VISHWA KANNADIGA NEWS - ವಿಶ್ವ ಕನ್ನಡಿಗ ನ್ಯೂಸ್

ವಿಶ್ವ ಕನ್ನಡಿಗ ನ್ಯೂಸ್ ಈಗ ಹೊಸ ತಾಣದಲ್ಲಿ

ಆತ್ಮೀಯ ಓದುಗರೇ ವಿಶ್ವ ಕನ್ನಡಿಗ ನ್ಯೂಸ್ ಓದಲು ಈ ಕೆಳಕಂಡ ಲಿಂಕ್ ಅನ್ನು ಕ್ಲಿಕ್ ಮಾಡಿರಿ...





http://www.vknewz.com

Mar 17, 2010

ಕ್ಯಾಲಿಸ್, ಉತ್ತಪ್ಪ ಅಬ್ಬರ: ಕುಂಬ್ಳೆ ಪಡೆಗೆ ಗೆಲುವು



ಅನುಭವಿ ಆಟಗಾರ ಜಾಕ್ ಕ್ಯಾಲಿಸ್ ಮತ್ತು ರಾಬಿನ್ ಉತ್ತಪ್ಪ ಅವರ ಭರ್ಜರಿ ಆಟದ ಪ್ರದರ್ಶನದಿಂದಾಗಿ, ರಾಯಲ್ ಚಾಲೆಂಜರ್ಸ್ ತಂಡ ಕಿಂಗ್ಸ್ ಪಂಜಾಬ್ ಎಲೆವನ್ ವಿರುದ್ಧ ಎಂಟು ವಿಕೆಟ್‌ಗಳಿಂದ ಸೋಲಿಸಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಯ ಪಂದ್ಯದಲ್ಲಿ ಮೊದಲ ಬಾರಿಗೆ ಜಯ ದಾಖಲಿಸಿದೆ‌.

ಎದುರಾಳಿ ತಂಡದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕುಂಬ್ಳೆ ನೇತೃತ್ವದ ಪಡೆ, ಆರಂಭಿಕ ಬ್ಯಾಟ್ಸ್‌ಮೆನ್‌ಗಳಾದ ಅನುಭವಿ ಆಟಗಾರ ಕ್ಯಾಲಿಸ್ ಮತ್ತು ಮನೀಷ್ ಪಾಂಡೆ(38) ಜೋಡಿ 8.1 ಓವರ್‌ಗಳಲ್ಲಿ 74 ರನ್‌ಗಳನ್ನು ಪೇರಿಸಿ, ಇರ್ಫಾನ್ ಪಠಾಣ್ ಅವರ ಎಸೆತಗಳಲ್ಲಿ ಕ್ಯಾಲಿಸ್ ಮೂರು ಬೌಂಡರಿಗಳನ್ನು ಚಚ್ಚಿದರು.

ಆರಂಭಿಕ ಆಟಗಾರರಾದ ಮನೀಷ್ ಪಾಂಡೆ (38) ಮತ್ತು ಜಾಕ್ ಕ್ಯಾಲಿಸ್ (ಅಜೇಯ89)ರನ್‌ಗಳನ್ನು ಪೇರಿಸಿ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಉತ್ತಮ ಆರಂಭ ನೀಡಿದರು.ಮನೀಷ್ ಪಾಂಡೆ 26 ಎಸೆತಗಳನ್ನು ಎದುರಿಸಿ 2 ಬೌಂಡರಿ 3 ಸಿಕ್ಸರ್‌ಗಳೊಂದಿಗೆ 38 ರನ್‌ಗಳನ್ನು ಪೇರಿಸಿ ಔಟಾದರು.

ಜಾಕ್ ಕ್ಯಾಲಿಸ್ 55 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 5 ಸಿಕ್ಸರ್‌ಗಳೊಂದಿಗೆ 89 ರನ್‌ಗಳನ್ನು ಪೇರಿಸಿ ಔಟಾಗದೆ ಉಳಿದರು.

ನಂತರ ಬಂದ ರಾಬಿನ್ ಉತ್ತಪ್ಪ 21 ಎಸೆತಗಳಲ್ಲಿ 4 ಬೌಂಡರಿ ಹಾಗೂ 4 ಸಿಕ್ಸರ್‌ಗಳೊಂದಿಗೆ ಆಕ್ರಮಣಕಾರಿ ಆಟವಾಡಿ ತಮ್ಮ ಅರ್ಧಶತಕವನ್ನು ಪೂರೈಸಿದರು.ವಿರಾಟ್ ಕೊಹ್ವಿ 12 ಎಸೆತಗಳಲ್ಲಿ 16 ರನ್‌ ಗಳಿಸಿದರು.

ರಾಯಲ್ ಚಾಲೆಂಜರ್ಸ್ ತಂಡ 19.5 ಓವರ್‌ಗಳ ಮುಕ್ತಾಯಕ್ಕೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು 204 ರನ್‌ಗಳನ್ನು ಪೇರಿಸಿ ಜಯ ದಾಖಲಿಸಿತು.

ಎದುರಾಳಿ ತಂಡದ ಚಾವ್ಲಾ ಮತ್ತು ಬಿಪುಲ್ ಶರ್ಮಾ ತಲಾ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಇದಕ್ಕಿಂತ ಮೊದಲು ಕಿಂಗ್ಸ್ ಎಲೆವನ್ ತಂಡದ ಆರಂಭಿಕ ಆಟಗಾರರಾದ ರವಿ ಬೋಪಾರಾ (77) ಮತ್ತು ಮನವಿಂದರ್ ಬಿಸ್ಲಾ(75) ಅವರ ಅರ್ಧಶತಕಗಳ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 203 ರನ್‌ಗಳ ಬೃಹತ್ ಸ್ಕೋರ್‌ ದಾಖಲಿಸಿತು. ಆದರೆ ಕ್ಯಾಲಿಸ್ ಮತ್ತು ಉತ್ತಪ್ಪ ಜೋಡಿ ಬಾಲಿವುಡ್ ನಟಿ ಪ್ರೀತಿ ಜಿಂಟಾ ಅವರ ತಂಡದ ಕನಸನ್ನು ನುಚ್ಚುನೂರಾಗಿಸಿತು.

No comments: