ಮಂಗಳೂರು: ರಾಜ್ಯ ಸರಕಾರ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾನೂನು ಜನರಿಗೆ ವಿರುದ್ಧವಾಗಿದೆ ಎಂದು ಫಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆರೋಪಿಸಿದೆ.
ಈ ಕಾನೂನಿಗೆ ರಾಜ್ಯದಲ್ಲಿ ಭಾರೀ ವಿರೋಧವಿದ್ದರೂ ಕೂಡ ಬಿಜೆಪಿ ಸರಕಾರ ಇದನ್ನು ಜಾರಿಗೊಳಿಸಿದೆ. ಜನರ ಆಹಾರದ ಹಕ್ಕನ್ನು ಕಸಿದಿರುವ ರಾಜ್ಯ ಸರಕಾರ ದೇಶದ ಪ್ರಜಾಪ್ರಭುತ್ವಕ್ಕೆ ವಿರುದ್ಧವಾದ ಕ್ರಮ ತೆಗೆದುಕೊಂಡಿದೆ. ರಾಜ್ಯದಲ್ಲಿ ಅದು ತನ್ನ ಹಿಂದುತ್ವ ಅಜೆಂಡಾವನ್ನು ಜಾರಿಗೊಳಿಸುತ್ತಿದೆ ಎಂದು ಪಿಎಫ್ಐ ಹೇಳಿದೆ.
ರಾಜ್ಯದ ಜನರು ಭಷ್ಟಾಚಾರ, ಕಾನೂನು ಬಾಹಿರ ಗಣಿಗಾರಿಕೆ, ವಿದ್ಯುತ್ ಸಮಸ್ಯೆ, ಬೆಲೆಏರಿಕೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ರಾಜ್ಯ ಸರಕಾರ ಇದನ್ನೆಲ್ಲ ಬಗೆಹರಿಸಲು ಆಸಕ್ತಿಯನ್ನು ಹೊಂದಿಲ್ಲ. ಅದು ಕೇವಲ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸುವತ್ತ ದೃಷ್ಟಿಯನ್ನರಿಸಿದೆ ಎಂದು ಪಿಎಫ್ಐ ತಿಳಿಸಿದೆ.
ರಾಜ್ಯದ ಜನತೆ ಮತ್ತು ಜಾತ್ಯತೀತ ಪಕ್ಷಗಳು ಜೊತೆಗೂಡಿ ಈ ಜನವಿರೋಧಿ ಕಾನೂನಿನ ವಿರುದ್ಧ ಪ್ರತಿಭಟಿಸಬೇಕಾಗಿದೆ ಎಂದು ಪಿಎಫ್ಐ ಕರೆ ನೀಡಿದೆ.
ಸಾಹಿತಿ ದೇವನೂರು ಆಕೋಶ
ಗೋಹತ್ಯೆ ನಿಷೇಧ ಮಸೂದೆ ಜಾರಿಯ ಹಿಂದೆ ಸಂಘಪರಿವಾರದ ನರಹತ್ಯೆಯ ಗುಪ್ತ ಕಾರ್ಯಸೂಚಿ ಅಡಗಿದೆ ಎಂದು ಸಾಹಿತಿ ದೇವನೂರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋವಿನ ಸೆಗಣಿ-ಗಂಜಳ ಔಷಧಿಯಾದರೆ ಗೋಮಾಂಸ ಔಷಧಿಯಾಗುವುದಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ. ಶನಿವಾರ ಬೆಂಗಳೂರಿನ ಗಾಂಧಿಭವನದಲ್ಲಿ ಲೋಹಿಯಾ ಜನ್ಮ ಶತಾಬ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ ಆಹಾರ ಸಂಸ್ಕೃತಿಯ ಅರಿವಿಲ್ಲದ ಸರಕಾರ ಗೋಹತ್ಯೆ ನಿಷೇಧಕ್ಕೆ ಮುಂದಾಗಿದೆ ಎಂದವರು ಕಿಡಿಕಾರಿದರು.
Mar 22, 2010
Subscribe to:
Post Comments (Atom)
No comments:
Post a Comment