ಬೆಂಗಳೂರು: ನಗರದಲ್ಲಿ 2008ರಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಪಿಡಿಪಿ ನಾಯಕ ಅಬ್ದುಲ್ ನಾಸೀರ್ ಮದನಿ ಮತ್ತು ಆತನ ಪತ್ನಿ ಸೂಫಿಯಾ ಮದನಿಗೆ ಮೂರು ದಿನಗಳ ಒಳಗಡೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗಿದೆ ಎಂದು ಪೊಲೀಸ್ ಸಹಾಯಕ ಕಮೀಷನರ್ ಅಲೋಕ್ ಕುಮಾರ್ ತಿಳಿಸಿದ್ದಾರೆ. ಕೊಯಂಬತ್ತೂರು ಸ್ಫೋಟದ ಆರೋಪದಲ್ಲಿ ಜೈಲಿನಲ್ಲಿದ್ದ ತನ್ನ ಪತಿ ನಾಸೀರ್ ಮದನಿಯನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಸೂಫಿಯಾ ತಮಿಳುನಾಡಿನ ಬಸ್ಸೊಂದನ್ನು ಸ್ಫೋಟಿಸಲು ಸಂಚು ರೂಪಿಸಿದ್ದಳೆಂಬ ಆರೋಪವಿದೆ.
source: jayakirana
Feb 17, 2010
Subscribe to:
Post Comments (Atom)
No comments:
Post a Comment