ತು.
ಪುತ್ತೂರಿನ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು ಜೊತೆ ಜಗಳ ವಾಡಿದ್ದ ಪ್ರಕರಣವೂ ಪೊಲೀಸ್ ಠಾಣೆಯ ತನಕ ತಲುಪಿತ್ತು.
ಕ್ರಿಮಿನಲ್ ಹಿನ್ನೆಲೆ
ಅಂಗಡಿಗೆ ಬೆಂಕಿ ಹಚ್ಚಿ ಕೋಮು ಗಲಭೆಗೆ ಹುನ್ನಾರ ನಡೆಸಿದ್ದ ಪ್ರಕರಣದ ಪ್ರಮುಖ ಆರೋಪಿ ನವೀನ್ನ ಮೇಲೆ ಶ್ರೀರಾಮ ಸೇನೆಯವರು ಪುತ್ತೂರಿ ನಲ್ಲಿ ಈ ಹಿಂದೆ ಹಮ್ಮಿಕೊಂಡಿದ್ದ ಶನಿಪೂಜೆಯ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿ ಸಿದ ಎರಡು ಕೇಸುಗಳಿವೆ.
ಪುತ್ತೂರಿನ ಜೂನಿಯರ್ ಕಾಲೇಜು ವಿದ್ಯಾಥರ್ಿ ನಾಯಕನಾಗಿದ್ದ ಸಂದರ್ಭದಲ್ಲಿ ನಡೆಸಿದ್ದ ಹಲ್ಲೆ ಪ್ರಕರಣದಲ್ಲೂ ಆತ ಪ್ರಮುಖ ಆರೋಪಿಯಾಗಿದ್ದ ಎಂದು ಪೊಲೀ ಸರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಪುತ್ತೂರಿನ ಸೇಡಿಯಾಪು ಎಂಬಲ್ಲಿ ವಿದ್ಯಾಥರ್ಿನಿಯೊಂದಿಗೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದ ನವೀನ್ ಸಾರ್ವ ಜನಿಕರಿಂದ ಒದೆ ತಿಂದಿದ್ದನೆಂಬ ಪ್ರಚಾರ ಈ ಹಿಂದೆ ಆಗಿತ್ತು.
ಪುತ್ತೂರಿನ ಮುರದಲ್ಲಿನ ಉಮ್ಮರ್ ಎಂಬವರ ಅಂಗಡಿಗೆ ಬೆಂಕಿ ಹಚ್ಚಿದ ಆರೋಪಿ ಪ್ರಕರಣದ ವರದಿಯನ್ನು ಕರಾವಳಿ ಅಲೆಗೆ ತಾನೇ ಬರೆದಿದ್ದ. ಅಲ್ಲದೆ ನೀವು 53 ಮಂದಿ ಪೊಲೀಸರಿದ್ದೀರಿ ಅದನ್ನು ಪತ್ತೆ ಮಾಡಲು ನಿಮ್ಮಿಂದ ಆಗುವುದಿಲ್ಲವೇ ಎಂದು ಪುತ್ತೂರು ನಗರ ಠಾಣೆಯ ಇನ್ಸ್ಪೆಕ್ಟರ್ ಶ್ರೀಕಾಂತ್ರವರನ್ನು ಪ್ರಶ್ನಿಸಿದ್ದ ಎಂಬ ಸೋಜಿಗದ ವಿಚಾರ ಬೆಳಕಿಗೆ ಬಂದಿದೆ.
ಪುತ್ತೂರಿನಲ್ಲಿ ಅಂಗಡಿಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕರಾವಳಿ ಅಲೆ ಪತ್ರಿಕೆಯ ವರದಿಗಾರ ಭಾಗಿ ಯಾಗಿರುವುದಕ್ಕೆ ದ.ಕ ಜಿಲ್ಲಾ ಪೊಲೀ ಸ್ ವರಿಷ್ಠಾಧಿಕಾರಿ ಸುಬ್ರಹ್ಮಣ್ಯೇಶ್ವರ್ ರಾವ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂತಹ ದುಷ್ಕೃತ್ಯದಲ್ಲಿ ಮಾಧ್ಯಮ ದವರು ಭಾಗವಹಿಸಿರುವುದು ತನಗೆ ಅಚ್ಚರಿಯಾಗಿದೆ ಎಂದು ಅವರು ಜಯಕಿರಣಕ್ಕೆ ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಗೆ ಮಾ. 3ರವರೆಗೆ ನ್ಯಾಯಾಂಗ ಬಂಧನ ವಿಧಿಸ ಲಾಗಿದೆ.
Feb 18, 2010
Subscribe to:
Post Comments (Atom)
No comments:
Post a Comment