ಉಡುಪಿ: ಮಗಳ ಮೇಲೆ ಅತ್ಯಾಚಾರ ಮಾಡಿದ ಆರೋಪ ದಲ್ಲಿ ಬಂಧಿತನಾದ ಸೇಸಪ್ಪ ಮಡಿವಾಳ(41)ನನ್ನು ಉಡುಪಿ ಪೊಲೀಸರು ನಿನ್ನೆ ನ್ಯಾಯಾಧೀಶರ ಮನೆಗೆ ಹಾಜರುಪಡಿಸಿ ದಾಗ ಆತನಿಗೆ ಒಂದು ದಿನದ ನ್ಯಾಯಾಂಗ ಬಂಧನ ವಿಧಿಸ ಲಾಗಿದೆ. ನಿನ್ನೆ ಯುಗಾದಿ ನಿಮಿತ್ತ ನ್ಯಾಯಾಲಯಕ್ಕೆ ರಜೆ ಇದ್ದ ಕಾರಣ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ಇಂದು ಮತ್ತೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸರು ತಮ್ಮ ವಶಕ್ಕೆ ಕೇಳುವ ಸಂಭವ ಇದೆ.
ಕಳೆದ 20 ವರ್ಷಗಳಿಂದ ಸೇಸಪ್ಪ ಮಡಿವಾಳ ಸೆಲೂನ್ ನಡೆಸಿಕೊಂಡು ಬಂದಿದ್ದು ಪರಿಸರದಲ್ಲಿ ಉತ್ತಮ ಹೆಸರು ಪಡೆದಿದ್ದ. ಸಾಮಾಜಿಕ ಚಟುವಟಿಕೆ ಗಳಲ್ಲಿ ಭಾಗವಹಿಸುತ್ತಿದ್ದ. ಆತನ ಸೆಲೂನಿಗೆ ಹತ್ತಿರದ ಊರಿನಿಂದಲೂ ಜನ ಬರುತ್ತಿದ್ದರು. ಈತನ ಬಗ್ಗೆ ಈತನಕ ಯಾವುದೇ ಕ್ರಿಮಿನಲ್ ಆರೋಪಗಳಾಗಲಿ ಹೆಣ್ಣು ಮಕ್ಕಳ ಕುರಿತು ಆಶ್ಲೀಲವಾಗಿ ವರ್ತಿಸಿದ ದೂರುಗಳಿಲ್ಲ ಎನ್ನಲಾಗಿದೆ. ಇದೀಗ ತನ್ನ ಮಗಳ ಮೇಲೆಯೇ ಅತ್ಯಾಚಾರ ಮಾಡುವ ಮೂಲಕ ಈ ಎಲ್ಲಾ ಉತ್ತಮ ಅಂಶಗಳಿಗೆ ಅಂತ್ಯಹಾಡಿದ್ದಾನೆ.
ಉಡುಪಿ ಜಿಲ್ಲೆಯಲ್ಲಿ 2ನೇ ಪ್ರಕರಣ
ಮಗಳ ಮೇಲೆ ಅತ್ಯಾಚಾರ ಎಸಗಿದ ಎರಡನೇ ಪ್ರಕರಣ ಇದು. ಈ ಹಿಂದೆ ಕಾಪು ಪೊಲೀಸ್ ಠಾಣಾ ವ್ಯಾಪ್ತಿಯ ಯೆಲ್ಲೂರಿನಲ್ಲಿ ಇಂತಹುದೇ ಒಂದು ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಆರೋಪಿ ತಂದೆಗೆ ನ್ಯಾಯಾಲಯ ಶಿಕ್ಷೆ ಕೂಡಾ ಆಗಿತ್ತು.
Mar 17, 2010
Subscribe to:
Post Comments (Atom)
No comments:
Post a Comment