ಮೂಲ್ಕಿ: ಜಮಾತ್ ಕಮಿಟಿಯ ನಿರ್ಧಾರದಂತೆ ಕಾರ್ನಾಡು ಮಸೀ ದಿಯ ಧರ್ಮಗುರುಗಳನ್ನು ಏಕಾಏಕಿ ವರ್ಗಾವಣೆ ಮಾಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಮದರಸದ ವಿದ್ಯಾರ್ಥಿ ಗಳು, ಹೆತ್ತವರು, ಜನಪ್ರತಿ ನಿಧಿಗಳು ಸಮಿತಿಯ ನಿರ್ಧಾರವನ್ನು ಬದಲಿ ಸಬೇಕೆಂದು ಪಟ್ಟು ಹಿಡಿದ ಘಟನೆ ನಿನ್ನೆ ಮೂಲ್ಕಿಯಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಯಿತು.
ಕಾರ್ನಾಡು ಮಸೀದಿಯಲ್ಲಿ ಕಳೆದ ಒಂಭತ್ತು ವರ್ಷದಿಂದ ಗುರು ಗಳಾಗಿ ಮದರಸದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನೀಡುತ್ತಿದ್ದ ಅನೀಫ್ ಸಹದಿಯವರನ್ನು ಮೂಲ್ಕಿ ಜಮಾತ್ ಕಮಿಟಿಯವರು ವರ್ಗಾವಣೆ ಮಾಡಲು ಆಡಳಿತ ಸಭೆಯಲ್ಲಿ ತೀರ್ಮಾನಿಸಿದ್ದರು. ಆದರೆ ಕಾರಣ ವನ್ನು ಸ್ಪಷ್ಟವಾಗಿ ನೀಡದಿದ್ದರಿಂದ ಅವರ ಅನುಯಾಯಿಗಳಿಗೆ ಕೆರಳಿಸಿತ್ತು. ಈ ಬಗ್ಗೆ ನಿನ್ನೆ ಸ್ಪಷ್ಟ ನಿರ್ಧಾರ ಕೈ ಗೊಳ್ಳಬೇಕು ಎಂದು ಸಾರ್ವಜನಿಕವಾಗಿ ಮದರಸದ ಮಕ್ಕಳು, ಅವರ ಹೆತ್ತವರು, ಮಹಿಳೆಯರ ಸಹಿತ ಮೂಲ್ಕಿ ನಗರ ಪಂಚಾಯತ್‌ನ ಸದಸ್ಯ ಸ್ಥಳೀಯ ನಾಯಕ ಪುತ್ತುಬಾವ ಮತ್ತು ಹಿರಿಯರಾದ ಎಮ್.ಕೆ.ಬಾವ ನೇತೃತ್ವದಲ್ಲಿ ಆಡಳಿತ ಮಂಡಳಿಯ ತೀರ್ಮಾನಕ್ಕೆ ಶಾಂತಿಯಿಂದಲೇ ಕಾರ್ನಾಡು ಮಸೀದಿಯ ಮುಂಭಾಗದಲ್ಲಿ ಸಭೆ ಸೇರಿ ವಿರೋಧಿಸಿದರು.
ಕಾರ್ನಾಡಿನಲ್ಲಿ ವಿದ್ಯಾರ್ಥಿಗಳಿಗೆ ಗುರುಗಳಾದ ಅನೀಫ್ ಸಹದಿಯವರ ಬಗ್ಗೆ ಯಾವುದೇ ದೂರುಗಳಿಲ್ಲ ಎನ್ನುವುದು ಸ್ಥಳೀಯರ ವಾದ.
ಕಾರ್ನಾಡು, ಅಂಗರಗುಡ್ಡೆ, ಕೊಲ್ನಾಡು, ಮೂಲ್ಕಿ ಮಸೀದಿಗಳು ಜಮಾತೆ ಕಮಿಟಿಯ ಆಡಳಿತಕ್ಕೆ ಬರುವುದರಿಂದ ಇದು ಕಮಿಟಿಯ ಸರ್ವಾನುಮತದ ತೀರ್ಮಾನ ಅಲ್ಲದೇ ಈವರೆಗೆ ಗುರುಗಳಾಗಿ ಬಂದವರು ಇ.ಕೆ.ಪಂಗಡವರು. ಆದರೆ ಕಳೆದ ಎರಡು ವರ್ಷದಿಂದ ಗುರುಗಳು ಎ.ಪಿ.ಪಂಗಡಕ್ಕೆ ಬೆಂಬಲಿಸಿದ್ದಾರೆ ಎಂಬ ಭಾವನೆ ಇರುವುದರಿಂದ ಇದು ಮುಂದೆ ಘರ್ಷಣೆಗೆ ಕಾರಣವಾಗುವ ಲಕ್ಷಣ ಕಂಡಿದ್ದರಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಅಬ್ಬಾಸಾಲಿ ಮತ್ತು ಸದಸ್ಯ ಬಿ.ಎಂ.ಆಸಿಫ್ ಸ್ಪಷ್ಟನೆ ನೀಡಿದರು.
ಮೂಲ್ಕಿ ವೃತ್ತ ನಿರೀಕ್ಷಕ ಶಿವಪ್ರಕಾಶ್ ನಾಯಕ್ ಮತ್ತು ಸಬ್‌ಇನ್ಸ್‌ಪೆಕ್ಟರ್ ಮುನಿಸ್ವಾಮಿ ನೀಲಕಂಠಯ್ಯರವರು ಸ್ಥಳದಲ್ಲಿ ಎರಡೂ ವಾದಗಳನ್ನು ಆಲಿಸಿ ಸ್ಪಷ್ಟ ನಿರ್ಧಾರಕ್ಕೆ ಬರದಿದ್ದರಿಂದ ಎರಡು ಗುಂಪಿನ ಪ್ರಮುಖರನ್ನು ಠಾಣೆಗೆ ಕರೆಯಿಸಿ ಮಾತುಕತೆ ನಡೆಸಿದರು. ಗುರುಗಳನ್ನು ಮುಂದಿನ ಮೇ ತಿಂಗಳ ವರೆಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವರ್ಗಾವಣೆ ಮಾಡಬಾರದು ಮತ್ತು ಆ ನಂತರ ಅವರನ್ನು ವರ್ಗಾವಣೆ ಮಾಡುವ ನಿರ್ಧಾರ ಹೊಸ ಆಡಳಿತ ಮಂಡಳಿಯ ಮೇಲಿರಲಿ ಎಂದು ಅಂತಿಮವಾಗಿ ತೀರ್ಮಾನಿಸಿ ಸಮಸ್ಯೆಗೆ ತೆರೆ ಎಳೆಯಲಾಯಿತು.

No comments:
Post a Comment