
ಕೋಲ್ಕತ್ತಾ:ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಸಂದರ್ಭದಲ್ಲಿ ಗಾಯಗೊಂಡಿದ್ದ ಭಾರತದ ವೇಗಿ ಜಹೀರ್ ಖಾನ್ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅಲಭ್ಯರಾಗಿದ್ದು, ಕೇರಳ ವೇಗಿ ಎಸ್. ಶ್ರೀಶಾಂತ್‌ಗೆ ಅವಕಾಶ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗಾಯದಿಂದಾಗಿ ಜಹೀರ್ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್‌ನ ಕೊನೆಯ ದಿನದಲ್ಲೂ ಫೀಲ್ಡಿಗಿಳಿಯಲಿಲ್ಲ. ಇದೀಗ ಏಕದಿನ ಸರಣಿಗೂ ಅಲಭ್ಯರಾಗಿರುವುದು ಮಹೇಂದ್ರ ಸಿಂಗ್ ಧೋನಿ ಪಡೆ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿದೆ.
ಅದೇ ವೇಳೆ ಗಾಯದಿಂದ ಚೇತರಿಸಿಕೊಂಡಿರುವ ಶ್ರೀಶಾಂತ್‌ಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಲಯ ಕಳೆದುಕೊಂಡಿರುವ ಮತ್ತೊಬ್ಬ ವೇಗಿ ಇಶಾಂತ್ ಶರ್ಮಾರನ್ನು ಆಯ್ಕೆಗೆ ಪರಿಗಣಿಸಲಿಲ್ಲ.
ಗಾಯದ ಹಿನ್ನೆಲೆಯಲ್ಲಿ ಆಲ್‌ರೌಂಡರ್ ಯುವರಾಜ್ ಸಿಂಗ್ ಮತ್ತು ಆರಂಭಿಕ ಗೌತಮ್ ಗಂಭೀರ್ ಕೂಡಾ ಮೊದಲೆರಡು ಪಂದ್ಯಗಳನ್ನು ಕಳೆದುಕೊಂಡಿದ್ದಾರೆ. ಅದೇ ವೇಳೆ ಸಹೋದರಿಯ ವಿವಾಹ ಸಮಾರಂಭಕ್ಕೆ ಹರಭಜನ್ ಸಿಂಗ್ ತೆರಳಲಿರುವುದರಿಂದ ಅವರ ಸೇವೆಯಿಂದಲೂ ಟೀಮ್ ಇಂಡಿಯಾ ವಂಚಿತವಾಗಲಿದೆ.
ತಂಡ ಇಂತಿದೆ: ಮಹೇಂದ್ರ ಸಿಂಗ್ ಧೋನಿ (ನಾಯಕ, ಕೀಪರ್), ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡುಲ್ಕರ್, ವಿರಾಟ್ ಕೋಹ್ಲಿ, ಯೂಸುಫ್ ಪಠಾಣ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಸುರೇಶ್ ರೈನಾ, ಆಶಿಷ್ ನೆಹ್ರಾ, ಸುದೀಪ್ ತ್ಯಾಗಿ, ಪ್ರವೀಣ್ ಕುಮಾರ್, ಅಮಿತ್ ಮಿಶ್ರಾ, ಅಭಿಷೇಕ್ ನಾಯರ್ ಮತ್ತು ಎಸ್. ಶ್ರೀಶಾಂತ್.
No comments:
Post a Comment