
wd
ಮುಂಬೈ:ಕ್ರಿಕೆಟ್ ಸ್ಟಾರ್ ಹರಭಜನ್ ಸಿಂಗ್ ಸದ್ಯದಲ್ಲೇ ಬಾಲಿವುಡ್ ನಟಿ ಗೀತಾ ಬಾಸ್ರಾರನ್ನು ವಿವಾಹವಾಗಲಿದ್ದಾರೆಂದು ಮೂಲಗಳು ತಿಳಿಸಿವೆ. ಈ ಸಂಬಂಧ ಎರಡು ಕುಟುಂಬದವರ ಮಧ್ಯೆ ಮಾತುಕತೆಯು ನಡೆದಿದೆಯೆನ್ನಲಾಗಿದೆ.
ಭಜ್ಜಿ-ಗೀತಾ ಸಂಬಂಧದ ಬಗ್ಗೆ ಈ ಹಿಂದೆಯೂ ಹಲವು ಗಾಸಿಪ್‌ಗಳು ಹರಡಿತ್ತು. ಆದರೆ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್‌ಗಳೆಂದು ಬಾಲಿವುಡ್ ನಟಿ ಸಮಜಾಯಿಸಿ ನೀಡುತ್ತಿದ್ದಳು.
ಆದರೆ ಈ ಬಾರಿ ಒಂದು ಹೆಜ್ಜೆ ಮುಂದೆ ಇಟ್ಟಿರುವ ಭಜ್ಜಿ, ಗೀತಾಳನ್ನು ಮನೆಗೆ ಕರೆದುಕೊಂಡು ಹೋಗಿ ಕುಟುಂಬದವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ ಜಲಂಧರ್‌ನಲ್ಲಿ ಸಹೋದರಿ ಸಂದೀಪ್ ಕೌರಸ್ ಮದುವೆ ಸಮಾರಂಭಕ್ಕೂ ಆಹ್ವಾನಿಸಿದ್ದರಂತೆ!. ಈ ಮೂಲಕ ಭಾವಿ ವಧುವನ್ನು ಹರಭಜನ್ ಸಿಂಗ್ ಕುಟುಂಬದ ಹಿರಿಯವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ.
ಅದೇ ವೇಳೆ ಫೆಬ್ರವರಿ 20ರ ಮದುವೆ ಸಮಾರಂಭಕ್ಕೆ ತೆರಳಿರುವುದು ನಿಜ ಎಂದು ನಟಿ ಗೀತಾ ಬಾಸ್ರಾ ತಿಳಿಸಿದ್ದಾರೆ. ಆದರೆ ಅದು ನೀವು ಅಂದುಕೊಂಡಿರುವ ಹಾಗೆಯೇ ಅಲ್ಲ. ಅನೇಕ ಆತಿಥಿಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದು, ನಾನು ಕೂಡಾ ಭಾಗವಹಿಸಿದ್ದೆ ಎಂದು ಹೇಳಿದ್ದಾರೆ.
ಈ ಮಧ್ಯೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ನಡೆದಿದ್ದ ಪಂದ್ಯ ವೀಕ್ಷಿಸಲು ಗೀತಾ ತೆರಳಿದ್ದರೆಂದು ವರದಿಯಾಗಿದೆ. ಐಪಿಎಲ್‌ನಲ್ಲಿ ಹರಭಜನ್ ಭಾಗವಹಿಸುತ್ತಿರುವ ಮುಂಬೈ ತಂಡವನ್ನು ಹುರಿದುಂಬಿಸಲು ಗೀತಾ ತೆರಳಿದ್ದಾರೆ ಎಂಬುದು ಸ್ಪಷ್ಟಗೊಂಡಿದೆ.
ಆದರೆ ಇಲ್ಲಿಯೂ ನುಣುಚಿಕೊಂಡಿರುವ ಗೀತಾ, ಮುಂಬೈ ಇಂಡಿಯನ್ಸ್ ಮಾಲಕಿ ನಿತಾ ಅಂಬಾನಿ ಆಹ್ವಾನದ ಮೆರೆಗೆ ನಾನು ಪಂದ್ಯ ವೀಕ್ಷಿಸಲು ತೆರಳಿದ್ದೆ ಎಂದು ಹೇಳಿದ್ದಾರೆ. ಮಾತು ಮುಂದುವರಿಸಿದ ಅವರು ಒಂದು ವೇಳೆ ಮುಂಬೈಯನ್ನು ಬೆಂಬಲಿಸಿದರೆ ಏನಾಗುತ್ತದೆ? ನಾನು ಕೂಡಾ ಮುಂಬೈನವಳು ಎಂದು ಉತ್ತರ ನೀಡಿದ್ದಾರೆ.
No comments:
Post a Comment