ಆಸ್ಟ್ರೇಲಿಯಾದಲ್ಲಿ ಭಾರತೀಯರ ಸುರಕ್ಷತೆಯೇ ಪ್ರಧಾನ ವಿಷಯ 
 
‘ನಮ್ಮ ರಾಷ್ಟ್ರದಲ್ಲಿ ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ನಡೆದರೂ ಅದನ್ನು ಎಳ್ಳಷ್ಟೂ ಸಹಿಸು ವುದಿಲ್ಲ’ ಎಂದು ಸ್ಮಿತ್ ಹೇಳಿದ್ದರೂ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಅಲ್ಲಿ ಹಲ್ಲೆಗಳು ಮುಂದುವರಿದಿ ರುವುದು ಭಾರತದ ಕಳವಳಕ್ಕೆ ಕಾರಣವಾಗಿದೆ.  
 
ನವದೆಹಲಿ (ಪಿಟಿಐ): ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಎಗ್ಗುಸಿಗ್ಗಿಲ್ಲದೇ ಮುಂದುವರಿದಿರುವ ಹಲ್ಲೆ ಪ್ರಕರಣಗಳು ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿರುವ ಸಂದರ್ಭದಲ್ಲಿ ಅಲ್ಲಿನ ವಿದೇಶಾಂಗ ಸಚಿವ ಸ್ಟೀಫನ್ ಸ್ಮಿತ್ ಇಲ್ಲಿಗೆ ಭೇಟಿ ನೀಡಿದ್ದು, ಬುಧವಾರ ಎಸ್.ಎಂ.ಕೃಷ್ಣ ಅವರೊಂದಿಗೆ ನಡೆಯುವ ಮಾತುಕತೆಯಲ್ಲಿ ಭಾರತೀಯರ ಸುರಕ್ಷತೆ  ಕುರಿತೇ ಪ್ರದಾನ ಚರ್ಚೆ ನಡೆಯುತ್ತದೆ.
ಸ್ಮಿತ್ ತಮ್ಮ ಮೂರು ದಿನಗಳ ಈ ಭೇಟಿ ವೇಳೆ, ಬರುವ ಅಕ್ಟೋ ಬರ್‌ನಲ್ಲಿ ಇಲ್ಲಿ ನಡೆಯುವ ಕಾಮನ್‌ವೆಲ್ತ್ ಕ್ರೀಡಾ ಕೂಟಕ್ಕಾಗಿ ಕೈಗೊಂಡಿರುವ ಭದ್ರತಾ ವ್ಯವಸ್ಥೆ, ಪರಸ್ಪರ ವಹಿವಾಟು ವೃದ್ಧಿ, ಹೂಡಿಕೆ ಮತ್ತಿತರ ವಿಷಯಗಳ ಕುರಿತೂ ಚರ್ಚಿಸುತ್ತಾರೆ. 
‘ನಮ್ಮ ರಾಷ್ಟ್ರದಲ್ಲಿ ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ನಡೆದರೂ ಅದನ್ನು ಎಳ್ಳಷ್ಟೂ ಸಹಿಸು ವುದಿಲ್ಲ’ ಎಂದು ಸ್ಮಿತ್ ಹೇಳಿದ್ದರೂ ಜನಾಂಗೀಯ ದ್ವೇಷದ ಹಿನ್ನೆಲೆಯಲ್ಲಿ ಅಲ್ಲಿ ಹಲ್ಲೆಗಳು ಮುಂದುವರಿದಿ ರುವುದು ಭಾರತದ ಕಳವಳಕ್ಕೆ ಕಾರಣವಾಗಿದೆ.
ಸ್ಮಿತ್ ಅವರು ಭಾರತದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ವಾಣಿಜ್ಯ- ಕೈಗಾರಿಕಾ ಸಚಿವ ಆನಂದ್ ಶರ್ಮ ಸೇರಿದಂತೆ ಹಲವು ಪ್ರಮುಖರೊಂದಿಗೆ ಮಾತುಕತೆ ನಡೆಸಲಿದ್ದಾರೆ.
Mar 3, 2010
Subscribe to:
Post Comments (Atom)
No comments:
Post a Comment