Mar 17, 2010
ಟಿಕೆಟ್ ಸಿಗದ ನಿರಾಸೆ: ಅಭ್ಯರ್ಥಿ ಪತಿಗೆ ಹೃದಯಾಘಾತ!
ಟಿಕೆಟ್ ನೀಡುವುದಾಗಿ ಘೋಷಿಸಿ ಕೊನೆಗಳಿಗೆಯಲ್ಲಿ ಬಿ ಫಾರಂ ನೀಡದಿದ್ದರಿಂದ ಆಘಾತಗೊಂಡ ಅಭ್ಯರ್ಥಿಯ ಪತಿ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ.ಬಿಬಿಎಂಪಿ ಚುನಾವಣೆಯಲ್ಲಿ ವೀಣಾ ವಿಶ್ವನಾಥ್ ಎಂಬುವರಿಗೆ ಟಿಕೆಟ್ ನೀಡುವುದಾಗಿ ಕಾಂಗ್ರೆಸ್ ಅಧಿಕೃತವಾಗಿ ಘೋಷಿಸಿತ್ತು. ಆದರೆ ಕೊನೆ ಗಳಿಗೆಯಲ್ಲಿ ಕೈ ಕೊಟ್ಟ ಪಕ್ಷದ ವರಿಷ್ಠರು ಉಮಾ ಭಾಯಿ ಎಂಬಾಕೆಗೆ ಬಿ ಫಾರಂ ನೀಡಿದ್ದರು. ಇದರಿಂದ ಆಘಾತಗೊಂಡ ಪತಿ ವಿಶ್ವನಾಥ್ ಹೃದಯಾಘಾತಕ್ಕೆ ಒಳಗಾಗಿದ್ದರು.ವೀಣಾ ವಿಶ್ವನಾಥ್ ಅವರಿಗೆ ರಾಜಮಹಲ್ ಗುಟ್ಟಹಳ್ಳಿ ವಾರ್ಡ್ ನಂ.64ರಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವುದಾಗಿ ಘೋಷಿಸಿತ್ತು. ರಾಜಕೀಯ ಒತ್ತಡಕ್ಕೆ ಮಣಿದ ಕಾಂಗ್ರೆಸ್ ಕೊನೆಗೂ ಕೈಕೊಟ್ಟಿತ್ತು. ಇದೀಗ ವಿಶ್ವನಾಥ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಸಾಕಷ್ಟು ಕಸರತ್ತು ನಡೆಸಿದ ನಂತರ 198ವಾರ್ಡ್‌ಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿತ್ತು. ಆದರೆ ಆಕಾಂಕ್ಷಿಗಳು ಹೆಚ್ಚಿದ್ದರಿಂದ, ಪಕ್ಷದ ನಿಷ್ಠಾವಂತರನ್ನು ಬಿಟ್ಟು ಪಕ್ಷದ ವರಿಷ್ಠರು ಟಿಕೆಟ್ ನೀಡಿರುವುದು ಬಂಡಾಯಕ್ಕೆ ಎಡೆಮಾಡಿಕೊಟ್ಟಿದೆ.ಬಂಡಾಯದ ಬಿಸಿ ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲ, ಆಡಳಿತಾರೂಢ ಬಿಜೆಪಿಗೂ ಅದರ ಬಿಸಿ ಮುಟ್ಟಿದೆ. ಆದರೆ ಜೆಡಿಎಸ್ ಮಾತ್ರ ಸಣ್ಣ-ಪುಟ್ಟ ಅಸಮಾಧಾನಗಳನ್ನು ಬಗೆಹರಿಸಿಕೊಂಡು 195ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
Subscribe to:
Post Comments (Atom)
No comments:
Post a Comment