VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 18, 2010

ದಲಿತನಿಗೆ ಹಲ್ಲೆ: ಕೊಲೆ ಬೆದರಿಕೆ

ವಿಟ್ಲ: ಕೊಳ್ನಾಡು ಗ್ರಾಮದ ಪಿಲಿಯಡ್ಕ ಎಂಬಲ್ಲಿ ಸಂಬಂಧಿಕರ ಜಗಳದ ನಡುವೆ ಸಿಕ್ಕಿಬಿದ್ದ ದಲಿತ ಕೂಲಿ ಕಾಮರ್ಿಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜಾತಿನಿಂದನೆಗೈದು ಕೊಲೆಬೆದರಿಕೆಯೊಡ್ಡಿದ ಘಟನೆ ಬುಧವಾರ ನಡೆದಿದೆ.
ಕೊಳ್ನಾಡು ಗ್ರಾಮದ ಖಂಡಿಗ ನಾರಾಯಣ ಬೈರ ಅವರ ಪುತ್ರ ಕೂಲಿ ಕಾಮರ್ಿಕ ರಮೇಶ ಬೈರ (37) ಎಂಬವರೇ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡವರಾಗಿದ್ದು, ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಿಲಿಯಡ್ಕ ನಿವಾಸಿ ಸೇಸಪ್ಪ ಶೇಖ(70) ಅವರು ತನ್ನ ಮನೆಗೆ ರಮೇಶ ಬೈರರನ್ನು ಬುಧವಾರ ಕೆಲಸಕ್ಕೆ ಕರೆದಿದ್ದು, ಅವರ ಜೊತೆ ತೋಟದಲ್ಲಿ ಪೈಪ್ ಜೋಡಣೆ ಕಾರ್ಯ ಮಾಡುತ್ತಿದ್ದರು. ಈ ಸಂದರ್ಭಕ್ಕೆ ಏಕಾಏಕಿಯಾಗಿ ತೋಟ ದೊಳಗೆ ಅಕ್ರಮ ಪ್ರವೇಶ ಮಾಡಿದ ಸೇಸಪ್ಪ ಶೇಖ ಅವರ ಅಣ್ಣನ ಮಗ ಜಯರಾಮ ಶೇಖ(50), ಆತನ ಪತ್ನಿ ಮತ್ತಿತರರು ಸೇಸಪ್ಪ ಶೇಖರ ಕಾಲು ಮತ್ತು ಸೊಂಟಕ್ಕೆ ದೊಣ್ಣೆಯಿಂದ ಹೊಡೆದಿದ್ದು, ಜೊತೆಗಿದ್ದ ರಮೇಶರವರ ಕೈಗೆ ಕತ್ತಿಯಿಂದ ಕಡಿದು ಹಲ್ಲೆ ನಡೆಸಿದ್ದಾರೆ. ಅಲ್ಲದೆ ಜಾತಿ ನಿಂದನೆ ಮಾಡಿದ್ದು, ಇನ್ನು ಮುಂದೆ ಕೆಲಸಕ್ಕೆ ಬಾರದಂತೆ ಬೆದರಿಕೆ ಹಾಕಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿರುವುದಾಗಿ ಗಾಯಾಳು ದೂರು ನೀಡಿದ್ದಾರೆ.ಆರೋಪಿಗಳ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ದಲಿತ ಕೂಲಿಕಾಮರ್ಿಕನ ಮೇಲೆ ವಿನಾ ಕಾರಣ ಹಲ್ಲೆ ನಡೆಸಿ ಕೊಲೆಬೆದರಿಕೆ ಒಡ್ಡಿದ ಆರೋಪಿ ಜಯರಾಮ ಶೇಖನನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ದಲಿತ ಸೇವಾ ಸಮಿತಿಯ ಅಧ್ಯಕ್ಷ ಸೇಸಪ್ಪ ಬೆದ್ರಕಾಡು ಆಗ್ರಹಿಸಿದ್ದಾರೆ.

No comments: