ಜೀವ ಭಯದ ಕಾರಣದಿಂದ ಹಲವು ತಿಂಗಳಿಂದ ವಿದೇಶಗಳಲ್ಲೆ ಉಳಿದಿದ್ದ ಫಾರೂಕ್, ಬ್ಯಾಂಕಾಕ್‌ನಿಂದ ಬುಧವಾರ ಬೆಂಗಳೂರಿಗೆ ಬಂದು ಗುಪ್ತ ಸ್ಥಳವೊಂದರಿಂದ ದೂರವಾಣಿ ಮೂಲಕ ‘ಪ್ರಜಾವಾಣಿ’ ಜೊತೆ ಮಾತನಾಡಿದರು.
ಕೋಲಾರ: ‘ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿ ರು ವಾಗಲೇ ಸದನ ಸಮಿತಿ ರಚಿಸಿ ನನ್ನ ವಿರುದ್ಧ ವಾಗ್ದಂಡನೆ ನಿರ್ಣಯ ವಿಧಿಸುವ ತೀರ್ಮಾನ ಕೈಗೊಂಡಿರುವುದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇನೆ’ ಎಂದು ಕೆಜಿಎಫ್ ಶಾಸಕ ವೈ.ಸಂಪಂಗಿ ವಿರುದ್ಧದ ಲೋಕಾಯುಕ್ತ ದಾಳಿ ಪ್ರಕರಣದ ಫಿರ್ಯಾದಿ ಫಾರೂಕ್ ಹೇಳಿದ್ದಾರೆ.
ಜೀವ ಭಯದ ಕಾರಣದಿಂದ ಹಲವು ತಿಂಗಳಿಂದ ವಿದೇಶಗಳಲ್ಲೆ ಉಳಿದಿದ್ದ ಫಾರೂಕ್, ಬ್ಯಾಂಕಾಕ್‌ನಿಂದ ಬುಧವಾರ ಬೆಂಗಳೂರಿಗೆ ಬಂದು ಗುಪ್ತ ಸ್ಥಳವೊಂದರಿಂದ ದೂರವಾಣಿ ಮೂಲಕ ‘ಪ್ರಜಾವಾಣಿ’ ಜೊತೆ ಮಾತನಾಡಿದರು.
‘ಸರ್ಕಾರವೇ ರಚಿಸಿರುವ ಸಂಸ್ಥೆ ಲೋಕಾಯುಕ್ತ. ನನ್ನ ವಿರುದ್ಧ ಆತುರದ ತೀರ್ಮಾನವನ್ನು ಕೈಗೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತವನ್ನು ಸರ್ಕಾರ ಸಂಪರ್ಕಿಸಿ ಅಗತ್ಯ ಸಲಹೆ, ಮಾಹಿತಿ ಪಡೆದೇ ಇಲ್ಲ. ಸಾಮಾನ್ಯ ವ್ಯಕ್ತಿಯೊಬ್ಬನನ್ನು ಹೀಗೆ ಸರ್ಕಾರ ಹಿಂಸಿಸುವುದಾದರೆ ಜನತೆ ಭ್ರಷ್ಟರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದನ್ನೆ ಬಿಟ್ಟುಬಿಡುತ್ತಾರೆ.
ವಾಗ್ದಂಡನೆ ನಿರ್ಧಾರದ ಮೂಲಕ ಇಂಥದೊಂದು ಕೆಟ್ಟ ಸಂದೇಶವನ್ನು ನೀಡಿದಂತಾಗಿದೆ. ಆದರೆ ನಾನಂತೂ ಸುಮ್ಮನಿರುವುದಿಲ್ಲ’ ಎಂದರು.
‘ಜನ ಹೆದರಿಸುತ್ತಾರೆ ಎಂದು ದೇಶ ಬಿಟ್ಟು ವಿದೇಶಗಳಲ್ಲಿ ಇರುವುದು ಸರಿಯಲ್ಲ. ದೇಶದಲ್ಲೆ ಇದ್ದು ಸನ್ನಿವೇಶಗಳನ್ನು ಎದುರಿಸುವುದು ಪ್ರಕರಣದ ಫಲಿತಾಂಶ ದೃಷ್ಟಿಯಿಂದ ಮುಖ್ಯ. ವಾಪಸ್ ಬನ್ನಿ ಎಂದು ಲೋಕಾಯುಕ್ತ ಅಧಿಕಾರಿಗಳು ನೀಡಿದ ಸಲಹೆ ಮೇರೆಗೆ ಬೆಂಗಳೂರಿಗೆ ಬಂದಿರುವೆ. ಒಂದು ತಿಂಗಳ ಕಾಲ ಇಲ್ಲೇ ಇರುವೆ’ ಎಂದು ಹೇಳಿದರು.
‘ಜಂಟಿ ಸದನ ಸಮಿತಿಯ ಮುಂದೆ ವಿಚಾರಣೆಗೆ ಹಾಜರಾಗಿಲ್ಲ ಎಂದು ಸರ್ಕಾರ ಏಪಪಕ್ಷೀಯ ನಿರ್ಧಾರ ಕೈಗೊಂಡಿದೆ. ಆದರೆ ವಿಧಾನಸೌಧದ ಬಾಗಿಲಲ್ಲಿ ರೌಡಿಗಳನ್ನು ನಿಲ್ಲಿಸಿದರೆ ನಾನು ಹೇಗೆ ಬರಲು ಸಾಧ್ಯ? ಲೋಕಾಯುಕ್ತ ಕಚೇರಿಯಲ್ಲೆ ವಿಚಾರಣೆ ನಡೆಸಿ ಎಂದು ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಕೋರಿದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.
ಸುಬ್ಬಯ್ಯ ವಕೀಲಿ: ‘ನನ್ನ ಪರವಾಗಿ ವಕಾಲತ್ತು ವಹಿಸಲು ವಿಧಾನ ಪರಿಷತ್ ಮಾಜಿ ಸದಸ್ಯ, ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಒಪ್ಪಿದ್ದಾರೆ. ಪ್ರಕರಣದ ಎಲ್ಲ ವಿವರಗಳನ್ನೂ ಅವರಿಗೆ ವಿವರಿಸಿದ್ದೇನೆ. ಅವರೊಡನೆ ಚರ್ಚಿಸಿದ ಬಳಿಕ ಹೈಕೋರ್ಟಿಗೆ ದೂರು ಸಲ್ಲಿಸುತ್ತೇನೆ. ಲೋಕಾಯುಕ್ತ ಅಧಿಕಾರಿಗಳನ್ನು ಗುರುವಾರ ಭೇಟಿ ಮಾಡಲಿದ್ದೇನೆ’ ಎಂದರು.
ನಿರಶನ: ‘ಪ್ರಕರಣದಿಂದ ನೊಂದ ನನ್ನ ತಂದೆಗೆ ಹೃದಯಾಘಾತವಾಗಿದೆ. ಗರ್ಭಿಣಿಯಾಗಿದ್ದ ನನ್ನ ಹೆಂಡತಿಯ ಪ್ರಾಣಕ್ಕೆ ಕುತ್ತು ಬರಬಹುದು ಎಂದು ಭಯಪಟ್ಟು ಹೆರಿಗೆಗಾಗಿ ಚೀನಾಕ್ಕೆ ಕಳುಹಿಸಿದ್ದೆ. ತ್ರಿವಳಿ ಮಕ್ಕಳು ಹುಟ್ಟಿವೆ. ನನ್ನ ಉದ್ಯೋಗ, ಸ್ಥಾನಮಾನಕ್ಕೂ ಚ್ಯುತಿ ಬಂದಿದೆ. ನನ್ನ ವಿರುದ್ಧವಷ್ಟೆ ಅಲ್ಲದೆ, ನನ್ನ ಕುಟುಂಬದ ಸದಸ್ಯರ ವಿರುದ್ಧವೂ ಸೇಡು ತೀರಿಸಿಕೊಳ್ಳುವ ಅಪಾಯಕಾರಿ ಹುನ್ನಾರಗಳಿಂದ ಘಾಸಿಗೊಂಡಿದ್ದೇನೆ. ನನಗೆ ರಕ್ಷಣೆಯೇ ಇಲ್ಲದಂತಾಗಿದೆ.
ನ್ಯಾಯಾಲಯದ ಮೆಟ್ಟಿಲೇರುವುದಷ್ಟೆ ಅಲ್ಲ, ನನಗೆ ನ್ಯಾಯ ಸಿಗುವವರೆಗೂ ನಿರಶನ ನಡೆಸಲೂ ನಿರ್ಧರಿಸಿದ್ದೇನೆ. ದಿನಾಂಕವನ್ನು ಶೀಘ್ರದಲ್ಲೆ ಪ್ರಕಟಿಸುವೆ’ ಎಂದರು.
Mar 18, 2010
Subscribe to:
Post Comments (Atom)
No comments:
Post a Comment