VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 18, 2010

ನೈಸ್ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಿ: ಪ್ರತಿಪಕ್ಷಗಳಿಗೆ ಸಿ‌ಎಂ ಮನವಿ

ಬೆಂಗಳೂರು, ಮಾ.೧೭: ಮೂಲ ಒಪ್ಪಂದಕ್ಕಿಂತ ಒಂದು ಗುಂಟೆ ಹೆಚ್ಚು ಭೂಮಿಯನ್ನು ನೈಸ್ ಸಂಸ್ಥೆಗೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮೊದಲು ನೈಸ್ ರಸ್ತೆ ನಿರ್ಮಾಣವಾಗಲು ಅವಕಾಶ ನೀಡಿ ಎಂದು ಪ್ರತಿಪಕ್ಷಗಳಲ್ಲಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ನ ಉಪನಾಯಕ ಟಿ.ಬಿ. ಜಯಚಂದ್ರ ಬಜೆಟ್ ಮೇಲೆ ಚರ್ಚೆ ಮಾಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ, ಮೂಲ ಒಪ್ಪಂದದಂತೆ ೨೦೧೯೩ ಎಕರೆಯನ್ನು ನೈಸ್ ಸಂಸ್ಥೆಗೆ ನೀಡಲು ಸರಕಾರ ಬದ್ಧವಾಗಿದೆ. ಒಂದೊಂದು ಸರಕಾರ ಬಂದಾಗ ಒಂದೊಂದು ಒಪ್ಪಂದ ಮಾಡಿಕೊಳ್ಳ ಲಾಗಿದೆ. ಅದರಂತೆ ಈವರೆಗೆ ೨೫,೩೫೦ ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಮ್ಮ ಸರಕಾರ ನ್ಯಾಯಾಲಯದ ಆದೇಶ ಮತ್ತು ಮೂಲ ಒಪ್ಪಂದ ದಂತೆ ಮಾತ್ರ ಭೂಮಿ ನೀಡಲಾ ಗುತ್ತದೆ. ಹೆಚ್ಚುವರಿಯಾಗಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯನ್ನು ರೈತರಿಗೆ ವಾಪಸ್ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ಮೊದಲು ಯೋಜನೆ ಜಾರಿಗೆ ಅವಕಾಶ ನೀಡಿ, ಯೋಜನೆ ಜಾರಿಯಾಗದೆ ಸ್ಥಗಿತವಾದರೆ ಜಾಗತಿಕ ಮಟ್ಟದಲ್ಲಿ ರಾಜ್ಯ ನಗೆಪಾಟಲಿಗೀಡಾಗಬೇಕಾಗುತ್ತದೆ. ನೈಸ್ ವಿಷಯದಲ್ಲಿ ಹೆಚ್ಚಿನ ಚರ್ಚೆ ಅಗತ್ಯವಿದ್ದರೆ ಅಧಿವೇಶನ ಮುಗಿದ ನಂತರ ವಿಶೇಷ ಸಭೆ ನಡೆಸಲು ತಾನು ಸಿದ್ಧ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಮೂಲ ಒಪ್ಪಂದಕ್ಕಿಂತ ಒಂದು ಗುಂಟೆ ಹೆಚ್ಚು ಭೂಮಿ ನೀಡಿದರೂ ತಾನು ಒಂದು ಕ್ಷಣ ಅಧಿಕಾರದಲ್ಲಿ ಮುಂದುವರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

No comments: