VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 24, 2010

ಹಾಸನ: ಯುವತಿಗೆ 12 ದಿನಗಳಲ್ಲೇ ಕೈಕೊಟ್ಟ ಪ್ರಿಯತಮ

ಹಾಸನ, ಮಾ.೨೩: ಕಲ್ಯಾಣ ಮಂಟಪದಿಂದ ಓಡಿ ಹೋಗಿ ಪ್ರಿಯತಮನೊಂದಿಗೆ ವಿವಾಹವಾಗಿದ್ದ ಯುವತಿಗೆ ಕೇವಲ ೧೨ ದಿನಗಳಲ್ಲೇ ಪ್ರಿಯತಮ ಕೈಕೊಟ್ಟ ಘಟನೆ ಹಾಸನದಲ್ಲಿ ನಡೆದಿದೆ.

ಕಲ್ಯಾಣ ಮಂಟಪದಿಂದ ಓಡಿ ಹೋಗಿ ಪ್ರಿಯತಮ ಸುನೀಲ್ ಎಂಬಾತನೊಂದಿಗೆ ಮದುವೆಯಾಗಿದ್ದ ಹಾಸನದ ಸೌಜನ್ಯ ಅಲಿಯಾಸ್ ಲಕ್ಷ್ಮಿ ಎಂಬವಳೇ ವಂಚನೆಗೊಳಗಾದ ಯುವತಿ.

ಅಮ್ಮನನ್ನು ನೋಡಿ ಬರುತ್ತೇನೆ ಎಂದು ಹೇಳಿ ಯುಗಾದಿ ದಿನ ಲಕ್ಷ್ಮಿಯನ್ನು ಬಿಟ್ಟು ಹೋದವನು ಮರಳಿ ಮನೆಗೆ ಬಂದಿಲ್ಲ ಎನ್ನಲಾಗಿದೆ. ತಾಯಿ ಮತ್ತು ಸಂಬಂಧಿ ಗಳ ವಿರೋಧ ಕಟ್ಟಿಕೊಂಡು, ಸುನೀಲ್‌ನನ್ನು ಪ್ರೇಮ ವಿವಾಹವಾಗಿದ್ದ ಲಕ್ಷ್ಮಿ ಇದೀಗ ಏಕಾಂಗಿಯಾಗಿದ್ದಾಳೆ.

ಹುಚ್ಚುಕೋಡಿ ಮನಸ್ಸನ್ನು ಹರಿಯಬಿಟ್ಟರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಹಾಸನ ಜಿಲ್ಲೆಯ ಎಂ.ಕಾವಲು ಗ್ರಾಮದ ಸೌಜನ್ಯ ಅಲಿಯಾಸ್ ಲಕ್ಷ್ಮಿಯೇ ಕಣ್ಣ ಮುಂದಿನ ನಿದರ್ಶನ. ಕಳೆದ ಮಾ.೧೨ರಂದು ಹೊಂಗೆರೆ ಗ್ರಾಮದ ಲೋಕೇಶ್ ಎಂಬಾತನೊಂದಿಗೆ ಹಸೆಮಣೆ ಏರಬೇಕಿದ್ದ ಸೌಜನ್ಯ, ಅಂದು ಬೆಳಗ್ಗೆ ಮದುವೆ ಮಂಟಪ ದಿಂದಲೇ ಪ್ರಿಯತಮನೊಂದಿಗೆ ಪರಾರಿಯಾಗಿದ್ದಳು.

ಅದಾದ ಕೆಲವೇ ಗಂಟೆಗಳಲ್ಲಿ ಪ್ರೇಮಿಸಿದವನೊಂದಿಗೆ ಪೊಲೀಸ್‌ಠಾಣೆಗೆ ಹಾಜರಾಗಿದ್ದ ಲಕ್ಷ್ಮಿ, ಪ್ರೇಮ ವಿವಾಹಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಮದುವೆ ಮಂಟಪದಿಂದ ಓಡಿಹೋಗಬೇಕಾಯಿತು ಎಂದು ಹೇಳಿಕೆ ನೀಡಿ ದೇವರ ಸನ್ನಿಧಿಯಲ್ಲಿ ಸುನೀಲ್ ಜೊತೆ ಹಾರ ಬದಲಿಸಿಕೊಂಡಿದ್ದಳು. ಕೊನೆವರೆಗೂ ಲಕ್ಷ್ಮ್ಮಿಯೊಂದಿಗೆ ಬಾಳುವುದಾಗಿ ಹೇಳಿದ್ದ ಸುನೀಲ್ ಇದೀಗ ಮನೆಯವರ ಮಾತು ಕೇಳಿ ಲಕ್ಷ್ಮ್ಮಿಗೆ ಕೈಕೊಟ್ಟು ಓಡಿ ಹೋಗಿದ್ದಾನೆ ಎಂದು ಲಕ್ಷ್ಮಿ ಆರೋಪಿಸಿದ್ದಾಳೆ.

ಮಗಳ ಈ ನಿರ್ಧಾರದಿಂದ ಮನನೊಂದ ತಾಯಿ ಇಂದ್ರಮ್ಮ, ಈ ವಿವಾಹದಿಂದ ಹೊರಗುಳಿದಿದ್ದಳು. ಕೊನೆಗೆ ಯಾರೂ ಇಲ್ಲ ಎಂದು ತಿಳಿದ ಲಕ್ಷ್ಮಿ ಚಿಕ್ಕಪ್ಪ ಚಂದ್ರಶೇಖರ್, ದುದ್ದ ಗ್ರಾಮದ ತಮ್ಮ ಮನೆಯಲ್ಲಿ ಅಕ್ಕನ ಮಗಳಿಗೆ ಆಶ್ರಯ ನೀಡಿದ್ದರು. ಮದುವೆಯಾದ ನಂತರ ೨ ಬಾರಿ ಹಾಸನಕ್ಕೆ ಹೋಗಿ ಬಂದ ಸುನೀಲ್, ೩ನೆ ಬಾರಿಗೆ ಯುಗಾದಿಯಂದು ಲಕ್ಷ್ಮಿಯನ್ನು ಬಿಟ್ಟು ಹೋದವನು ಮರಳಿ ಬಂದಿಲ್ಲ. ಇದರಿಂದಾಗಿ ಲಕ್ಷ್ಮಿ ಏಕಾಂಗಿಯಾಗಿದ್ದಾಳೆ.

ಈ ಮಧ್ಯೆ ದೂರವಾಣಿ ಕರೆ ಮಾಡಿದ ಸುನೀಲ್ ‘ನಿನ್ನೊಂದಿಗೆ ಬಾಳಲು ನನ್ನ ಕುಟುಂಬದವರಿಗೆ ಇಷ್ಟವಿಲ್ಲ. ನಾನು ಬೆಂಗಳೂರಿನಲ್ಲಿ ಉದ್ಯೋಗ ಹುಡುಕಿಕೊಂಡಿದ್ದೇನೆ. ನಿನ್ನ ದಾರಿ ನೀನು ನೋಡಿಕೋ’ ಎಂದು ಹೇಳಿದ್ದಾನೆ ಎನ್ನಲಾಗಿದೆ. ಸುನೀಲ್‌ನ ಈ ನಿರ್ಧಾರದಿಂದ ಹತಾಶಳಾಗಿರುವ ಲಕ್ಷ್ಮ್ಮಿ ಸಂಬಂಧಿಕರು ಇದೀಗ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಲಕ್ಷ್ಮಿಯನ್ನು ಆಟೊದಲ್ಲಿ ಹಾರಿಸಿಕೊಂಡು ಹೋಗುವ ವರೆಗೂ ‘ಆಕಾಶವೇ ಬೀಳಲಿ ಮೇಲೆ ನಾ ನಿನ್ನ ಕೈಬಿಡೆನು’ ಎಂದಿದ್ದ ಸುನೀಲ್, ಕೇವಲ ೧೨ ದಿನಗಳಲ್ಲಿ ಮನೆಯವರ ಮಾತು ಕೇಳಿ ಕೈಹಿಡಿದವಳಿಗೆ ಕೈಕೊಟ್ಟು ಪರಾರಿಯಾಗಿದ್ದಾನೆ. ವಿಪರ್ಯಾಸವೆಂದರೆ ಸುನೀಲ್ ಬಳಿ ಯಾವುದೇ ದಾಖಲೆ ಇಲ್ಲದ ಕಾರಣ ಅಂದು ರಿಜಿಸ್ಟ್ರಾರ್ ಮದುವೆಯನ್ನೂ ಮಾಡಿರಲಿಲ್ಲ. ಹೀಗಾಗಿ ಮದುವೆಯಾಗಿದ್ದಕ್ಕೆ ಯಾವುದೇ ಪುರಾವೆ ಇಲ್ಲದೆ ಲಕ್ಷ್ಮಿ ಪರದಾಡುವಂತಾಗಿದೆ.

No comments: