ಮಂಗಳೂರು,ಮಾ.20: ಅಪಹರಣ ಹಾಗೂ ಬೆದರಿಕೆ ಅರೋಪದ ೬ ಮಂದಿ ಅರೋಪಿಗಳನ್ನು ಬಂಧಿಸುವಲ್ಲಿ ನಗರದ ಪಾಂಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.ಕುತ್ತಾರ್ ಬಳಿಯ ಮಂಜಲ್‍ತೋಟದ ಅಹ್ಮದ್ ಬಾವ ಅವರ ಮಗ ಅಬ್ದುಲ್ ಖಾದರ್ ರವರನ್ನು ಅಪಹರಿಸಿ ಒತ್ತೆ ಹಣಕ್ಕಾಗಿ ಪಿಡಿಸುತ್ತಿದ್ದ ೬ ಮಂದಿ ಅಪಹರಣಕಾರರನ್ನು ಇಂದು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ತಲಪಾಡಿಯ ನಿಯಾಝ್, ಮುಡಿಪಿನ ರಹಮತುಲ್ಲಾ, ಮಡೂರಿನ ಸಿದ್ದೀಕ್, ಉಳ್ಳಾಲ್‍ದ ರಫೀಕ್, ಕಿನ್ಯಾದ ಮಹಮ್ಮದ್ ಅಶ್ರಫ್ ಮತ್ತು ಕೆ.ಎಚ್.ಇಸ್ಮಾಯಿಲ್ ಬಂಧಿತರು.
ಅಹಮ್ಮದ್ ಬಾವರವರು ಒಂದು ವರ್ಷದ ಹಿಂದೆ ಕೆ.ಸಿ ಮುಹಮ್ಮದ್ ರವರಿಂದ 2.5 ಲಕ್ಷ ಹಣವನ್ನು ಸಾಲಪಡೆದಿದ್ದರು. ಈ ಹಿನ್ನೆಲೆಯಲ್ಲಿ ಕೆ.ಸಿ ಮುಹಮ್ಮದ್ ರವರ ಪುತ್ರರಾದ ನಿಯಾಝ್, ಅವನ ಕೆಲ ಸಹಪಾಠಿಗಳೊಂದಿಗೆ ಜೊತೆಗೂಡಿ ಮಾರ್ಚ್ 19 ರಂದು ಅಹಮ್ಮದ್ ಬಾವ ರವರಿಂದ ಹಣ ವಸೂಲಿ ಮಾಡುವ ನಿಟ್ಟಿನಲ್ಲಿ ಅಬ್ದುಲ್ ಖಾದರ್‌ನನ್ನು ಅಪಹರಣ ನಡೆಸಿದ್ದರು.ಬಳಿಕ ಬಾವರವರು ಹಣ ಹಿಂತಿರುಗಿಸುವಲ್ಲಿ ವಿಫಲರಾದರೆ ಅವರ ಮಗನಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಒಂದು ತಿಂಗಳೊಳಗೆ ಸಾಯಿಸುವುದಾಗಿ ಬೆಂದರಿಕೆಯೊಡಿದ್ದರು. ಹಣ ನೀಡಿದ ನಂತರ ಅಬ್ದುಲ್ ಖಾದರ್ ನನ್ನು ಪಾಂಡೇಶ್ವರ ಸಮೀಪದ ಮಹಾಕಾಳಿ ಪಡುಪು ಬಳಿ ಬಿಡುವುದಾಗಿ ತಿಳಿಸಿದರು.
ಈ ಬಗ್ಗೆ ಪಾಂಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಕರಣದ ತನಿಖೆ ಕೈಗೊಂಡ ಪಾಂಡೇಶ್ವರ ಠಾಣಾ ಇನ್ಸ್‌ಪೆಕ್ಟರ್ ತಿಲಕ್ ಚಂದ್ರ ಅವರ ನೇತ್ರತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಈ ಪ್ರಕರಣದ 6 ಮಂದಿ ಅರೋಪಿಗಳನ್ನು ಬಂಧಿಸಲಾಯಿತು. ಅರೋಪಿಗಳನ್ನು ನ್ಯಾಯಾಲಯಕ್ಕೆ ಹಾಜಾರು ಪಡಿಸಲಾಗಿದೆ.

ಆದರೆ ಅಹಮ್ಮದ್ ಬಾವ ನೀಡಬೇಕಾದ ಸಾಲದ ಹಣವನ್ನು ನೀಡದೆ ಸತಾಯಿಸುತ್ತಿದ್ದರು. ಕೆ.ಸಿ. ಮಹಮ್ಮದ್ ಈಗ ಆರ್ಥಿಕವಾಗಿ ಸಂಕಷ್ಟದಲ್ಲಿದ್ದು ತಾನು ನೀಡಿದ ೨.೫ ಲಕ್ಷ ಸಾಲದ ಹಣವನ್ನು ನೀಡುವಂತೆ ಅಹಮ್ಮದ್ ಬಾವರಲ್ಲಿ ಕೇಳಿದಾಗ ಅವರು ನೀಡದೆ ಉಲ್ಟಾ ಬೆದರಿಕೆ ಹಾಕುತ್ತಿದ್ದರು. ಇದನ್ನು ಪ್ರಶ್ನಿಸಲು ಕೆ.ಸಿ. ಮಹಮ್ಮದ್ ರವರ ಮಗ ನಿಯಾಜ್ ತನ್ನ ಮಿತ್ರರೊಡನೆ ಅಹಮ್ಮದ್ ಬಾವರ ಮನೆಗೆ ತೆರಳಿದ್ದಾಗ ತನ್ನ ರಾಜಕೀಯ ಪ್ರಭಾವವನ್ನು ಬಳಸಿ ಅಹಮ್ಮದ್ ಬಾವ ಇವರ ವಿರುದ್ಧ ಉಲ್ಟಾ ಅಪಹರಣದ ದೂರನ್ನು ದಾಖಲಿಸಿದ್ದಾರೆ ಎಂದು ಬಂಧಿತರ ಕುಟುಂಬಿಕರು ತಿಳಿಸಿದ್ದಾರೆ.
No comments:
Post a Comment