VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 27, 2010

ತುಂಬು ಸಂಸಾರ ಬೀದಿ ಪಾಲಾಗುವ ಮುನ್ನ...










ತುಂಬು ಸಂಸಾರ ಬೀದಿ ಪಾಲಾಗುವ ಮುನ್ನ...
ಇರಾದಲ್ಲೊಂದು ನಿರ್ಗತಿಕ ಮುಸ್ಲಿಂ ಕುಟುಂಬ


ಮಂಗಳೂರು: ಹಿಂದಿನ ಜನ್ಮದಲ್ಲಿ ಅದೇನು ಪಾಪ ಮಾಡಿದ್ದೇವೆಯೋ ಗೊ ತ್ತಿಲ್ಲ, ಆದರೆ ಈಗ ನಮ್ಮ ಬದುಕಿನಲ್ಲಿ ವಿಧಿಯು ನಮ್ಮ ಕುಟುಂಬವನ್ನು ನರಕದ ಕೂಪದಲ್ಲಿ ಸಿಲುಕಿ ಒದ್ದಾಡುವಂತೆ ಮಾಡಿದೆ. ಇದೀಗ ನಮ್ಮ ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ಬರ ಬಂದಿದೆ. ಗಂಡು ದಿಕ್ಕಿಲ್ಲದ ಈ ಕುಟುಂಬಕ್ಕೆ ಈಗ ಗಟ್ಟಿಯಾದ ಆಧಾರ ಸ್ತಂಭವೂ ಇಲ್ಲದೆ ಬಡತನದ ಬೇಗೆಯಲ್ಲಿ ನರಳುವಂತೆ ಮಾಡಿದೆ. ನಾಲ್ವರು ಹೆಣ್ಣು ಮಕ್ಕಳಲ್ಲಿ ಮೂವರಿಗೆ ಮದುವೆಯಾಗಿದ್ದರೂ ಅದರಲ್ಲಿ ಇಬ್ಬರ ಗಂಡಂದಿರು ಬಿಟ್ಟು ಹೋಗಿದ್ದಾರೆ. ಅವರು ಕೂಡಾ ಈಗ ಮಕ್ಕಳೊಂದಿಗೆ ಮನೆಯಲ್ಲೇ ಇದ್ದಾರೆ. ಇದೀಗ ನಮ್ಮ ತುಂಬು ಸಂಸಾರ ಬೀದಿ ಪಾಲಾಗುವ ಸಂದರ್ಭ ಬಂದಿದೆ. ಕಳೆದ ಹಲವು ವರ್ಷಗಳಿಂದ ಬೀದಿ ಬದಿಯಲ್ಲಿ ವ್ಯಾಪಾರ ನಡೆಸಿ ಕುಟುಂಬದ ಜವಾಬ್ದಾರಿಯನ್ನು ನಾನೇ ಹೊತ್ತು ಕೊಂಡಿದ್ದೆ, ಆದರೆ ಅದಕ್ಕೂ ಈಗ ಮುಪ್ಪು ಅಡ್ಡ ಬಂದಿದೆ ಎಂದು ಎಪ್ಪತ್ತರ ಹರೆಯದ ಹಸೈನಾರ್ ತಮ್ಮ ನೋವನ್ನು ಜಯಕಿರಣ ದೊಂದಿಗೆ ಬಿಚ್ಚಿಟ್ಟಿದ್ದಾರೆ.
ಬಂಟ್ವಾಳ ತಾಲೂಕಿನ ಇರಾ ಗ್ರಾಮದ ಕುರಿಯಾಡಿಯಲ್ಲಿರುವ ಬಡ ಮುಸ್ಲಿಂ ಕುಟುಂಬದ ಬದುಕಿನ ವ್ಯಥೆಯಿದು. ಕಳೆದ ಹಲವಾರು ವರ್ಷಗಳಿಂದ ಹಸೈನಾರ್ ಬ್ಯಾರಿ ಅವರು ಇರಾ ಮುಡಿಪು ಪರಿಸರದಲ್ಲಿ ಚಿಕ್ಕ ಪುಟ್ಟ ವ್ಯಾಪಾರ ಮಾಡಿ ಪತ್ನಿ ಹಾಗೂ ನಾಲ್ಕು ಹೆಣ್ಣುಮಕ್ಕಳನ್ನು ಸಾಕುತ್ತಿದ್ದರು. ಪತ್ನಿ ಖತೀಜಮ್ಮ (65) ಅವರೂ ಕೂಡಾ ಬೀಡಿ ಕಟ್ಟಿ ಗಂಡನ ಜವಾಬ್ದಾರಿಯಲ್ಲಿ ಪಾಲುದಾ ರರಾಗಿದ್ದರು. ಆದರೆ ಮಕ್ಕಳು ದೊಡ್ಡದಾ ಗುತ್ತಿರುವಂತೆಯೇ ಸಮಸ್ಯೆಯ ಕೊಂಡಿಗಳೂ ಕೂಡಾ ಹೆಚ್ಚಾಗತೊಡಗಿತು. ಕಷ್ಟವಿದ್ದರೂ ಅಲ್ಲಿ ಇಲ್ಲಿ ಕಾಡಿ ಬೇಡಿ ದೊಡ್ಡ ಮಗಳಿಗೆ ಮದುವೆಯನ್ನು ಮಾಡಿಕೊಡಲಾಯಿತು, ಕೆಲವು ವರ್ಷಗಳ ಬಳಿಕ ಉಳಿದ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿಕೊಡಲಾಗಿತ್ತು, ಆದರೆ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ಇವರನ್ನು ಕಂಡು ತಮ್ಮ ಜವಾಬ್ದಾರಿ ಸ್ವಲ್ಪ ಮಟ್ಟಿಗೆ ಹಗುರವಾಯಿತು ಎನ್ನುವಷ್ಟರಲ್ಲಿ ದೊಡ್ಡ ಮಕ್ಕಳಿಬ್ಬರ ಗಂಡಂದಿರೂ ಹೆಂಡತಿಯರನ್ನು ತೊರೆದು ಬೇರೆ ಮದುವೆಯಾಗಿದ್ದಾರೆ. ದೊಡ್ಡ ಮಗಳಾದ ಮರಿಯಮ್ಮನಿಗೆ 7 ಮಕ್ಕಳಿದ್ದಾರೆ. ಅದೇ ರೀತಿ ಮತ್ತೊಬ್ಬಳು ಮಗಳಿಗೆ 5 ಮಕ್ಕಳಿದ್ದಾರೆ.
ಆದರೆ ಈಗ ಈ ಎಲ್ಲಾ ಮಕ್ಕಳು ಹಾಗೂ ಇಬ್ಬರು ಮಗಳಂದಿರನ್ನು ಸಾಕುವ ಜವಾಬ್ದಾರಿಯೂ ಕೂಡಾ ಹಸೈನಾರ್ ಹೊತ್ತುಕೊಂಡಿದ್ದಾರೆ. ಆದರೆ ಕಳೆದ ಒಂದು ವರ್ಷದ ಹಿಂದೆ ಕೆಲಸ ಮುಗಿಸಿಕೊಂಡು ಬರುತ್ತಿದ್ದಾಗ ಕುಸಿದು ಬಿದ್ದ ಪರಿಣಾಮ ಈಗ ಅವರಿಗೆ ನಡೆಯಲು ಕೂಡಾ ಸಾಧ್ಯವಾಗುತ್ತಿಲ್ಲ. ಹೆಣ್ಮಕ್ಕಳು ಬೀಡಿ ಕಟ್ಟಿ ಗಳಿಸುವ ಆದಾಯ ಅವರ ಮಕ್ಕಳ ಖರ್ಚಿಗೂ ಸಾಕಾಗುತ್ತಿಲ್ಲ, ಈಗ ಹೊಟ್ಟೆಪಾಡಿಗಾಗಿ ಅರೈವತ್ತೈದು ವರ್ಷದ ಖತೀಜಮ್ಮ ಅಲ್ಲಿ ಇಲ್ಲಿ ಮನೆಕೆಲಸ ಹುಡುಕಿಕೊಂಡು ಹೋಗುವಂತಾಗಿದೆ. ಕೆಲವೊಂದು ಸಂದರ್ಭದಲ್ಲಿ ಕುಟುಂಬದ ಎಲ್ಲರೂ ಉಪವಾಸದಿಂದ ದಿನಗಳೆದದ್ದೂ ಇದೆ. ನೆರೆ ಹೊರೆಯವರು, ಸಂಬಂಧಿಕರು ಇವರ ಬಗ್ಗೆ ಕರುಣೆ ತೋರಿದರೂ ಅವರ ಸಂಸಾರವನ್ನು ಸರಿದೂಗಿಸಲು ಸಾಧ್ಯವಾಗುತ್ತಿಲ್ಲ.
ಅಲ್ಲದೆ ಪಡಿತರ ಚೀಟಿಯಿಂದ ಸಿಗುವ ಸೌಲಭ್ಯಗಳೂ ಕೂಡಾ ಈಗ ಇವರಿಗೆ ಸಿಗುತ್ತಿಲ್ಲ. ಕಾರಣವೆಂದರೆ ಕೆಲವು ಸಮಯಗಳ ಹಿಂದೆ ಹೊಸ ಪಡಿತರ ಚೀಟಿಗಾಗಿ ಭಾವಚಿತ್ರ ತೆಗೆಯುವ ಸಂದರ್ಭದಲ್ಲಿ ಹಸೈನಾರ್ ಅವರು ಕುಸಿದು ಬಿದ್ದ ಪರಿಣಾಮ ಯಾರಿಗೂ ಭಾವಚಿತ್ರ ತೆಗೆಸಲು ಕೂಡಾ ಸಾಧ್ಯವಾಗಿರಲಿಲ್ಲ. ಆದರೆ ಆ ಬಗ್ಗೆ ಖತೀಜಮ್ಮ ಪಂಚಾಯ್ತಿಗೆ ತೆರಳಿ ಈ ಬಗ್ಗೆ ಕೇಳಿದರೆ ನೆಮ್ಮದಿ ಕೇಂದ್ರಕ್ಕೆ ಅರ್ಜಿಕೊಡಲು ಅವರು ತಿಳಿಸಿದ್ದಾರೆ. ನೆಮ್ಮದಿ ಕೇಂದ್ರಕ್ಕೆ ಹೋದರೂ ಇವರ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳದ ಜನ ದಿನಾ ಅಲೆದಾಡಿಸುತ್ತಲೇ ಇದ್ದಾರೆ. ಅಲ್ಲದೆ ಸರಕಾರದಿಂದ ಸಿಗುವ ವೃದ್ಧಾಪ್ಯ ವೇತನದ ಮಾಹಿತಿಯನ್ನು ಇವರಿಗೆ ಯಾರೂ ತಿಳಿಸುವವರಿಲ್ಲದಂತಾ ಗಿದೆ.
ಒಟ್ಟಾರೆಯಾಗಿ ಬಡತನದ ತೂಗುಯ್ಯಾಲೆಯಲ್ಲಿ ನಲುಗಿ ಹೋದ ಈ ಮುಸ್ಲಿಂ ಕುಟುಂಬಕ್ಕೆ ಈಗ ಸಂಸಾರದ ಬಂಡಿಯನ್ನು ಸಾಗಿಸಲು ಸಹಾಯದ ಅತ್ಯಗತ್ಯ ಇದೆ. ಸಂಘ ಸಂಸ್ಥೆಗಳು, ಸಮಾಜ ಸೇವಕರು ಹಾಗೂ ಮುಸ್ಲಿಂ ಸಂಘಟನೆಗಳು ಮುಂದೆ ಬಂದು ಬಡತನದ ಬೇಗೆಯಲ್ಲಿರುವ ಕುಟುಂಬಕ್ಕೆ ಸಹಾಯ ಹಸ್ತ ನೀಡಬೇಕಾಗಿದೆ. ಸಹಾಯ ಮಾಡಲಿಚ್ಚಿಸುವವರು
ಮಂಚಿ, ಕುಕ್ಕಾಜೆಯಲ್ಲಿರುವ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಖತೀಜಮ್ಮ ಅವರ ಖಾತೆ ಸಂಖ್ಯೆ 224, ಇದಕ್ಕೆ ಕಳುಹಿಸಿಕೊಡಬಹುದು ಅಥವಾ ಹಸೈನಾರ್ ಮೊಬೈಲ್ ನಂಬರ್ 9535433619 ಇದನ್ನು ಕೂಡಾ ಸಂಪರ್ಕಿಸಬಹುದಾಗಿದೆ. ನೊಂದ ಕುಟುಂಬಕ್ಕೆ ನೆರವಾಗಲು ಓದುಗರಿಗೆ, ದಾನಿಗಳಿಗೆ ಪತ್ರಿಕೆ ಮನವಿ ಮಾಡಿಕೊಂಡಿದೆ.
ಕಿರಿಯ ಮಗಳ ಶಿಕ್ಷಣಕ್ಕೂ ಕುತ್ತು
ಮನೆಯಲ್ಲಿ ಬಡತನ ತಾಂಡವವಾಡುತ್ತಿದ್ದರೂ ಹಸೈನಾರ್ ಅವರ ಕೊನೆಯ ಮಗಳಾದ ಹಾಜಿರಾ(16) ಹತ್ತನೆಯ ತರಗತಿಯವರೆಗೆ ಶಿಕ್ಷಣವನ್ನು ಛಲದಿಂದ ಮುಂದುವರಿಸಿದ್ದರೂ ಈಗ ಅದಕ್ಕೂ ಕಷ್ಟವಾಗಿದೆ.ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಈ ಸಮಯದಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಲು ಮನೆಯವರು ಒತ್ತಾಯಿಸುತ್ತಿದ್ದಾರೆ. ಆದರೆ ಹಲವಾರು ಕನಸುಗಳನ್ನು ಹೊತ್ತುಕೊಂಡ ಈ ಹೆಣ್ಣು ಮಗಳಿಗೆ ಇನ್ನಷ್ಟು ಓದಿ ಜೀವನದಲ್ಲಿ ಮುಂದೆ ಬಂದು ಕುಟುಂಬವನ್ನು ಬಡತನದಿಂದ ಮೇಲೆ ತರಬೇಕೆಂಬುದು ಆಕೆಯ ಬಯಕೆ. ಆದರೆ ಆಕೆಯ ಕನಸು ನನಸಾಗುವುದೋ?

-jayakirana

No comments: