VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 27, 2010

ಬಾಬರಿ ಮಸೀದಿ ಧ್ವಂಸ ಬಳಿಕ ಅಡ್ವಾಣಿ ಸಂಭ್ರಮ ಆಚರಿಸಿದ್ದರು!

ಕೋರ್ಟ್ ಮುಂದೆ ಪೊಲೀಸ್ ಅಧಿಕಾರಿ ಸಾಕ್ಷಿ
ರಾಯ್ಬರೇಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ಕೃಷ್ಣ ಅಡ್ವಾಣಿ ಅವರ ಪ್ರಚೋದನಕಾರಿ ಭಾಷಣ ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣವಾಗಿದ್ದು, ಧ್ವಂಸದ ಬಳಿಕ ಅಡ್ವಾಣಿ ಸಹಿತ ಕೆಲವು ಬಿಜೆಪಿ ನಾಯಕರು ಸಂಭ್ರಮಾಚರಣೆ ಮಾಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ನಿನ್ನೆ ವಿಶೇಷ ಕೋರ್ಟ್ ಮುಂದೆ ಸಾಕ್ಷಿ ನುಡಿದಿದ್ದಾರೆ.
1992ರ ಡಿಸೆಂಬರ್ ಆರರಂದು ಮಸೀದಿ ಧ್ವಂಸವಾದ ಸ್ಥಳದಿಂದ 150-200 ಕಿ. ಮೀ ದೂರವಿರುವ ರಾಮ್ ಕಥಾ ಮಂಜ್ ಕುಂಜ್ನಲ್ಲಿ ಅಡ್ವಾಣಿ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದರು ಎಂದು ಅಂಜು ಗುಪ್ತಾ ವಿಶೇಷ ಸಿಬಿಐ ಕೋರ್ಟ್ ಮುಂದೆ ಸಾಕ್ಷ್ಯ ನುಡಿದಿದ್ದಾರೆ.
ಬಾಬರಿ ಮಸೀದಿ ಇರುವ ಸ್ಥಳದಲ್ಲಿ ಮಂದಿರವನ್ನು ನಿರ್ಮಿಸಲೇ ಬೇಕು ಎಂದು ಅಡ್ವಾಣಿ ಭಾಷಣದಲ್ಲಿ ಹೇಳಿದ್ದರು ಎಂದು 1992ರ ಡಿಸೆಂಬರ್ ಆರರಂದು ಅಡ್ವಾಣಿ ಅವರಿಗೆ ವೈಯುಕ್ತಿಕ ಭದ್ರತಾ ಅಧಿಕಾರಿಯಾಗಿದ್ದ ಗುಪ್ತಾ ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಅಡ್ವಾಣಿ, ಬಿಜೆಪಿ ನಾಯಕ ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಮತ್ತು ಸಂಘ ಪರಿವಾರದ ಹಲವಾರು ಮಂದಿ ನಾಯಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಮಾ ಮತ್ತು ಬಿಜೆಪಿಯ ವಿನಯ್ ಕಟಿಯಾರ್ ಕೂಡ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಗುಪ್ತಾ ಹೇಳಿದ್ದಾರೆ.
ಬಾಬರಿ ಮಸೀದಿ ಧ್ವಂಸಗೊಂಡ ಬಳಿಕ ಈ ನಾಯಕರು ಪರಸ್ಪರ ಅಪ್ಪಿಕೊಂಡು, ಸಿಹಿ ಹಂಚಿ ಸಂಭ್ರಮವನ್ನಾಚರಿಸಿದ್ದರು ಎಂದು ಅಂಜು ಗುಪ್ತಾ ನ್ಯಾಯಾಧೀಶರ ಮುಂದೆ ಸಾಕ್ಷಿ ಹೇಳಿದ್ದಾರೆ.
-jayakirana

No comments: