VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 20, 2010

ಮಂಗಳೂರು: ಅಕ್ರಮ ರಿವಾಲ್ವರ್ ತಂದು ದುಷ್ಕೃತ್ಯ ನಡೆಸಲು ಸಂಚು ರೂಪಿಸಿದ್ದ ಇಬ್ಬರು ಕಿಡಿಗೇಡಿಗಳ ಬಂಧನ.




ಮಂಗಳೂರು: ಅಕ್ರಮವಾಗಿ ರಿವಾಲ್ವರ್‌ ಮತ್ತು ಸಜೀವ ಗುಂಡುಗಳನ್ನು ಹೊಂದಿದ್ದ ಇಬ್ಬರು ಆರೋಪಿಗಳನ್ನು ಪಿಎಸ್‌ಐ ಪ್ರಕಾಶ್‌.ಕೆ ನೇತೃತ್ವದ ವಿಶೇಷ ಪತ್ತೆ ದಳವು ದಸ್ತಗಿರಿ ಮಾಡಿದೆ. ಬಂಧಿತರನ್ನು ಮಧ್ಯಪ್ರದೇಶ ಮೂಲದ ರಘುರಾಜ್‌ಸಿಂಗ್‌ ಭಾಗೆಲ್‌ ಟಿಲ್ಲು(27) ಮತ್ತು ಶ್ರೀಕಾಂತ್‌(25) ಎಂದು ಗುರುತಿಸಲಾಗಿದೆ. ಬಂಧಿತರಿಂದ ಪೊಲೀಸರು ಒಂದು ರಿವಾಲ್ವರ್‌ ಮತ್ತು 9 ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಮಾ. 19ರಂದು ಮಧ್ಯಾಹ್ನ 3 ಗಂಟೆ ವೇಳೆಗೆ ಅಳಪೆ ಗ್ರಾಮದ ಕಂಕನಾಡಿ ರೈಲ್ವೇ ಸ್ಟೇಶನ್‌ ಬಳಿ ಪಟೇಲ್‌ ಹೌಸ್‌ ಎಂಬಲ್ಲಿ ಅಕ್ರಮವಾಗಿ ರಿವಾಲ್ವರ್‌ ಹಾಗೂ ಸಜೀವ ಗುಂಡುಗಳನ್ನು ಹೊಂದಿದ್ದ ಆರೋಪಿ ರಘುರಾಜ್‌ಸಿಂಗ್‌ ಭಾಗೆಲ್‌ ಮತ್ತು ಶ್ರೀಕಾಂತ್‌ ಈ ರಿವಾಲ್ವರ್‌ನ್ನು ಮಧ್ಯಪ್ರದೇಶದ ಗ್ವಾಲಿಯರ್‌ನಿಂದ ಖರೀದಿಸಿ ಲಾಭದ ಉದ್ದೇಶ ಇರುವ ದುಷ್ಕತ್ಯ ನಡೆಸಲು ಮಂಗಳೂರಿಗೆ ತಂದಿದ್ದರು. ವಶಪಡಿಸಿಕೊಂಡ ರಿವಾಲ್ವರ್‌ ಹಾಗೂ ಸಜೀವ ಗುಂಡಿನ ಮೌಲ್ಯವನ್ನು ರೂ. 50,000 ಎಂದು ಅಂದಾಜಿಸಲಾಗಿದೆ. ಆರೋಪಿಗಳ ಮೇಲೆ ಶಸ್ತ್ರಾಸ್ತ್ರ ಕಾಯ್ದೆ ಅನ್ವಯ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್‌ ಸಿಬ್ಬಂದಿಯವರಾದ ಆನಂದ, ರಾಮ ಪೂಜಾರಿ, ಶೀನಪ್ಪ, ಚಂದ್ರಶೇಖರ, ಗಿರೀಶ್‌ ಬೆಂಗ್ರೆ, ಸುನಿಲ್‌ಕುಮಾರ್‌, ರಾಜೇಂದ್ರ ಪ್ರಸಾದ್‌, ಡೇವಿಡ್‌ ಡಿ ಸೋಜಾ, ಮಹಮ್ಮದ್‌ ಇಕ್ಬಾಲ್‌, ಹಾಗೂ ಚಾಲಕ ಶಿವ ನಾಯ್ಕ್‌ ಪಾಲ್ಗೊಂಡಿದ್ದರು.


ಇವರ ದುಷ್ಕೃತ್ಯ ನಡೆಸುವ ಸಂಚಿನ ಹಿಂದೆ ಇರುವ ಸಂಘಟನೆ ಅಥವಾ ವ್ಯಕ್ತಿಗಳ ಬಗ್ಗೆ ಪತ್ತೆ ಹಚ್ಚ ಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ.

No comments: