ಮತಾಂತರ, ಪಕ್ಷಾಂತರ ಮತ್ತು ಕ್ಷೇತ್ರಾಂತರ
ಮತಾಂತರ, ಪಕ್ಷಾಂತರ ಮತ್ತು ಕ್ಷೇತ್ರಾಂತರದ ಬಗ್ಗೆ ಪ್ರಶ್ನೆಗಳ ನಗೆ ಹಾಡಿನಲ್ಲಿ.
ಯಾವ ಮೋಹನ ಮುರಳಿ ಕರೆಯಿತು
ಉಡುಪಿ ಕ್ಷೇತ್ರಕೆ ನಿಮ್ಮನು ?
ಯಾವ ತಪ್ಪಿಗೆ ಬಿಟ್ಟು ನಡೆದಿರಿ
ಮಂಗಳೂರಿನ ನಮ್ಮನು ?
ಟೀವಿ ಪರದೆಯ ಮೇಲೆ ದಿನವೂ
ನಿಮ್ಮ ನಗುಮುಖ ಕಂಡೆವು
ನಮ್ಮ ನಾಯಕ ಎಷ್ಟು ಸುಂದರ
ಎಂದು ಹೆಮ್ಮೆಯ ಪಟ್ಟೆವು
ನಮಗೆ ಗೊತ್ತಿದೆ ನೀವು ಪಕ್ಷದ
ರಾಜ್ಯ ಮಟ್ಟದ ಲೀಡರು
ಅಂದ ಮಾತ್ರಕೆ ಮರೆತು ಬಿಡುವಿರಾ
ಹಿಂದೆ ಬಳಸಿದ ಲ್ಯಾಡರು !
ಬೇಡವೆನಿಸಿತೆ ಮಂಗಳೂರಿನ
ಕೋಮುಗಲಭೆಯ ಕಿರುಕುಳ ?
ಚರ್ಚು ದಾಳಿ, ಪಬ್ಬು ಹಗರಣ !!!
- ಕನ್ನಡ ಹನಿಗಳು
Feb 22, 2010
Subscribe to:
Post Comments (Atom)
No comments:
Post a Comment