ಇಂಧನ ಬೆಲೆ ಏರಿಕೆ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತಿರುವ ಯುಪಿಎ ಮಿತ್ರಪಕ್ಷಗಳಾದ ಡಿಎಂಕೆ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು, ತಾವು ಮೈತ್ರಿಕೂಟದಲ್ಲಿ ಮುಂದುವರೆಯುವುದಾಗಿ ಮಂಗಳವಾರ ಸ್ಪಷ್ಟಪಡಿಸಿವೆ.
ಕೋಲ್ಕತ್ತ/ಚೆನ್ನೈ (ಪಿಟಿಐ): ಈ ವಿಷಯದಲ್ಲಿ ಮೈತ್ರಿಕೂಟದೊಳಗೇ ಅಸಮಾಧಾನವಿದೆ ಎಂಬ ವರದಿ ಬೆನ್ನಲ್ಲಿಯೇ ಯುಪಿಎ ಮಿತ್ರಪಕ್ಷಗಳು ಸರ್ಕಾರಕ್ಕೆ ಅಪಾಯವಿಲ್ಲ ಎಂದು ಸ್ಪಷ್ಟಪಡಿಸಿವೆ.
ಈ ವಿಷಯದಲ್ಲಿ ನಾವು ಜಗಳ ಮಾಡಲು ಇಷ್ಟಪಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮದೇ ಆದ ನಿಲುವು ಹೊಂದಿರುತ್ತವೆ. ಅದೇ ರೀತಿ ನಮ್ಮ ಪಕ್ಷ ಕೂಡ ಬೆಲೆ ಏರಿಕೆ ವಿಷಯದಲ್ಲಿ ತನ್ನ ಅನಿಸಿಕೆ ವ್ಯಕ್ತಪಡಿಸಿದೆ’ ಎಂದು ರೈಲ್ವೆಸಚಿವೆ ಮಮತಾ ಬ್ಯಾನರ್ಜಿ ಅವರು ಕೋಲ್ಕತಾದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ನಾವು ಯಾವಾಗಲೂ ಜನರ ಪರವಾಗಿದ್ದೇವೆ. ಇಂಧನ ಬೆಲೆ ಏರಿಕೆಯಾದಲ್ಲಿ ಅದು ಜನಜೀವನದ ಮೇಲೆ ಪರಿಣಾಮ ಬೀರುತ್ತದೆ’ ಎಂದರು.
ಇನ್ನೊಂದೆಡೆ ಚೆನ್ನೈನಲ್ಲಿ ಮುಖ್ಯಮಂತ್ರಿ ಕರುಣಾನಿಧಿ ಅವರ ಮಗಳು ಕನಿಮೋಳಿ ಕೂಡ ಇದೇ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
Mar 3, 2010
Subscribe to:
Post Comments (Atom)
No comments:
Post a Comment