VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 18, 2010

ದ.ಕ. ಭೂಗತ ಜಗತ್ತಿನೊ೦ದಿಗೆ ನಂಟು: ಬೆಚ್ಚಿಬಿದ್ದ ಜನತೆ

ಚಿಕ್ಕಮಗಳೂರು, ಮಾ.೧೭: ಪಕ್ಕದ ದಕ್ಷಿಣ ಕನ್ನಡ ಮತ್ತು ಮುಂಬೈಯ ಭೂಗತ ಜಗತ್ತಿನೊಂದಿಗೆ ಕಾಫಿಯ ತವರಿನ ಕೆಲವರು ಹೊಂದಿರುವ ನಂಟು ಜನರನ್ನು ಬೆಚ್ಚಿಬೀಳಿಸಿದೆ. ಕೆಂಪನಹಳ್ಳಿಯ ಚಂದ್ರಕಟ್ಟೆ ಈಗ ಜನರ ಕುತೂಹಲದ ತಾಣವಾಗಿದೆ. ಮನೆಯನ್ನು ಬಾಡಿಗೆಗೆ ನೀಡುವಾಗ ಹತ್ತಾರು ಬಾರಿ ಯೋಚಿಸುವಂತೆ ಮಾಡಿದೆ.

ಚಿಕ್ಕಮಗಳೂರು ನಗರಕ್ಕೆ ಹೊಂದಿಕೊಂಡಿರುವ ಕೆಂಪನಹಳ್ಳಿಯ ಚಂದ್ರ ಕಟ್ಟೆಯ ಸೀತಾಲಕ್ಷ್ಮೀ ಸ್ಟೋರ್‍ಸ್ ಈಗ ಎಲ್ಲರ ಗಮನ ಸೆಳೆದ ಕೇಂದ್ರ. ಅಂಧ ಮಕ್ಕಳ ಶಾಲೆಯಲ್ಲಿ ಕೆಲಸ ನಿರ್ವಹಿಸು ತ್ತಿರುವ ಚಂದ್ರೇಗೌಡ ಚಂದ್ರಕಟ್ಟೆಯಲ್ಲಿ ಮನೆ ಹಾಗೂ ಅದಕ್ಕೆ ಹೊಂದಿಕೊಂಡಂತೆ ಅಂಗಡಿಯನ್ನು ಹೊಂದಿದ್ದಾರೆ.

ಜೊತೆಗೆ ಮನೆಯ ಮೇಲ್ಮಹಡಿಯನ್ನು ಒಂದು ತಿಂಗಳ ಹಿಂದೆ ಮಂಜುನಾಥ ಎನ್ನುವವರಿಗೆ ಬಾಡಿಗೆಗೆ ನೀಡಿದ್ದಾರೆ. ಮಂಜುನಾಥನ ಸಂಬಂಧಿಯೂ ಅಂಧ ಮಕ್ಕಳ ಶಾಲೆಯಲ್ಲೇ ಕೆಲಸ ಮಾಡುತ್ತಿರುವುದು. ಕಳೆದ ಕೆಲ ದಿನಗಳಿಂದ ಇಲ್ಲಿ ಮೂಲ ಬಾಡಿಗೆದಾರರು ಅಲ್ಲದೆ ಬೇರೆಯ ವರೂ ನೆಲೆಸಿದ್ದರು.

ಮನೆ ಮಾಲಕರು ಮಂಜುನಲ್ಲಿ ಕೇಳಿದಾಗ ತಮ್ಮ ಸ್ನೇಹಿತರು ಎನ್ನುವ ಉತ್ತರ ದೊರಕಿದೆ. ಇರಬಹುದು ಎಂದುಕೊಂಡು ಇವರ ಚಲನ ವಲನವನ್ನು ಗಂಭೀರ ವಾಗಿ ತೆಗೆದುಕೊಂಡಿರಲಿಲ್ಲ. ನಾಲ್ಕು ದಿನದ ಹಿಂದೆ ಇದ್ದಕ್ಕಿದ್ದಂತೆ ಮಂಗಳೂರಿನ ಸಿ.ಸಿ.ಬಿ. ಪೊಲೀಸರ ತಂಡ ಮನೆಯ ಮೇಲೆ ದಾಳಿ ನಡೆಸಿದಾಗ ಬಾಡಿಗೆ ಮನೆಯಲ್ಲಿ ಇರುವ `ನಿಗೂಢ ವ್ಯಕ್ತಿ'ಗಳ ಬಣ್ಣ ಬಯಲಾಗಿದೆ.

ಭೂಗತ ಜಗತ್ತಿನೊಂದಿಗೆ ಇದ್ದ ಸಂಪರ್ಕ ಬಯಲಾಗಿದೆ. ಮನೆಯಲ್ಲಿ ಇದ್ದ ವ್ಯಕ್ತಿ ದೇವರ ಆರಾಧಕ ನಾಗಿದ್ದು, ಹಣೆಗೆ ಕುಂಕುಮ ಹಚ್ಚಿಕೊಳ್ಳುತ್ತಿದ್ದ. ಬೆಳಗ್ಗೆ ೮ ಗಂಟೆಗೆ ಹೋದರೆ ಬರುತ್ತಿದ್ದುದು ರಾತ್ರಿ. ಕೆಲವೊಮ್ಮೆ ಸಂಜೆ. ಓಡಾಟವೆಲ್ಲ ಕಾರಿನಲ್ಲಿ ಎನ್ನುವ ಅಂಶವನ್ನು ಮನೆ ಮಾಲಕನ ಪತ್ನಿ ಸುಕ ನ್ಯಾ ತಿಳಿಸಿದ್ದಾರೆ.

ಮುಂಬೈಯವನಾದ ಈತನ ಮೂಲ ಹೆಸರು ರಾಕೇಶ್ ಮಿಶ್ರಾ ಅಲಿಯಾಸ್ ರೋಹನ್. ಇದನ್ನು ಹೇಳದೆ ಬೇರೆ ಹೆಸರು ಹೇಳಿಕೊಂಡಿದ್ದ. ಈತನಿಗೆ ಈ ಮೊದಲು ಚಿಕ್ಕಮಗಳೂರಿನಲ್ಲಿ ಇದ್ದು, ಈಗ ಬೆಂಗಳೂರಿನಲ್ಲಿ ನೆಲೆಸಿರುವ ಕರಿ ಮಂಜ, ಮಂಗಳೂರಿನ ಗಣೇಶ ಶೆಟ್ಟಿ ನಂಟೂ ಇದ್ದು, ಅವರೂ ಸೆರೆ ಸಿಕ್ಕಿದ್ದಾರೆ.

ಸಿ.ಸಿ.ಬಿ. ಪೊಲೀಸರು ಮಾಹಿತಿ ಸೋರಿಕೆ ಆಗಬಹುದು ಎನ್ನುವ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ ರಿಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಗುಪ್ತಚರ ಇಲಾಖೆಗೂ ವಾಸನೆ ಸಿಕ್ಕಿಲ್ಲ. ಬಂಧಿತರಿಂದ ಕಾರು, ೫೦ ಸಾವಿರ ರೂ. ನಗದು, ಲಾಂಗ್, ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.

ಸುದ್ದಿ ಮಾಧ್ಯಮಗಳಲ್ಲಿ ಆರೋಪಿಗಳ ಬಂಧನದ ಸುದ್ದಿ ಹೊರಬೀಳುತ್ತಿದ್ದಂತೆ ಜನರಲ್ಲಿ ಕುತೂಹ ಲ ಮೂಡಿದೆ. ಚಂದ್ರಕಟ್ಟೆಯತ್ತ ದೃಷ್ಟಿಹಾಯಿಸಿದ್ದಾರೆ. ಪ್ರಕರಣ ಜನತೆಯನ್ನೂ ಬೆಚ್ಚಿಬೀಳಿಸಿದೆ. ಮನೆಯನ್ನು ಬಾಡಿಗೆ ನೀಡುವಾಗ ಹತ್ತಾರು ಬಾರಿ ಯೋಚಿಸುವಂತೆ ಮಾಡಿದೆ. ಸ್ನೇಹಿತರೆಂದು ಮನೆಯನ್ನು ಬಾಡಿಗೆಗೆ ನೀಡಲಾಗಿತ್ತು. ಅದನ್ನು ಈ ರೀತಿ ದುರ್ಬಳಕೆ ಮಾಡಿಕೊಂಡರೆ ಹೇಗೆ ಎನ್ನುವ ಮಾಲಕರ ಪತ್ನಿಯ ಪ್ರಶ್ನೆಯೂ ಮಾರ್ಮಿಕವಾಗಿದೆ.

No comments: