ಐಪಿಎಲ್‌ಗೆ ಕಾಂಗರೂ, ಪಾಕ್ ಬರಲಿ: ಶಿವಸೇನೆ
ಮುಂಬೈ,ಫೆ.೧೭: ಐಪಿಎಲ್ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯದವರು ಮಾತ್ರವಲ್ಲ ಪಾಕಿಸ್ತಾನದ ಆಟಗಾರರು ಬರಲಿ ನಾವು ಅವರು ಇಲ್ಲಿ ಆಡುವುದನ್ನು ತಡೆಯುವುದಿಲ್ಲ ಎಂದ ಶಿವಸೇನೆ ಹೇಳಿಕೆ ನೀಡಿದೆ.
ನಿನ್ನೆ ತಡರಾತ್ರಿ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ ಈ ವಿಷಯ ತಿಳಿಸಿರುವ ಶಿವಸೇನೆ ನಾಯಕ ಬಾಳಠಾಕ್ರೆ ‘ಐಪಿಎಲ್‌ನಲ್ಲಿ ಆಟವಾಡಲು ಬರಲಿ. ಅವಕಾಶ ನೀಡಿ ಎಂದು ಹೇಳಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚೌಹಾಣ್ ನಾವು ಎಲ್ಲಾ ಆಟಗಾರರಿಗೆ ರಕ್ಷಣೆ ನೀಡುತ್ತೇವೆ ಎಂದು ಹೇಳಿದ ನಂತರ ಈ ಹೇಳಿಕೆ ನೀಡಿದ್ದಾರೆ.
ದೇಶಪ್ರೇಮವನ್ನು ಆಧಾರಿಸಿ ಹೋರಾಟ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ಇಲ್ಲಿ ನಾವು ಆಸ್ಟ್ರೇಲಿಯನ್ನರನ್ನು ತಡೆದರೆ ಆಸ್ಟ್ರೇಲಿಯದಲ್ಲಿರುವ ಭಾರತೀಯರಿಗೆ ತೊಂದರೆಯಾಗಬಹುದು.ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಕುರಿತು ಶಿವಸೇನೆ ಅಡ್ಡಬರುವುದಿಲ್ಲವೆಂದು ಹೇಳಿದೆ.
ಆಸ್ಟ್ರೇಲಿಯದ ಹಾಗೂ ಪಾಕಿಸ್ತಾನಿ ಕ್ರಿಕೆಟಿಗರು ಬರಲಿ. ಜೊತೆಗೆ ತರಬೇತಿ ಪಡೆದ ಉಗ್ರರು ಬರಲಿ.ಅವರಿಗೆ ಅಡ್ಡಿ ಮಾಡಬೇಡಿ.ಸೇನೆ ಇದನ್ನು ವಿರೋಧಿಸುವುದಿಲ್ಲವೆಂದು ಠಾಕ್ರೆ ಹೇಳಿದ್ದಾರೆ.
ಐಪಿಎಲ್ ವಿವಾದದಿಂದ ದೂರ ಉಳಿಯಲು ಬಯಸಿರುವ ಶಿವಸೇನೆಯ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಚೌಹಾಣ್ ಈ ಕುರಿತು ಶಿವಸೇನೆ ವಿವಾದ ಸೃಷ್ಟಿ ಮಾಡುವುದು ಸರಿಯಲ್ಲ. ಸಮಸ್ಯೆಗಳನ್ನು ಸೃಷ್ಟಿ ಮಾಡುವುದು ಸರಿಯಲ್ಲ. ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಎಲ್ಲಾ ಆಟಗಾರರಿಗೆ ರಕ್ಷಣೆ ನೀಡಲಾಗುವುದು ಎಂದರು
Feb 17, 2010
Subscribe to:
Post Comments (Atom)
No comments:
Post a Comment