ಹೊಸ ಸಂಗಾತಿಗಳತ್ತ ಬಿಜೆಪಿ ಕಣ್ಣು
ಎನ್‌ಡಿಎ ಪರಿಧಿಯನ್ನು ಮತ್ತಷ್ಟು ವಿಸ್ತರಿಸುವ ಇರಾದೆ ಹೊಂದಿರುವ ಬಿಜೆಪಿ ಈಗ ಈ ನಿಟ್ಟಿನಲ್ಲಿ ಹೊಸ ಸಂಗಾತಿಗಳ ಬೇಟೆಗೆ ಸಜ್ಜಾಗುವ ಸಂಭವಗಳು ಕಂಡು ಬರುತ್ತಿವೆ.
ಇಂದೋರ್ (ಪಿಟಿಐ): ಎನ್‌ಡಿಎ ಪರಿಧಿಯನ್ನು ಮತ್ತಷ್ಟು ವಿಸ್ತರಿಸುವ ಇರಾದೆ ಹೊಂದಿರುವ ಬಿಜೆಪಿ ಈಗ ಈ ನಿಟ್ಟಿನಲ್ಲಿ ಹೊಸ ಸಂಗಾತಿಗಳ ಬೇಟೆಗೆ ಸಜ್ಜಾಗುವ ಸಂಭವಗಳು ಕಂಡು ಬರುತ್ತಿವೆ.
ಬುಧವಾರದಿಂದ ಇಲ್ಲಿ ಆರಂಭ ಗೊಳ್ಳಲಿರುವ ಪಕ್ಷದ ಮೂರು ದಿನಗಳ ರಾಷ್ಟ್ರೀಯ ಕಾರ್ಯ ಕಾರಿಣಿ ಯಲ್ಲಿ ಈ ಕುರಿತ ಆಲೋಚನೆಗಳು ಹರಿದಾಡುವ ಸಾಧ್ಯತೆಗಳಿವೆ.
ಪಕ್ಷದ ನೂತನ ಅಧ್ಯಕ್ಷ ನಿತಿನ್ ಗಡ್ಕರಿ ಆಯ್ಕೆಯ ನಂತರ ನಡೆಯು ತ್ತಿರುವ ಈ ಪ್ರಥಮ ಸಮಾವೇಶದಲ್ಲಿ ಬಿಜೆಪಿ ಹತ್ತು ಹಲವು ಸಂಗತಿಗಳ ಕುರಿತಂತೆ ಆತ್ಮಾವ ಲೋಕನಕ್ಕೆ ಸಜ್ಜಾ ಗಿದೆ. 2009ರ ಲೋಕಸಭಾ ಚುನಾ ವಣೆಗಳಲ್ಲಿ ತೀವ್ರ ಮುಖಭಂಗ ಅನು ಭವಿಸಿದ ನಂತರ ಪಕ್ಷದಲ್ಲಿ ಕಂಡು ಬಂದಿರುವ ಬೆಳ ವಣಿಗೆಗಳ ಬಗೆಗೂ ವಿಸ್ತೃತ ಚರ್ಚೆ ನಡೆಯುವ ನಿರೀ ಕ್ಷೆಯಿದೆ.
ಗಡ್ಕರಿ ನೇತೃತ್ವದಲ್ಲಿ ಪಕ್ಷವನ್ನು ಜನರ ಬಳಿಗೆ ಕೊಂಡೊಯ್ಯಲು ಅನು ಸರಿಸಬೇಕಾದ ಹೊಸ ತಂತ್ರಗಳು, ಎನ್‌ಡಿಎ ಮೈತ್ರಿಪಕ್ಷ ಶಿವಸೇನೆಯ ತಲೆನೋವುಗಳು ಕೂಡಾ ಸಭೆಯ ಮುಖ್ಯ ಚರ್ಚಾ ವಿಷಯವಾಗಲಿದೆ.
ಪುಣೆಯಲ್ಲಿ ಸ್ಫೋಟ, ಪಾಕ್ ಜೊತೆ ಭಾರತ ಮತ್ತೆ ಮಾತು ಕತೆಗಾಗಿ ಮೈ ಕೊಡವಿಕೊಳ್ಳುತ್ತಿರುವ ಸಂದ ರ್ಭ ದಲ್ಲೇ ನಡೆಯುತ್ತಿರುವ ಇಂದೋ ರ್‌ನ ಈ ಅಧಿವೇಶನದತ್ತ ಇತರೆ ಪಕ್ಷ ಗಳು ಸಹಜವಾಗಿಯೇ ಕುತೂಹಲದ ಕಣ್ಣು ನೆಟ್ಟಿವೆ.
ಪ್ರಜಾವಾಣಿ ವಾರ್ತೆ
Subscribe to:
Post Comments (Atom)
No comments:
Post a Comment