VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 20, 2010

ಗೋಹತ್ಯೆ ನಿಷೇಧ: ಕೋಲಾಹಲದ ನಡುವೆ ಮಸೂದೆ ಪಾಸ್

ವಿರೋಧ ಪಕ್ಷಗಳ ಗದ್ದಲ-ಗಲಾಟೆಗಳ ನಡುವೆಯೇ 'ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಮಸೂದೆ-2010'ಕ್ಕೆ ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ಪಡೆದುಕೊಳ್ಳಲಾಗಿದೆ.ಈ ಕಾಯ್ದೆ ಜಾರಿಯಾದ ನಂತರ ಆರೋಗ್ಯವಂತ ಜಾನುವಾರು ಹತ್ಯೆ ಮತ್ತು ಮುಕ್ತ ಸಾಗಾಣಿಕೆ ನಿರ್ಬಂಧಕ್ಕೊಳಪಡುತ್ತದೆ. ಆಕಳು, ಕರು, ಹೋರಿ, ಎತ್ತು, ಎಮ್ಮೆ, ಅದರ ಕರು ಮತ್ತು ಕೋಣಗಳನ್ನು ಹತ್ಯೆ ಮಾಡುವುದು ಅಥವಾ ಹತ್ಯೆಗೆ ಅವಕಾಶ ನೀಡುವುದು ಹಾಗೂ ಗೋ ಮಾಂಸ ಸಂಗ್ರಹಣೆ ಕಾನೂನು ವಿರೋಧಿ ಚಟುವಟಿಕೆ ಎಂದು ಪರಿಗಣಿಸಲ್ಪಡುತ್ತದೆ.ಇದನ್ನು ಉಲ್ಲಂಘಿಸಿದವರಿಗೆ ಏಳು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ಒಂದು ಲಕ್ಷ ರೂಪಾಯಿಯವರೆಗೆ ದಂಡ, ಪರಿಶೀಲನೆಯ ಹಕ್ಕನ್ನು ತಹಶೀಲ್ದಾರರು ಮತ್ತು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಅವರಿಗೆ ನೀಡುವ ನಿಯಮಾವಳಿ ಈ ಕಾಯ್ದೆಯಲ್ಲಿದೆ.ಗುಜರಾತ್, ಮಧ್ಯಪ್ರದೇಶ, ಛತ್ತೀಸಗಢ ಮತ್ತು ಜಮ್ಮು-ಕಾಶ್ಮೀರಗಳಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದು, ಕರ್ನಾಟಕವೂ ಅದೇ ಸಾಲಿಗೆ ಸೇರ್ಪಡೆಯಾಗಲಿದೆ.ಪ್ರತಿಪಕ್ಷಗಳಿಂದ ಕೋಲಾಹಲ...ಈಗಾಗಲೇ ವಿಧಾನ ಪರಿಷತ್ತಿನಲ್ಲಿ ಮಂಡನೆಯಾಗಿರುವ ಮಸೂದೆಯನ್ನು ವಿಧಾನಸಭೆಯಲ್ಲಿ ಶುಕ್ರವಾರ ಪಶು ಸಂಗೋಪನಾ ಸಚಿವ ರೇವುನಾಯಕ ಬೆಳಮಗಿ ಮಂಡಿಸಿದ ಬಳಿಕ ಸುದೀರ್ಘ ಚರ್ಚೆ ನಡೆಯಿತು.ಈ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಾಯಕರು ಸರಕಾರದ ಮೇಲೆ ಕಿಡಿ ಕಾರಿದ್ದು, ಇದು ಒಂದು ಸಮುದಾಯವನ್ನು ಮೆಚ್ಚಿಸುವ ಯತ್ನವಾಗಿದ್ದು, ಸಂವಿಧಾನ ವಿರೋಧಿ ಮಸೂದೆಯಾಗಿದೆ. ಇದನ್ನು ಹಿಂದಕ್ಕೆ ಪಡೆಯಬೇಕು ಎಂದು ಸಿದ್ಧರಾಮಯ್ಯ ಸೇರಿದಂತೆ ಹಲವರು ಒತ್ತಾಯಿಸಿದರು.ಕಾಂಗ್ರೆಸ್ ಮತ್ತು ಜೆಡಿಎಸ್‌ನ ಬಹುತೇಕ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿ ಯಾವ ರೀತಿಯ ವಾದ ಮಂಡಿಸಿದರೂ ಸರಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗದೆ ಮಸೂದೆಯನ್ನು ಧ್ವನಿಮತಕ್ಕೆ ಹಾಕುವ ನಿರ್ಧಾರಕ್ಕೆ ಬರಲಾಯಿತು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಗದ್ದಲ ಎಬ್ಬಿಸುತ್ತಾ ಸ್ಪೀಕರ್ ಬಳಿ ತೆರಳಿ ಮಸೂದೆಯ ಪ್ರತಿಯನ್ನು ಹರಿದೂ ಬಿಸಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.ವಿರೋಧ ಪಕ್ಷಗಳು ಮಸೂದೆಯನ್ನು ಮತಕ್ಕೆ ಹಾಕಬೇಕೆನ್ನುವ ಬೇಡಿಕೆಗೆ ಸಭಾಧ್ಯಕ್ಷರು ನಕಾರ ಸೂಚಿಸಿದರಲ್ಲದೆ, ನೇರವಾಗಿ ಧ್ವನಿಮತಕ್ಕೆ ಹಾಕಿ ವಿಧೇಯಕಕ್ಕೆ ಅಂಗೀಕಾರ ಸಿಕ್ಕಿದೆ ಎಂದು ಪ್ರಕಟಿಸಿದರು.ನೋವುಂಟು ಮಾಡುವ ಉದ್ದೇಶವಿಲ್ಲ...ಹೊಸ ಕಾನೂನನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈ ಕಾಯ್ದೆಯನ್ನು ಯಾವುದೇ ಒಂದು ಸಮುದಾಯಕ್ಕೆ ನೋವು ತರುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿಲ್ಲ. ಗೋ ಸಂಪತ್ತು ರಕ್ಷಿಸುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ ಎಂದಿದ್ದಾರೆ.ಇಂದಿರಾ ಗಾಂಧಿಯವರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿಯೇ ಎಲ್ಲಾ ರಾಜ್ಯಗಳಿಗೂ ಪತ್ರ ಬರೆದು ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಂತೆ ಒತ್ತಾಯಿಸಿದ್ದರು. ಹೀಗಾಗಿ ಹೈಕೋರ್ಟ್, ಸುಪ್ರೀಂ ಕೋರ್ಟುಗಳು ಈ ಹಿಂದೆ ಗೋ ಹತ್ಯೆ ಕುರಿತಂತೆ ನೀಡಿರುವ ತೀರ್ಪುಗಳು ಮತ್ತು ಸಂವಿಧಾನದ 48ನೇ ವಿಧಿಯನುಸಾರ ನೂತನ ಕಾನೂನನ್ನು ರಾಜ್ಯ ಸರಕಾರ ಜಾರಿಗೆ ತರುತ್ತಿದೆ ಎಂದರು.

No comments: