VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Feb 17, 2010

ತಾಲಿಬಾನ್ ಸೇನಾ ಮುಖ್ಯಸ್ಥ ಬ್ರಾಡರ್ ಬಂಧನ

ತಾಲಿಬಾನ್ ಸೇನಾ ವಿಭಾಗದ ಮುಖ್ಯಸ್ಥನಾದ 42 ವರ್ಷದ ಬ್ರಾಡರ್, ಈ ಸಂಘಟನೆಯ (ಚಳವಳಿಯ) ಸಂಸ್ಥಾಪಕ ಮುಲ್ಲಾ ಮುಹಮ್ಮದ್ ಒಮರ್ ನಂತರದ ಸ್ಥಾನವನ್ನು ಹೊಂದಿದ್ದು ಕೆಲವು ದಿನಗಳ ಹಿಂದೆಯೇ ಈತನನ್ನು ಬಂಧಿಸಲಾಗಿದೆ .

ಇಸ್ಲಾಮಾಬಾದ್ (ಡಿಪಿಎ): ಪಾಕಿಸ್ತಾನದ ದಕ್ಷಿಣ ಬಂದರು ನಗರ ಕರಾಚಿಯಲ್ಲಿ ಉನ್ನತ ಆಫ್ಘನ್ ತಾಲಿಬಾನ್ ಸೇನಾ ಕಮಾಂಡರ್ ಮುಲ್ಲಾ ಅಬ್ದುಲ್ ಘನಿ ಬ್ರಾಡರ್ ಎಂಬಾತನನ್ನು ಅಮೆರಿಕ ಮತ್ತು ಪಾಕ್ ಗುಪ್ತದಳ ಅಧಿಕಾರಿಗಳು ಬಂಧಿಸಿರುವುದಾಗಿ ಅಧಿಕೃತ ಮೂಲಗಳು ಮಂಗಳವಾರ ಇಲ್ಲಿ ತಿಳಿಸಿವೆ.

ತಾಲಿಬಾನ್ ಸೇನಾ ವಿಭಾಗದ ಮುಖ್ಯಸ್ಥನಾದ 42 ವರ್ಷದ ಬ್ರಾಡರ್, ಈ ಸಂಘಟನೆಯ (ಚಳವಳಿಯ) ಸಂಸ್ಥಾಪಕ ಮುಲ್ಲಾ ಮುಹಮ್ಮದ್ ಒಮರ್ ನಂತರದ ಸ್ಥಾನವನ್ನು ಹೊಂದಿದ್ದು ಕೆಲವು ದಿನಗಳ ಹಿಂದೆಯೇ ಈತನನ್ನು ಬಂಧಿಸಲಾಗಿದೆ ಎಂದು ಅವು ಹೇಳಿವೆ.

‘ತಾಲಿಬಾನ್‌ನ ಎರಡನೇ ಉನ್ನತ ನಾಯಕ ಮುಲ್ಲಾ ಬ್ರಾಡರ್‌ನನ್ನು ಕರಾಚಿಯಲ್ಲಿ ಬಂಧಿಸಲಾಗಿದೆ. ಪ್ರಸ್ತುತ ನಮ್ಮ ವಶದಲ್ಲಿರುವ ಆತನನ್ನು ನಾವು ತನಿಖೆಗೆ ಒಳಪಡಿಸಿದ್ದೇವೆ’ ಎಂದು ಹಿರಿಯ ಪಾಕ್ ಸೇನಾಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಆದರೆ ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

ಬ್ರಾಡರ್ ಬಂಧನವನ್ನು ಮೊದಲು ವರದಿ ಮಾಡಿರುವ ‘ನ್ಯೂಯಾರ್ಕ್ ಟೈಮ್ಸ್’, ಅಮೆರಿಕ ಮತ್ತು ಪಾಕ್ ಗುಪ್ತದಳ ಅಧಿಕಾರಿಗಳು ಜಂಟಿಯಾಗಿ ಬ್ರಾಡರ್‌ನನ್ನು ತನಿಖೆಗೆ ಒಳಪಡಿಸಿರುವುದಾಗಿ ಪ್ರಕಟಿಸಿದೆ. ಈ ಬಂಧನದ ಸುದ್ದಿ ತನಗೆ ಗುರುವಾರವೇ ಸಿಕ್ಕಿದ್ದರೂ, ಶ್ವೇತಭವನದ ಕೋರಿಕೆ ಮೇರೆಗೆ ಗುಪ್ತಚರ ಮಾಹಿತಿಯನ್ನು ರಕ್ಷಿಸಲು ಪ್ರಕಟಣೆಯನ್ನು ತಡೆಹಿಡಿಯಲಾಗಿತ್ತೆಂದು ಸೋಮವಾರ ರಾತ್ರಿ ಸುದ್ದಿ ಪ್ರಕಟಿಸಿರುವ ಪತ್ರಿಕೆ ತಿಳಿಸಿದೆ.

2001ರಲ್ಲಿ ಅಮೆರಿಕ ನೇತೃತ್ವದ ಪಡೆಗಳು ಆಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ ತಾಲಿಬಾನ್ ಆಡಳಿತವನ್ನು ಪದಚ್ಯುತಗೊಳಿಸಿದ ನಂತರ ಬಂಧಿಸಲಾಗಿರುವ ಉನ್ನತ ನಾಯಕರಲ್ಲಿ ಬ್ರಾಡರ್ ಪ್ರಮುಖನಾಗಿದ್ದಾನೆ. ತಾಲಿಬಾನ್ ಸರ್ಕಾರದಲ್ಲಿ ಬ್ರಾಡರ್ ಉಪ ರಕ್ಷಣಾ ಸಚಿವನಾಗಿ ಕಾರ್ಯನಿರ್ವಹಿಸಿದ್ದ. ಮುಲ್ಲಾ ಬ್ರಾಡರ್ ಬಂಧನದಿಂದ ಆಫ್ಘನ್ ತಾಲಿಬಾನ್ ಹೋರಾಟಕ್ಕೆ ಸಾಕಷ್ಟು ಹಿನ್ನಡೆ ಉಂಟಾಗಿದೆ.

ಇಂಟರ್‌ಪೋಲ್ ಪ್ರಕಾರ, ಈ ಸೇನಾ ಕಮಾಂಡರ್ ಆಫ್ಘನ್ ಪಾಪಲ್‌ಜಾಯಿ ಬುಡಕಟ್ಟಿಗೆ ಸೇರಿದ್ದು 2007ರ ಮೇ ತಿಂಗಳಿಂದ ತಾಲಿಬಾನ್‌ನ ಕ್ವೆಟ್ಟಾ ಶುರಾ (ಮಂಡಳಿ) ಸದಸ್ಯನಾಗಿದ್ದ. ಕ್ವೆಟ್ಟಾ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿಯಾಗಿದ್ದು ಬ್ರಾಡರ್ ಇಲ್ಲಿಂದ ಕರಾಚಿಗೆ ಸ್ಥಳಾಂತರಗೊಂಡಿದ್ದ. ಆಫ್ಘನ್ ತಾಲಿಬಾನ್ ನಾಯಕ ಮುಲ್ಲಾ ಒಮರ್ ಮತ್ತು ಆತನ ಸಹಚರರು ಬಲೂಚಿಸ್ತಾನದಿಂದಲೇ ಕಾರ್ಯಾಚರಿಸುತ್ತಿರಬಹುದೆಂದು ಆಫ್ಘನ್ ಮತ್ತು ಅಮೆರಿಕ ಅಧಿಕಾರಿಗಳು ಶಂಕಿಸಿದ್ದಾರೆ.

ಅಮೆರಿಕ ಶ್ಲಾಘನೆ: ತಾಲಿಬಾನ್ ಸಂಘಟನೆಯಲ್ಲಿ ಎರಡನೇ ಶಕ್ತಿ ಕೇಂದ್ರದಂತಿದ್ದ ಬ್ರಾಡರ್‌ನ ಬಂಧನದ ಬಗ್ಗೆ ಅಮೆರಿಕ ತನ್ನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದನ್ನು ಅತ್ಯಂತ ಯಶಸ್ವಿ ಕಾರ್ಯಾಚರಣೆ ಎಂದಿದೆ.

ಪ್ರಜಾವಾಣಿ ವಾರ್ತೆ

No comments: