VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 18, 2010

ದಲಿತರ ಮನೆಯಲ್ಲಿ ಊಟ ಸವಿದ ಗಡ್ಕರಿ


ದಲಿತ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅನುಸರಿಸಿದ್ದ ದಾರಿಯನ್ನು ಈಗ ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರೂ ಅನುಸರಿಸುತ್ತಿದ್ದಾರೆ.

ಇಂದೋರ್ (ಪಿಟಿಐ): ದಲಿತ ಸಮುದಾಯವನ್ನು ಸೆಳೆಯಲು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅನುಸರಿಸಿದ್ದ ದಾರಿಯನ್ನು ಈಗ ಬಿಜೆಪಿ ನೂತನ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಅವರೂ ಅನುಸರಿಸುತ್ತಿದ್ದಾರೆ.

ಇಂದೋರ್‌ನಲ್ಲಿ ಬುಧವಾರ ಆರಂಭಗೊಂಡಿರುವ ಮೂರು ದಿನಗಳ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಮಂಗಳವಾರ ಆಗಮಿಸಿದ್ದ ಗಡ್ಕರಿ ಅವರು, ದಲಿತ ಸಮುದಾಯವನ್ನು ಆಕರ್ಷಿಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ಹುಟಿದ ಸ್ಥಳ ಮಹುಗೆ ಭೇಟಿ ನೀಡಿ, ದಲಿತರ ಮೆಚ್ಚಿನ ನಾಯಕನ ಪುತ್ಥಳಿಗೆ ಪುಷ್ಪಗುಚ್ಛವಿಟ್ಟು ಗೌರವ ಸಲ್ಲಿಸಿದರು.

ಆ ಬಳಿಕ, ದಲಿತ ವಾಲ್ಮೀಖಿ ಸಮುದಾಯಕ್ಕೆ ಸೇರಿದ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಪ್ರೀತಿ ಕರೋಸಿಯಾ ಅವರ ಮನೆಗೆ ತೆರಳಿ ಮಧ್ಯಾಹ್ನದ ಭೋಜನವನ್ನೂ ಮಾಡಿದರು.

ತಮ್ಮ ಪಕ್ಷ ಪರಿಶಿಷ್ಟ ಜಾತಿ, ಪಂಗಡದ ಜನರು, ಅಲ್ಪಸಂಖ್ಯಾತರ ಮತ್ತು ಇತರ ದುರ್ಬಲ ವರ್ಗದ ಜನರ ಮೇಲೆಯೇ ಗಮನ ಹರಿಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ಘೋಷಿಸಿದರು.

ಸರತಿ ಸಾಲಲ್ಲಿ ನಿಲ್ಲುವ ಕೊನೆಯ ವ್ಯಕ್ತಿಗೂ ಸೇವೆ ನೀಡುವ ಉದ್ದೇಶದ ‘ಅಂತ್ಯೋದಯ’ ಎಂಬ ಹೊಸ ಯೋಜನೆಯನ್ನು ನಿತಿನ್ ಗಡ್ಕರಿ ಹುಟ್ಟುಹಾಕಿದ್ದಾರೆ.

ದಲಿತ ಸಮುದಾಯದ ಮನ ಗೆದ್ದು ಕೆಳ ವರ್ಗಗಳಲ್ಲಿ ಪಕ್ಷದ ವೋಟ್‌ಬ್ಯಾಂಕ್ ಅನ್ನು ಶೇ 10ರಷ್ಟು ಏರಿಸುವ ಗುರಿಯನ್ನು ಬಿಜೆಪಿ ನೂತನ ಅಧ್ಯಕ್ಷ ಹೊಂದಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್‌ಗಾಂಧಿ ಅವರು ಉತ್ತರಪ್ರದೇಶದ ಪ್ರವಾಸದ ಸಂದರ್ಭದಲ್ಲಿ ದಲಿತರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈಗ ಗಡ್ಕರಿ ಕೂಡ ಅವರ ಹಾದಿಯನ್ನೇ ತುಳಿದಿದ್ದಾರೆ.

‘ಒಳಜಗಳ ಸಲ್ಲ’

ಸಣ್ಣ ಮನಸ್ಸುಳ್ಳವರು ಎಂದೂ ದೊಡ್ಡವರಾಗಲು ಸಾಧ್ಯವಿಲ್ಲ ಅಂತೆಯೇ ಒಡೆದು ಹೋದ ಮನಸ್ಸಿವರೆಂದೂ ಎದ್ದು ನಿಲ್ಲಲು ಸಾಧ್ಯವಿಲ್ಲ.

ಇಂದೋರ್ (ಮಧ್ಯಪ್ರದೇಶ): ಸಣ್ಣ ಮನಸ್ಸುಳ್ಳವರು ಎಂದೂ ದೊಡ್ಡವರಾಗಲು ಸಾಧ್ಯವಿಲ್ಲ ಅಂತೆಯೇ ಒಡೆದು ಹೋದ ಮನಸ್ಸಿವರೆಂದೂ ಎದ್ದು ನಿಲ್ಲಲು ಸಾಧ್ಯವಿಲ್ಲ.

ಪಕ್ಷದ ಪ್ರಸಕ್ತ ಸ್ಥಿತಿಯನ್ನು ತಮ್ಮದೇ ಶೈಲಿಯಲ್ಲಿ ವ್ಯಾಖಾನಿಸಿದ ಬಿಜೆಪಿಯ ಅಧ್ಯಕ್ಷ ನಿತಿನ್ ಗಡ್ಕರಿ ಪ್ರತಿಯೊಬ್ಬ ನಾಯಕರು ಇದನ್ನು ಮನಗಾಣಬೇಕು ಎಂದರು.

ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು ಪ್ರತಿಯೊಬ್ಬ ನಾಯಕರೂ ತಮ್ಮೆಲ್ಲ ಒಳಜಗಳಗಳನ್ನು ಬದಿಗಿಟ್ಟು ಪಕ್ಷದ ಪುನಶ್ಚೇತನಕ್ಕಾಗಿ ದುಡಿಯಬೇಕು ಎಂದು ಅವರು ಕರೆಯಿತ್ತರು.

ಪ್ರಜಾವಾಣಿ ವಾರ್ತೆ

No comments: